ಕರ್ನಾಟಕ

karnataka

Tokyo Olympics: ಎದುರಾಳಿ ಕಚ್ಚಿದ್ರೂ ಧೃತಿಗೆಡದೆ ಗೆದ್ದ ರವಿ... ಕುಸ್ತಿಪಟುಗೆ ಭೇಷ್​ ಎಂದ ಸೆಹ್ವಾಗ್

By

Published : Aug 5, 2021, 12:37 AM IST

ಕುಸ್ತಿಪಟು ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಎರಡನೇ ಕುಸ್ತಿಪಟು ಎನಿಸಿಕೊಂಡರು. ಅವರು 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸಿ ಫೈನಲ್​ಗೇರಿದ್ದಾರೆ.

tokyo-olympics-2020-ravi-dahiya-bitten-by-his-rival-during-semi-final-match
ಎದುರಾಳಿ ಕಚ್ಚಿದ್ರೂ ಧೃತಿಗೆಡದೆ ಗೆದ್ದ ರವಿ

ಟೋಕಿಯೊ: ಕುಸ್ತಿಪಟು ರವಿ ಕುಮಾರ್ ದಹಿಯಾ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಪಂದ್ಯದ ವೇಳೆ ಎದುರಾಳಿ ಕುಸ್ತಿಪಟು ಕಚ್ಚಿದರೂ ಕೂಡ, ಧೃತಿಗೆಡದ ರವಿ ದಹಿಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯದ ವೇಳೆ ರವಿ ದಹಿಯಾ ಅವರ ಕೈಯನ್ನು ಎದುರಾಳಿ ಕಜಕಸ್ತಾನದ ನುರಿಸ್ಲಾಮ್ ಸನಾಯೆವ್ ಕಚ್ಚಿದ್ದಾರೆ. ಭುಜವನ್ನು ರವಿ ನೆಲಕ್ಕೆ ತಾಗಿಸಲು ಪ್ರಯತ್ನಿಸುತ್ತಿದ್ದಾಗ ನುರಿಸ್ಲಾಮ್ ಈ ಕೃತ್ಯ ಎಸಗಿದ್ದಾರೆ. ಆದರೂ ಕೂಡ ರವಿ ಕುಮಾರ್ ನೋವನ್ನು ನುಂಗಿ ಎದುರಾಳಿಯ ಭುಜವನ್ನು ಸಂಪೂರ್ಣವಾಗಿ ನೆಲಕ್ಕೆ ತಾಗಿಸಿ ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ ಭಾರತಕ್ಕೆ 2020ರ ಒಲಿಂಪಿಕ್ಸ್​ ಕೂಟದಲ್ಲಿ 4ನೇ ಪದಕ ಖಚಿಪಡಿಸಿದ್ದಾರೆ.

ಎದುರಾಳಿ ಕಚ್ಚಿದರೂ ಬಗ್ಗುಬಡಿಯುವಲ್ಲಿ ಯಶಸ್ವಿಯಾದ ರವಿ ದಹಿಯಾ ಅವರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಕೊಂಡಾಡಿದ್ದಾರೆ. 'ಇದು ಅನ್ಯಾಯ, ನಮ್ಮ ರವಿ ದಹಿಯಾರ ಚೈತನ್ಯವನ್ನು ಮಣಿಸಲಾಗದೆ, ಎದುರಾಳಿ ಈ ರೀತಿ ಕಚ್ಚಿದ್ದಾನೆ. ನುರಿಸ್ಲಾಮ್ ವರ್ತನೆಯು ಅವಮಾನಕರವಾದದ್ದು, ರವಿ ನೀವು ಅದ್ಭುತ' ಎಂದು ವೀರೂ ಟ್ವೀ ಟ್​ ಮಾಡಿದ್ದಾರೆ.

ಕುಸ್ತಿಪಟು ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಎರಡನೇ ಕುಸ್ತಿಪಟು ಎನಿಸಿಕೊಂಡರು. ಅವರು 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸಿ ಫೈನಲ್​ಗೇರಿದ್ದಾರೆ. ಇದಕ್ಕೂ ಮುನ್ನ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿಂದೆ, ದಹಿಯಾ ಎರಡೂ ಪಂದ್ಯಗಳನ್ನು ತಾಂತ್ರಿಕ ಪ್ರಾವೀಣ್ಯತೆಯ ಆಧಾರದ ಮೇಲೆ ಗೆದ್ದಿದ್ದರು.

ಇದನ್ನೂ ಓದಿ:Good News: ಫೈನಲ್​ ಪ್ರವೇಶಿಸಿ ಮತ್ತೊಂದು ಪದಕ ಖಚಿತಪಡಿಸಿದ ರವಿ ಕುಮಾರ್ ದಹಿಯಾ

ABOUT THE AUTHOR

...view details