ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಮಹಿಳೆ ಮೇಲೆ ಬೀದಿಯಲ್ಲೇ ನಡೀತು ಮಾರಣಾಂತಿಕ ಹಲ್ಲೆ!

By

Published : Sep 30, 2019, 12:09 PM IST

ನವನಗರದ ವಾಂಬೆ ಕಾಲೋನಿಯಲ್ಲಿ ಮಾಟ-ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿದೆ. ಪರಸ್ಪರರು ರಸ್ತೆಯಲ್ಲಿ ನಿಂತು ಬಡಿದಾಡಿಕೊಂಡಿದ್ದಾರೆ.

ಗಲಾಟೆ

ಬಾಗಲಕೋಟೆ: ಮಾಟ ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿ, ಪರಸ್ಪರ ಹೂಡೆದಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಾಟ ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ

ನವನಗರದ ವಾಂಬೆ ಕಾಲೋನಿಯಲ್ಲಿ ಮನೆ ಮುಂದೆ ಮಾಟಮಂತ್ರದ ನಿಂಬೆ ಹಣ್ಣು ಇಟ್ಟ ದುಷ್ಕರ್ಮಿಗಳ ಬಗ್ಗೆ ಮನೆ ಯಜಮಾನಿ ಬೈಯುತ್ತಿದ್ದುದು ಗಲಾಟೆಗೆ ಕಾರಣವಾಗಿದೆ. ಕಾಶಿಬಾಯಿ‌ ಎಂಬ ಮಹಿಳೆ ಮನೆಯ ಮುಂದೆ ಮಂತ್ರದ ಲಿಂಬೆ ಹಣ್ಣು‌ ನೋಡಿ, ನಿಂದಿಸುತ್ತಿದ್ದ ವೇಳೆ ಶುರುವಾದ ಪಕ್ಕದ ಮನೆಯವರ ಜಗಳ ವಿಕೋಪಕ್ಕೆ ತಿರುಗಿ, ಘರ್ಷಣೆಗೆ ಕಾರಣವಾಗಿದೆ.

ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿವೋರ್ವ ಕೋಲಿನಿಂದ ಕಾಶಿಬಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅಶೋಕ್​ ರೊಳ್ಳಿ, ಶ್ರೀಕಾಂತ್, ಶ್ರೀಶೈಲ್, ಶಿವು, ಎಂಬುವರಿಂದ ಕಾಶಿಬಾಯಿ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ, ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದು, ಎರಡು ಕಡೆಯವರ ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details