ಕರ್ನಾಟಕ

karnataka

ಒಲಿಂಪಿಕ್ಸ್ 2024ರ ವೇಳಾಪಟ್ಟಿ ಪ್ರಕಟ: ಮೆಗಾ ಈವೆಂಟ್​ಗೆ ಪ್ಯಾರಿಸ್​ನಲ್ಲಿ ಸಕಲ ಸಿದ್ದತೆ..

By

Published : Jan 10, 2023, 10:09 PM IST

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್ ಕ್ರೀಡಾಕೂಟ - ಒಲಿಂಪಿಕ್ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟಿಸಿದ ವಿಶ್ವ ಅಥ್ಲೆಟಿಕ್ ಸಂಸ್ಥೆ

Paris 2024 Olympic Games schedule
ಒಲಿಂಪಿಕ್ಸ್ 2024 ರ ವೇಳಾಪಟ್ಟಿ ಪ್ರಕಟ: ಮೆಗಾ ಈವೆಂಟ್​ಗೆ ಪ್ಯಾರಿಸ್ ಸಿದ್ದತೆ

ನವದೆಹಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ 2024ರ ಒಲಿಂಪಿಕ್ಸ್ ನಡೆಯಲಿದೆ. ವಿಶ್ವ ಅಥ್ಲೆಟಿಕ್ ಸಂಸ್ಥೆ ಪ್ಯಾರಿಸ್ 2024 ರ ಒಲಿಂಪಿಕ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಕ್ರೀಡಾಕೂಟ ಆಗಸ್ಟ್ 1 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಮೆಗಾ ಈವೆಂಟ್‌ಗಾಗಿ ಪ್ಯಾರಿಸ್ ಈಗಾಗಲೇ ತಯಾರಿ ಆರಂಭಿಸಿದೆ. 2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಭಾರತ ಕೇವಲ ಒಂದು ಪದಕವನ್ನು ಗೆಲ್ಲಲು ಮಾತ್ರವೇ ಸಾಧ್ಯವಾಗಿದೆ. ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟಿದ್ದರು. ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಹೆಮ್ಮೆ ಹೆಚ್ಚಿಸಿದ್ದರು.

ಒಲಿಂಪಿಕ್ಸ್‌ನಲ್ಲಿ (2024 ಪ್ಯಾರಿಸ್ 2024 ಒಲಿಂಪಿಕ್ಸ್), 43 ಪಂದ್ಯಗಳು ಜರುಗಲಿದ್ದು, 11 ದಿನಗಳ ಕಾಲ ನಡೆಯಲಿವೆ. ಇದರ ಮೊದಲ ಸ್ಪರ್ಧೆಯು ಆಗಸ್ಟ್ 1 ರಂದು ಪುರುಷರು ಮತ್ತು ಮಹಿಳೆಯರ 20 ಕಿಮೀ ನಡಿಗೆಯೊಂದಿಗೆ ಪ್ರಾರಂಭವಾಗಲಿದೆ. ಪ್ಯಾರಿಸ್ 2024 ರ ಒಲಿಂಪಿಕ್ ಕ್ರೀಡಾಕೂಟವು ಆಗಸ್ಟ್ 11 ರಂದು ಮಹಿಳೆಯರ ಮ್ಯಾರಥಾನ್‌ನೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ಯಾರಿಸ್‌ನಲ್ಲಿ 2024 ರ ಒಲಿಂಪಿಕ್ಸ್‌ನಲ್ಲಿ, ಕ್ರೀಡಾಂಗಣದ ಒಳಗೆ 43 ಸ್ಪರ್ಧೆಗಳ ಎಲ್ಲ ಫೈನಲ್‌ಗಳು ಸಂಜೆಯ ವೇಳೆ ನಡೆಯಲಿದೆ. ಇದಲ್ಲದೇ, ನಾಲ್ಕು ವಿವಿಧ ದಿನಗಳಲ್ಲಿ ಬೆಳಗ್ಗೆ ವೇಳೆ ಐದು ಕಾರ್ಯಕ್ರಮಗಳು ನಡೆಯಲಿವೆ.

