ಕರ್ನಾಟಕ

karnataka

ಸ್ಪೇನ್ ಮಾಸ್ಟರ್ಸ್ 2023: ಸೆಮಿಫೈನಲ್​ ಪ್ರವೇಶಿಸಿದ ಸಿಂಧು, ಶ್ರೀಕಾಂತ್​ಗೆ ನಿರಾಸೆ

By

Published : Apr 1, 2023, 7:04 PM IST

ಸ್ಪೇನ್ ಮಾಸ್ಟರ್ಸ್ 2023ರ ಎಂಟರ ಘಟ್ಟದ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ಟ್ ಸೋಲಿಸಿ ಪಿವಿ ಸಿಂಧು ಸೆಮಿಫೈನಲ್​ಗೆ ಲಗ್ಗೆ ಹಾಕಿದರು.

PV Sindhu makes semi finals in Spain Masters
ಸ್ಪೇನ್ ಮಾಸ್ಟರ್ಸ್ 2023: ಸೆಮಿ-ಫೈನಲ್​ ಪ್ರವೇಶಿಸಿದ ಸಿಂಧು, ಶ್ರೀಕಾಂತ್​ಗೆ ನಿರಾಸೆ

ಮ್ಯಾಡ್ರಿಡ್ (ಸ್ಪೇನ್):ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇಂದು ಕ್ವಾರ್ಟರ್ಸ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ಟ್ ಅವರನ್ನು 21-14, 21-17 ರಿಂದ ಸೋಲಿಸಿ ಸ್ಪೇನ್ ಮಾಸ್ಟರ್ಸ್ 2023 ಬಿಡಬ್ಲ್ಯೂಎಫ್​ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್​ ತಲುಪಿದ್ದಾರೆ.

ಪಂದ್ಯದ ಮೊದಲ ಸೆಟ್​ನಲ್ಲಿ 7 ಅಂಕಗಳ ಲೀಡ್​ ಪಡೆದುಕೊಂಡ ಸಿಂಧು ಮುನ್ನಡೆ ಪಡೆದುಕೊಂಡರು. ಎರಡನೇ ಗೇಮ್‌ನಲ್ಲಿ ಸಿಂಧುಗೆ ಸವಾಲೆಸೆದ ಬ್ಲಿಚ್‌ಫೆಲ್ಡ್ 12-6ರ ಮುನ್ನಡೆ ಗಳಿಸಿದರು. ಈ ಮುನ್ನಡೆಯಿಂದ ಕುಸಿಯದ ಪಿವಿ ಸಿಂಧು ಡೆನ್ಮಾರ್ಕ್‌ನ ಮಿಯಾರನ್ನು ಹಿಂದಿಕ್ಕಿ 21-17ರಿಂದ ಎರಡನೇ ಸೆಟ್​ ವಶಪಡಿಸಿಕೊಂಡು ಗೆಲುವು ದಾಖಲಿಸಿದರು.

ಇದು ಡೇನ್ ವಿರುದ್ಧ ಸಿಂಧು ಅವರ ಆರನೇ ಗೆಲುವುವಾಗಿದೆ. ಎರಡು ವರ್ಷಗಳ ಹಿಂದೆ ಥಾಯ್ಲೆಂಡ್ ಓಪನ್‌ನಲ್ಲಿ ಭಾರತೀಯ ಶಟ್ಲರ್ ವಿರುದ್ಧ ಡೇನ್ ಬ್ಯಾಡ್ಮಿಂಟನ್ ತಾರೆ ಏಕೈಕ ಗೆಲುವು ಸಾಧಿಸಿದ್ದರು. ಇತ್ತೀಚಿನ ಮುಖಾಮುಖಿಯಲ್ಲಿ ಇಬ್ಬರು ಆಟಗಾರರು ಟೋಕಿಯೊ 2020 ಒಲಿಂಪಿಕ್ಸ್‌ನ ಆರಂಭಿಕ ಸುತ್ತಿನಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಸಿಂಧು ವಿಜಯ ಸಾಧಿಸಿದ್ದರು.

ಇಂದು ಸೆಮಿಸ್​ ಫೈಟ್​:ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಅಮೆರಿಕದ ಬೀವೆನ್ ಜಾಂಗ್ ಅಥವಾ ಸಿಂಗಾಪುರದ ಷಟ್ಲರ್ ಯೆಯೊ ಜಿಯಾ ಮಿನ್ ವಿರುದ್ಧ ಆಡಲಿದ್ದಾರೆ.

