ಕರ್ನಾಟಕ

karnataka

ದೇವನಹಳ್ಳಿ ಬಳಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ

By

Published : Sep 30, 2020, 11:14 PM IST

'ದೇವನಹಳ್ಳಿ - ಚಿಕ್ಕಬಳ್ಳಾಪುರ ಜಿಲ್ಲೆಯ ಮುಖ್ಯ ರಸ್ತೆಯ ನಂದಿಕ್ರಾಸ್ ಬಳಿ ಇರುವ ಪಾರಿವಾಳದ ಗುಡ್ಡದ ಸ್ಥಳದಲ್ಲಿ 4 ಎಕರೆ ಭೂ ಪ್ರದೇಶವನ್ನು ಇಂದು ಪರಿಶೀಲಿಸಲಾಗಿದ್ದು, ಈ ಸ್ಥಳವು ರಂಗಮಂದಿರ ನಿರ್ಮಾಣಕ್ಕೆ ಉತ್ತಮ ಹಾಗೂ ಪೂರಕ ವಾತಾವರಣ ಹೊಂದಿದೆ ಮತ್ತು ಕಲಾವಿದರಿಗೆ ಅನೂಕೂಲವಾದ ಸ್ಥಳವಾಗಿದೆ'

Construction of District Theater near Devanahalli
ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆಯಲ್ಲಿ ತೊಡಗಿರುವ ಟಿ.ಎಸ್. ನಾಗಾಭರಣ

ದೇವನಹಳ್ಳಿ :ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣವಾಗಲಿದ್ದು, ದೇವನಹಳ್ಳಿ ಹೊರವಲಯ ಪಾರಿವಾಳದ ಗುಡ್ಡದ ಬಳಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು.

ರಾಜ್ಯ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, 60 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುವುದು.

ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆಯಲ್ಲಿ ತೊಡಗಿರುವ ಟಿ.ಎಸ್. ನಾಗಾಭರಣ

ಅದರಂತೆ ಬೆಂಗಳೂರು ಉತ್ತರ ಭಾಗದಲ್ಲಿ ದೇವನಹಳ್ಳಿ ತಾಲೂಕು ಇರುವುದರಿಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ರಂಗಮಂದಿರ ಇಲ್ಲದಿರುವುದರಿಂದ 2020ರ ಸೆ. 09 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಎಕರೆ ಭೂ ಪ್ರದೇಶದಲ್ಲಿ ರೂ.15 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.

ದೇವನಹಳ್ಳಿ-ಚಿಕ್ಕಬಳ್ಳಾಪುರ ಜಿಲ್ಲೆಯ ಮುಖ್ಯ ರಸ್ತೆಯ ನಂದಿಕ್ರಾಸ್ ಬಳಿ ಇರುವ ಪಾರಿವಾಳದ ಗುಡ್ಡದ ಸ್ಥಳದಲ್ಲಿ 4 ಎಕರೆ ಭೂ ಪ್ರದೇಶವನ್ನು ಇಂದು ಪರಿಶೀಲಿಸಲಾಗಿದ್ದು, ಈ ಸ್ಥಳವು ರಂಗಮಂದಿರ ನಿರ್ಮಾಣಕ್ಕೆ ಉತ್ತಮ ಹಾಗೂ ಪೂರಕ ವಾತಾವರಣವನ್ನು ಹೊಂದಿದೆ ಮತ್ತು ಕಲಾವಿದರಿಗೆ ಅನೂಕೂಲವಾದ ಸ್ಥಳವಾಗಿದೆ ಎಂದ ನಾಗಾಭರಣ, ಸ್ಥಳ ಪರಿಶೀಲನೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ

ಸ್ಥಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details