ಕರ್ನಾಟಕ

karnataka

ಚೆನ್ನೈಗೆ ಹೊರಟ ಪ್ರಯಾಣಿಕನ ಬ್ಯಾಗ್​​ನಲ್ಲಿ 13 ಜೀವಂತ ಗುಂಡು ಪತ್ತೆ..ಮುಂದೇನಾಯ್ತು

By

Published : Jan 4, 2021, 12:58 PM IST

Updated : Jan 4, 2021, 1:28 PM IST

13 bullets found in a passenger bag from Bangalore to Chennai
ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಪ್ರಯಾಣಿಕನ ಬ್ಯಾಗ್ ನಲ್ಲಿ 13 ಜೀವಂತ ಗುಂಡು ಪತ್ತೆ

12:49 January 04

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಚೆನೈಗೆ ಹೊರಟಿದ್ದರು. ಸಿಐಎಸ್ ಎಫ್ ಅಧಿಕಾರಿಗಳು ಪ್ರಯಾಣಿಕರನ್ನ ತಪಾಸಣೆ ನಡೆಸುವಾಗ ಎಲ್. ನಂದೇಶ್ವರ್ ಲಗೇಜ್ ಬ್ಯಾಗ್ ಸ್ಕ್ಯಾನ್ ನಲ್ಲಿ 13 ಜೀವಂತ ಗುಂಡು ಮತ್ತು ಪಿಸ್ತೂಲ್ ಪತ್ತೆಯಾಗಿದೆ.

ದೇವನಹಳ್ಳಿ : ಬೆಂಗಳೂರು ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ  ಹೊರಟಿದ್ದ ಪ್ರಯಾಣಿಕನ ಬ್ಯಾಗ್​​ನಲ್ಲಿ 13 ಜೀವಂತ ಗುಂಡುಗಳು ಪತ್ತೆಯಾಗಿವೆ.  

ವ್ಯಕ್ತಿಯನ್ನ ಸಿಐಎಸ್​​ಎಫ್ ಅಧಿಕಾರಿಗಳು  ವಶಕ್ಕೆ  ಪಡೆದಿದ್ದಾರೆ. ವಶದಲ್ಲಿರುವ ವ್ಯಕ್ತಿಯನ್ನ ಚೆನ್ನೈ ಮೂಲದ ಎಲ್.  ನಂದೇಶ್ವರ್ ಎಂದು ಗುರುತಿಸಲಾಗಿದ್ದು, ಇವನನ್ನ ಏರ್ ಪೋರ್ಟ್​​​​ನಲ್ಲಿ ಸಿಐಎಸ್ ಎಫ್  ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ   ಚೆನೈಗೆ  ಹೊರಟಿದ್ದರು. ಸಿಐಎಸ್ ಎಫ್  ಅಧಿಕಾರಿಗಳು  ಪ್ರಯಾಣಿಕರನ್ನ  ತಪಾಸಣೆ  ನಡೆಸುವಾಗ  ಎಲ್. ನಂದೇಶ್ವರ್  ಲಗೇಜ್  ಬ್ಯಾಗ್  ಸ್ಕ್ಯಾನ್ ನಲ್ಲಿ 13 ಜೀವಂತ  ಗುಂಡು  ಮತ್ತು ಪಿಸ್ತೂಲ್  ಪತ್ತೆಯಾಗಿವೆ.  

ಓದಿ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಇಡಿ ಕಚೇರಿಗೆ ಮುತ್ತಿಗೆ: ಸ್ಥಳದಲ್ಲಿ ಬಿಗಿ ಭದ್ರತೆ

ಪಾಯಿಂಟ್  32 ಎಂಎಂ ಪಿಸ್ತೂಲ್​​ಗೆ ಸಂಬಂಧಿಸಿದ ಗುಂಡುಗಳಾಗಿದ್ದು ಎಲ್,  ನಂದೇಶ್ವರ್  ನನ್ನು  ವಶಕ್ಕೆ  ಪಡೆದ ಅಧಿಕಾರಿಗಳು  ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಪೊಲೀಸರಿಗೆ ನೀಡಿದ್ದಾರೆ. ವಿಚಾರಣೆ  ಸಮಯದಲ್ಲಿ  ಪಿಸ್ತೂಲ್​​​​ಗೆ  ಸಂಬಂಧಿಸಿದ ಸೂಕ್ತ  ದಾಖಲೆಗಳನ್ನ  ತೋರಿಸಿದ ಹಿನ್ನೆಲೆ  ವ್ಯಕ್ತಿಯನ್ನ  ಬಿಟ್ಟುಕಳುಹಿಸಿದ್ದಾರೆ.

Last Updated :Jan 4, 2021, 1:28 PM IST

TAGGED:

bullet

ABOUT THE AUTHOR

...view details