ರೋಮ್:ವಿಶ್ವದ ನಂ.1 ಜೋಕೊವಿಕ್ ಮತ್ತು ನಂ. 3ನೇ ಶ್ರೇಯಾಂಕದ ರಾಫೆಲ್ ನಡಾಲ್ ನಡುವೆ ಇಟಾಲಿಯನ್ ಓಪನ್ ಫೈನಲ್ನಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಪೈಪೋಟಿ ನಡೆಯಲಿದೆ.
ಶನಿವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ 18 ಗ್ರ್ಯಾಂಡ್ಸ್ಲಾಮ್ ವಿಜೇತ ಜೋಕೋವಿಕ್ ಸ್ಥಳೀಯ ಆಟಗಾರ ಲೊರೆಂಜೋ ಸೊನೆಗೊ ವಿರುದ್ಧ 6-3, 6-7(5), 6-2ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು.
ಇದಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿಫೈನಲ್ನಲ್ಲಿ 20 ಗ್ರ್ಯಾಂಡ್ ಸ್ಲಾಮ್ ವಿಜೇತ ರಾಫೆಲ್ ನಡಾಲ್ ಅಮೆರಿಕಾದ ರೀಲೆ ಒಪೆಲ್ಕಾ ವಿರುದ್ಧ 6-4,6-4ರ ನೇರ ಸೆಟ್ಗಳ ಅಂತರದ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಇದೀಗ ನಡಾಲ್ ಮತ್ತು ಜೋಕೋವಿಕ್ ಭಾನುವಾರ ರಾತ್ರಿ ನಡೆಯುವ ಫೈನಲ್ ಕದನದಲ್ಲಿ ಮುಖಾಮುಖಿಯಾಗಲಿದ್ದಾರೆ.
ನಡಾಲ್ ಮತ್ತು ಜೋಕೊವಿಕ್ ಒಟ್ಟು 5 ಬಾರಿ ಇಟಾಲಿಯನ್ ಓಪನ್ ಫೈನಲ್ನಲ್ಲಿ ಎದುರುಬದುರಾಗಿದ್ದು, ಸ್ಪೇನ್ ಆಟಗಾರ 3ರಲ್ಲಿ ಜಯಿಸಿದ್ದರೆ ಜೋಕೊವಿಕ್ 2 ಬಾರಿ ಚಾಂಪಿಯನ್ ಆಗಿದ್ದರು. ನಡಾಲ್ ಇಂದು ತಮ್ಮ 10ನೇ ಪ್ರಶಸ್ತಿಗೆ ಪೈಪೋಟಿ ನಡೆಸಿದರೆ, ಜೋಕೊವಿಕ್ಗೆ ಇದು 6ನೇ ಪ್ರಶಸ್ತಿಯಾಗಲಿದೆ.
ಇದನ್ನು ಓದಿ:ಇಟಾಲಿಯನ್ ಓಪನ್ 2021..12ನೇ ಬಾರಿ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್