ಕಳೆದ ವರ್ಷ ಘೋಷಿಸಿದಂತೆ ಒಲಿಂಪಿಕ್ಸ್ 2024 ರಲ್ಲಿ ಬದಲಾವಣೆಗಳು:ಕಳೆದ ವರ್ಷದ ಘೋಷಣೆಯ ಪ್ರಕಾರ 2024 ರ ಒಲಂಪಿಕ್ಸ್‌ನಲ್ಲಿ ಹೊಸ ರಿಪೆಚೇಜ್ ಸ್ವರೂಪವನ್ನು ಪರಿಚಯಿಸಲಾಗುತ್ತದೆ. ಪುರುಷರ ಮತ್ತು ಮಹಿಳೆಯರ 200ಮೀ, 400ಮೀ, 800ಮೀ, 1500ಮೀ ಮತ್ತು ಅಂಗವಿಕಲರ ಸ್ಪರ್ಧೆಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ ಮೊದಲ ಸುತ್ತಿನ ಅರ್ಹತೆ ಪಡೆಯಲು ವಿಫಲರಾದ ಕ್ರೀಡಾಪಟುಗಳಿಗೆ ರಿಪೆಚೇಜ್‌ನಲ್ಲಿ ಭಾಗವಹಿಸುವ ಮೂಲಕ ಸೆಮಿಫೈನಲ್‌ಗೆ ಹೋಗಲು ಎರಡನೇ ಅವಕಾಶವನ್ನು ಸಹ ನೀಡಲಾಗುತ್ತದೆ.

ಆಟಗಾರರಿಗೆ ಪ್ರಯೋಜನವಾಗಲಿದೆಯಾ ಹೊಸ ವಿಧಾನ:ಈ ಹೊಸ ವಿಧಾನ ಆಟಗಾರರಿಗೆ ಪ್ರಯೋಜನವಾಗಲಿದೆ, 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ 35 ಕಿಲೋಮೀಟರ್ ವಾಕಿಂಗ್ ಟೀಮ್ ಈವೆಂಟ್ ಅನ್ನು ಆಯೋಜಿಸಲಾಗಿದೆ. ಈ ಮಿಶ್ರ ಲಿಂಗ ಈವೆಂಟ್‌ನಲ್ಲಿ, ಲಿಂಗ ಸಮಾನತೆಯನ್ನು ಉತ್ತೇಜಿಸಲು ಪುರುಷರು 50 ಕಿಮೀ ನಡಿಗೆಯಲ್ಲಿ ಭಾಗವಹಿಸುತ್ತಾರೆ. ವಿಶ್ವ ಅಥ್ಲೆಟಿಕ್ಸ್ ಕಳೆದ ತಿಂಗಳಷ್ಟೇ ಪ್ಯಾರಿಸ್ 2024 ರ ಅರ್ಹತಾ ಪ್ರಕ್ರಿಯೆಯನ್ನು ಬಿಡುಗಡೆ ಮಾಡಿತ್ತು.

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಶೂಟರ್‌ ಸ್ವಪ್ನಿಲ್‌ ಕುಸಾಲೆ:ಭಾರತದ ತಾರಾ ಶೂಟರ್‌ ಸ್ವಪ್ನಿಲ್‌ ಕುಸಾಲೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕೈರೋದಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ 4ನೇ ಸ್ಥಾನ ಪಡೆಯುವದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ ಮೂಲಕ ಒಲಿಂಪಿಕ್ಸ್‌ಗೆ ನಿರ್ಧಾರವಾಗುವ 4 ಸ್ಥಾನಗಳ ಪೈಕಿ 3ನೇ ಸ್ಥಾನವನ್ನು ಅವರು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ:Hockey World Cup: 1972ರ ಮ್ಯೂನಿಚ್​ ಒಲಿಂಪಿಕ್ಸ್‌ನ ಭಾರತದ ಅಗ್ರ ಸಾಧನೆ

ABOUT THE AUTHOR

...view details