ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿ ಮೃತದೇಹ ಪತ್ತೆ

By

Published : Mar 18, 2021, 1:27 PM IST

ಬಾಗಲಕೋಟೆಯ ವಿದ್ಯಾಗಿರಿಯ 16ನೇ ಕ್ರಾಸ್​​​ನಲ್ಲಿನ‌ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಹಡಿಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿ ಮೃತದೇಹ ಪತ್ತೆ
Man dead body found in Bagalkot

ಬಾಗಲಕೋಟೆ:ಇಲ್ಲಿನ ವಿದ್ಯಾಗಿರಿಯ 16ನೇ ಕ್ರಾಸ್​​​ನಲ್ಲಿ‌ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಹಡಿಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

ಬಾಗಲಕೋಟೆಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿ ಮೃತದೇಹ ಪತ್ತೆ

ಮೃತ ವ್ಯಕ್ತಿಯನ್ನು ಶೇಖಪ್ಪ ನಡಗಡ್ಡಿ (40) ಎಂದು ಗುರುತಿಸಲಾಗಿದ್ದು, ತಾಲೂಕಿನ ನಕ್ಕರಗುಂದಿ ಗ್ರಾಮದ ನಿವಾಸಿಯಾಗಿದ್ದಾನೆ. ವ್ಯಕ್ತಿಯ ತಲೆ ನುಜ್ಜು ಗುಜ್ಜಾಗಿದ್ದು, ಕಳೆದ ಎರಡ್ಮೂರು ದಿನಗಳಿಂದ ಈತ ಮನೆಯಲ್ಲಿ ಜಗಳವಾಡಿ ಕುಡಿದು ಪ್ರತಿದಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗುತ್ತಿದ್ದ ಎಂದು ತಿಳಿದು ಬಂದಿದೆ.

ಓದಿ: ಬೆಂಗಳೂರಲ್ಲಿ ಕಂಟ್ರೋಲ್​ಗೆ ಸಿಗದ ಕೊರೊನಾ: ಇಂದು 930 ಜನರಿಗೆ ಸೋಂಕು

ಘಟನಾ ಸ್ಥಳಕ್ಕೆ ನವನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತನ ಸಂಬಂಧಿಕರು‌, ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details