ಕರ್ನಾಟಕ

karnataka

PKL Season 10: ಪ್ರೊ-ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಮುಂದೂಡಿಕೆ

By ETV Bharat Karnataka Team

Published : Sep 8, 2023, 4:52 PM IST

ಪ್ರೊ ಕಬಡ್ಡಿ ಲೀಗ್​ನ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ಮತ್ತು ನಾಳೆ ಜರುಗಬೇಕಿತ್ತು. ಆದರೆ, ಈ ಪ್ರಕ್ರಿಯೆಯನ್ನು ಮುಂದಿನ ತಿಂಗಳು (ಅಕ್ಟೋಬರ್​) 9 ಮತ್ತು 10ಕ್ಕೆ ಮುಂದೂಡಲಾಗಿದೆ.

PKL Season 10
PKL Season 10

ಮುಂಬೈ: ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಮುಂದೂಡಲಾಗಿದ್ದು, ಬದಲಿ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಮೊದಲು ನಿಗದಿಯಾಗಿದ್ದ ಸೆಪ್ಟೆಂಬರ್ 8 ಹಾಗೂ 9 ಬದಲು, ಅಕ್ಟೋಬರ್ 9 ಮತ್ತು 10ರಂದು ಆಟಗಾರರ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಲಿರುವ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಕಬಡ್ಡಿ ತಂಡದ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾದ ಕೋರಿಕೆಯ ಮೇರೆಗೆ ಹರಾಜಿನ ದಿನಾಂಕದಿಂದ ಮುಂದೂಡಲಾಗಿದೆ ಎಂದು ಟೂರ್ನಿಯ ಸಂಘಟಕ ಮಾಶಲ್ ಸ್ಪೋರ್ಟ್ ತಿಳಿಸಿದೆ.

ಪ್ರೊ-ಕಬಡ್ಡಿ ಲೀಗ್‌ನ ಕಮಿಷನರ್ ಅನುಪಮ್ ಗೋಸ್ವಾಮಿ ಮಾತನಾಡಿ, “ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಏಷ್ಯನ್ ಗೇಮ್ಸ್ ನಂತರ ತಕ್ಷಣವೇ ನಡೆಯಲಿದೆ. ಏಷ್ಯನ್ ಗೇಮ್ಸ್‌ನ ಹಲವಾರು ಸ್ಟಾರ್ ಆಟಗಾರರು ತಂಡಗಳಿಂದ ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸಲಾಗುವುದು‘‘ ಎಂದರು.

ಹರಾಜು ಪ್ರಕ್ರಿಯೆ:ಆಟಗಾರರ ಹರಾಜಿನಲ್ಲಿ ದೇಶೀಯ ಮತ್ತು ವಿದೇಶಿ ಆಟಗಾರರನ್ನ ಸೇರಿದಂತೆ 'ಎ' (INR 30 ಲಕ್ಷ ಮೂಲಬೆಲೆ), 'ಬಿ' (INR 20 ಲಕ್ಷ ಮೂಲಬೆಲೆ), 'ಸಿ' (INR 13 ಲಕ್ಷ ಮೂಲಬೆಲೆ) ಹಾಗೂ 'ಡಿ' (INR 09 ಲಕ್ಷ ಮೂಲಬೆಲೆ) ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗದೊಳಗೆ 'ಆಲ್ರೌಂಡರ್‌ಗಳು', 'ಡಿಫೆಂಡರ್‌ಗಳು' ಮತ್ತು 'ರೈಡರ್‌ಗಳು' ಎಂದು ಉಪ-ವಿಭಾಗ ಮಾಡಲಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ - 2023ರ ಫೈನಲ್ ತಲುಪಿದ್ದ ಎರಡು ತಂಡಗಳ 24 ಆಟಗಾರರನ್ನು ಒಳಗೊಂಡಂತೆ ಐನೂರಕ್ಕೂ ಅಧಿಕ ಆಟಗಾರರು ಹರಾಜಿಗೆ ಒಳಪಡಲಿದ್ದು, ಪ್ರತಿ ಫ್ರಾಂಚೈಸಿಯು ತಮ್ಮ ಆಟಗಾರರನ್ನು ಖರೀದಿಸಲು 5 ಕೋಟಿ ಮಿತಿಯನ್ನು ಹೊಂದಿರಲಿದೆ.

ಈಗಾಗಲೇ ಪ್ರೋ ಕಬಡ್ಡಿಯ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯಲ್ಲಿ ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ERP) ವಿಭಾಗದಲ್ಲಿ 22, ರಿಟೈನ್ಡ್ ಯೂತ್ ಪ್ಲೇಯರ್ (RYP) ವಿಭಾಗದಲ್ಲಿ 24, ಮತ್ತು ಎಕ್ಸಿಸ್ಟೆಡ್ ನ್ಯೂ ಯೂತ್ ಪ್ಲೇಯರ್ (ENYP) 38 ಆಟಗಾರರು ಸೇರಿದಂತೆ ಒಟ್ಟು 84 ಆಟಗಾರರನ್ನು ಉಳಿಸಿಕೊಂಡಿವೆ. ತಂಡಗಳು ಕೈಬಿಟ್ಟಿರುವ ಪವನ್ ಸೆಹ್ರಾವತ್, ವಿಕಾಶ್ ಕಂಡೋಲಾ ಮತ್ತು ಫಜಲ್ ಅಟ್ರಾಚಲಿಯಂತಹ ಸ್ಟಾರ್ ಆಟಗಾರರು ಹರಾಜಿಗೊಳಪಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ರಭಾವಿ ಆಟಗಾರರಾಗಿದ್ದ ಪವನ್ ಸೆಹ್ರಾವತ್, ವಿಕಾಶ್ ಕಂಡೋಲಾ ಯಾವ ತಂಡದ ಪಾಲಾಗುತ್ತಾರೆ ಎಂಬ ಕುತೂಹಲ ಕಬಡ್ಡಿ ಪ್ರೇಮಿಗಳಲ್ಲಿದೆ.

ಇದನ್ನೂ ಓದಿ:ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿ.. ಆದರೂ ಆತಂಕವಿಲ್ಲ.. ಮೀಸಲು ದಿನದಂದು ನಡೆಯಲಿದೆ ಮ್ಯಾಚ್​

ABOUT THE AUTHOR

...view details