ಇದನ್ನೂ ಓದಿ:ಬ್ಯಾಡ್ಮಿಂಟನ್​ ಶ್ರೇಯಾಂಕ: ಅಗ್ರ 10ರೊಳಗಿನ ಪಟ್ಟಿಯಿಂದ ಪಿ.ವಿ.ಸಿಂಧು ಔಟ್

ಪುರುಷರ ಸಿಂಗಲ್ಸ್​​:ಕಿದಂಬಿ ಶ್ರೀಕಾಂತ್ ಅವರು ತಮ್ಮ ಅಂತಿಮ ಎಂಟು ಪಂದ್ಯಗಳಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ಕೆಂಟಾ ನಿಶಿಮೊಟೊ ವಿರುದ್ಧ 18-21, 15-21 ಅಂತರದಿಂದ ಸೋತು ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದರು. ಮಾಜಿ ನಂ.1 ಆಟಗಾರ ಶ್ರೀಕಾಂತ್ ಆರಂಭಿಕ ಗೇಮ್‌ನಲ್ಲಿ ಜಪಾನಿನ ಷಟ್ಲರ್ ವಿರುದ್ಧ ಮುಖಾಮುಖಿಯಾಗಿ ಹೋರಾಡಿದರು. ನಿಶಿಮೊಟೊ ಅವರನ್ನು ಒಂದು ಪಾಯಿಂಟ್‌ನಿಂದ (16-17) ಹಿನ್ನಡೆ ಮಾಡಿದ್ದರು. ಆದರೆ, ನಂತರ ಕೊಂಚ ವಿಫಲತೆ ಕಂಡ ಕಿದಂಬಿ ಶ್ರೀಕಾಂತ್ ನಿರ್ಣಾಯಕ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದರು.

ಸಿಂಧು ರ್‍ಯಾಂಕಿಂಗ್​ ಕುಸಿತ:ಮಾರ್ಚ್​ 28ರಂದು ಬಿಡುಗಡೆಯಾದ ಮಹಿಳಾ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌(ಬಿಡಬ್ಲ್ಯೂಎಫ್) ಶ್ರೇಯಾಂಕದಲ್ಲಿ ಸಿಂಧು 10ರೊಳಗಿನ ಪಟ್ಟಿಯಿಂದ ಕೆಳಗಿಳಿದಿದ್ದು, ಪ್ರಕಟವಾದ ನೂತನ ಮಹಿಳೆಯರ ಸಿಂಗಲ್ಸ್‌ ಕ್ರಮಾಂಕದಲ್ಲಿ ಸಿಂಧು 11ನೇ ಸ್ಥಾನದಲ್ಲಿದ್ದಾರೆ. 27 ವರ್ಷದ ಬ್ಯಾಡ್ಮಿಂಟನ್ ತಾರೆಯ ಬಳಿ ಸದ್ಯ 60,448 ಪಾಯಿಂಟ್‌ಗಳಿವೆ. ಒಂದು ಕಾಲದಲ್ಲಿ ಜೀವನ ಶ್ರೇಷ್ಠ 2ನೇ ರ್‍ಯಾಂಕ್‌ನಲ್ಲಿದ್ದ ಸಿಂಧು 2016ರ ನವೆಂಬರ್‌ನಿಂದ ಆರು ವರ್ಷಗಳ ಅಗ್ರ 10ರೊಳಗಿನವರ ಪಟ್ಟಿಯಲ್ಲಿದ್ದರು.

2022ರಲ್ಲಿ ಆಗಸ್ಟ್‌ನಲ್ಲಿ ಸಿಂಧು ಅವರ ಎಡ ಪಾದದ ಮೇಲೆ ಒತ್ತಡ ಉಂಟಾದ ಕಾರಣ ಮುರಿತಕ್ಕೆ ಕಾರಣ ಆಗಿತ್ತು. ಇದರಿಂದ 5 ತಿಂಗಳ ಕಾಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಈ ವರ್ಷ ಫೆಬ್ರವರಿಯಲ್ಲಿ ತಾನು ಫಿಟ್​ ಆಗಿದ್ದು ಆಟಕ್ಕೆ ಮರಳಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ:ಸ್ಪೇನ್ ಮಾಸ್ಟರ್ಸ್: ಎಂಟರ ಘಟ್ಟ ಪ್ರವೇಶಿಸಿದ ಪಿವಿ ಸಿಂಧು

ABOUT THE AUTHOR

...view details