ಕರ್ನಾಟಕ

karnataka

ಯೂಥ್​ ವರ್ಲ್ಡ್ ಚಾಂಪಿಯನ್‌ಶಿಪ್‌: 13 ವರ್ಷದ ಯುವರಾಜ್​ ಸಿಂಗ್​ಗೆ ಕಂಚು

By

Published : Aug 22, 2022, 10:24 AM IST

ಮಲೇಷ್ಯಾದಲ್ಲಿ ನಡೆದ ಮೌ ಥಾಯ್​ ಸ್ಪರ್ಧೆಯಲ್ಲಿ ಛತ್ತೀಸ್​ಗಢದ 13 ವರ್ಷದ ಯುವರಾಜ್​ ಸಿಂಗ್​ ಕಂಚಿನ ಸಾಧನೆ ಮಾಡಿದ್ದಾರೆ. ಸೆಮಿಫೈನಲ್​ನಲ್ಲಿ ಉಜ್ಬೆಕಿಸ್ತಾನದ ಸ್ಪರ್ಧಿ ಎದುರು ಸೋಲು ಕಂಡು ಚಿನ್ನದಿಂದ ವಂಚಿತರಾಗಿದ್ದರು.

youth-world-champ
ಮೌ ಥಾಯ್​ ಸ್ಪರ್ಧೆ

ಬಸ್ತಾರ್:ಮಲೇಷ್ಯಾದಲ್ಲಿ ನಡೆದ ಐಎಫ್‌ಎಂಎ ಮೌಥಾಯ್ ಯೂಥ್​ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಛತ್ತೀಸ್​ಗಢದ 13 ವರ್ಷದ ಯುವರಾಜ್​ ಸಿಂಗ್​ ಕಂಚಿನ ಪದಕ ಜಯಿಸಿದ್ದಾರೆ. 71 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಿದ್ದ ಸಿಂಗ್ ಇವರು​ ಉಜ್ಬೆಕಿಸ್ತಾನದ ಆಟಗಾರನ ಎದುರು ಸೋಲು ಕಾಣುವ ಮೂಲಕ ಕಂಚಿಗೆ ತೃಪ್ತಿಪಟ್ಟರು.

ಬಳಿಕ ಮಾತನಾಡಿದ ಯುವರಾಜ್​ ಸಿಂಗ್​, "ವಿಶ್ವ ಚಾಂಪಿಯನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿ ಪಂದ್ಯವೂ ಹೊಸ ಅನುಭವವನ್ನು ನೀಡಿದೆ. ಚಿನ್ನದ ಪದಕವನ್ನು ಮಿಸ್​ ಮಾಡಿಕೊಂಡಿದ್ದೇನೆ. ಮುಂದಿನ ಬಾರಿ ಈ ಆಸೆಯನ್ನು ಪೂರೈಸುತ್ತೇನೆ" ಎಂದು ಹೇಳಿದರು.

ಕಂಚು ಗೆದ್ದ ಯುವರಾಜ್​ ಸಿಂಗ್​

"ನಾನು ಬಾಕ್ಸಿಂಗ್​ ಹೆಚ್ಚು ಸಾಧನೆ ಮಾಡಲು ರಿಂಗ್​ನಲ್ಲಿ 4 ಗಂಟೆಗೂ ಅಧಿಕ ಕಾಲ ಶ್ರಮಿಸುತ್ತೇನೆ. ಕುಟುಂಬ ಮತ್ತು ನನ್ನ ತರಬೇತುದಾರರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಇದರಿಂದ ನಾನು ಸಾಧನೆ ಮಾಡಲು ನೆರವಾಯಿತು. 7 ವರ್ಷದವನಿದ್ದಾಗಿನಿಂದ ನಾನು ಬಾಕ್ಸಿಂಗ್​ ಕೌಶಲ್ಯವನ್ನು ಕಲಿಯುತ್ತಿದ್ದೇನೆ" ಎಂದರು.

"3 ವರ್ಷಗಳ ವೃತ್ತಿಪರ ತರಬೇತಿಯ ನಂತರ 10ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಮೌ ಥಾಯ್ ಗೇಮ್‌ನಲ್ಲಿ ಸ್ಪರ್ಧಿಸಿದೆ. ಮೊದಲ ಸಲವೇ ನಾನು ರಾಜ್ಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತರುವಾಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಹೋರಾಡಿದೆ. ಅಲ್ಲಿಂದ ಸ್ಪರ್ಧೆ ಮುಂದುವರಿಸಿದ್ದೇನೆ" ಎಂದು ತಿಳಿಸಿದರು.

ಇದನ್ನೂ ಓದಿ:ಮಹಾರಾಜ ಟ್ರೋಫಿ: ಸುಚಿತ್​ ಆಲ್​ರೌಂಡ್​ ಆಟಕ್ಕೆ ಬೆಂಡಾದ ಮೈಸೂರು ವಾರಿಯರ್ಸ್​

ABOUT THE AUTHOR

...view details