ಕರ್ನಾಟಕ

karnataka

CWG 2022: ಟೀ ಮಾರುವವನ ಮಗ 'ಬೆಳ್ಳಿ ಹುಡುಗ'.. ಮೋದಿ ಸೇರಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ

By

Published : Jul 30, 2022, 5:51 PM IST

ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಬೆಳ್ಳಿ ಪದಕ ಗೆದ್ದ ಮಹಾರಾಷ್ಟ್ರದ ಸಂಕೇತ್​- ವೇಟ್ ಲಿಫ್ಟರ್ ಸಾಧನೆಗೆ ಪ್ರಧಾನಿ, ರಾಷ್ಟ್ರಪತಿ ಅಭಿನಂದನೆ- ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂದೆ

Modi congratulates Weightlifter Sanket Sargar
Modi congratulates Weightlifter Sanket Sargar

ಬರ್ಮಿಂಗ್​ಹ್ಯಾಮ್​(ಯುಕೆ): 2022ರ ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ವೇಟ್​ ಲಿಫ್ಟರ್​​ ಸಂಕೇತ್​​ ಮಹದೇವ್ ಸರ್ಗರ್​​ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದು, ಈ ಮೂಲಕ ಭಾರತಕ್ಕೆ ಮೊದಲ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ​ 21ಹರೆಯದ ಕ್ರೀಡಾಪಟುವಿನ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗ್ತಿದೆ.

ಸಂಕೇತ್ ಸರ್ಗರ್​​ ಬೆಳ್ಳಿ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅಸಾಧಾರಣ ಪ್ರಯತ್ನದ ಮೂಲಕ ಸಂಕೇತ್ ಸರ್ಗರ್​​​ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. ಈ ಮೂಲಕ ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತಕ್ಕೆ ಶುಭಾರಂಭ ಒದಗಿಸಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಮುಂಬರುವ ಎಲ್ಲ ಪ್ರಯತ್ನಕ್ಕೂ ಶುಭಾಶಯಗಳು ಎಂದಿದ್ದಾರೆ.

ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಸಂಕೇತ್ ಸಾಧನೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಶುಭಾಶಯ ತಿಳಿಸಿದ್ದು, 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸಂಕೇತ್ ಭಾರತಕ್ಕೆ ಬೆಳ್ಳಿ ತಂದುಕೊಟ್ಟಿದ್ದಾರೆ. ಸ್ವಲ್ಪದರಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದಾರೆ. ಆದರೆ, ಅವರ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಅಭಿನಂಧನೆ ಸಲ್ಲಿಸಿದ್ದು, ಕಾಮನ್​ವೆಲ್ತ್ ಗೇಮ್ಸ್​​ನ ವೇಟ್ ಲಿಫ್ಟಿಂಗ್​​ನಲ್ಲಿ ಬೆಳ್ಳಿ ಪದಕ ಗೆದ್ದ ಸಂಕೇತ್​​ಗೆ ಅಭಿನಂದನೆಗಳು. ನಿಮ್ಮ ಪರಿಶ್ರಮ, ಯಶಸ್ಸು ಇದೀಗ ಭಾರತಕ್ಕೆ ಕೀರ್ತಿ ತಂದಿದೆ. ಗೇಮ್ಸ್​ನಲ್ಲಿ ಭಾರತ ಪದಕಗಳ ಪಟ್ಟಿ ತೆರೆಯಲು ಮೊದಲಿಗರಾಗಿದ್ದಕ್ಕೆ ನನ್ನ ಶುಭಾಶಯಗಳು ಎಂದು ಹಾರೈಸಿದ್ದಾರೆ.

ಕ್ರೀಡಾ ಸಚಿವರರಿಂದ ಮೆಚ್ಚುಗೆ

ಇದನ್ನೂ ಓದಿರಿ:Commonwealth Games 2022.. ಭಾರತಕ್ಕೆ ಮೊದಲ ಪದಕ, ಬೆಳ್ಳಿಗೆ ಮುತ್ತಿಕ್ಕಿದ ಸಂಕೇತ್ ​​

ಬೇಸರ ವ್ಯಕ್ತಪಡಿಸಿದ ಸಂಕೇತ್​:ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿ ಚಿನ್ನ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಸಂಕೇತ್, ಬೆಳ್ಳಿ ಗೆದ್ದಿರುವುದಕ್ಕೆ ತೃಪ್ತಿ ಇದೆ ಎಂದಿದ್ದಾರೆ. ಚಿನ್ನ ಗೆಲ್ಲಲು ಕಳೆದ ನಾಲ್ಕು ವರ್ಷಗಳಿಂದ ನಾನು ತಯಾರಿ ನಡೆಸಿದ್ದೆ. ಆದರೆ, ಮೊಣಕೈ ಗಾಯದಿಂದಾಗಿ ಇದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಮನೆಯಲ್ಲಿ ಸಂಭ್ರಮ:ಸಂಕೇತ್​ ಸರ್ಗರ್​ ಬೆಳ್ಳಿ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಮಗನ ಸಾಧನೆಗೆ ಹೆಮ್ಮೆ ಇದೆ ಎಂದು ಸಂಕೇತ್​​ ಅವರ ತಂದೆ ಹೇಳಿಕೊಂಡಿದ್ದಾರೆ. ನನ್ನ ಮಗ ಈ ಹಿಂದೆ ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿದ್ದ. ಇದೀಗ ಕಾಮನ್​ವೆಲ್ತ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ. ಮಗನ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ. ಜೀವನ ನಡೆಸಲು ಸಂಕೇತ್ ಸರ್ಗರ್ ತಂದೆ ಮಹದೇವ್ ಸಾಂಗ್ಲಿಯಲ್ಲಿ ಟೀ, ಪಾನ್ ಶಾಪ್​ ಅಂಗಡಿ ನಡೆಸುತ್ತಾರೆ.

ABOUT THE AUTHOR

...view details