ಕರ್ನಾಟಕ

karnataka

US Open: ಹಾಲಿ ಚಾಂಪಿಯನ್ ಅಲ್ಕಾರಾಜ್ ಮಣಿಸಿದ ಮೆಡ್ವೆಡೆವ್: ಜೊಕೊವಿಕ್ ಜೊತೆಗೆ ಫೈನಲ್​ನಲ್ಲಿ ಹಣಾಹಣಿ

By ETV Bharat Karnataka Team

Published : Sep 9, 2023, 2:37 PM IST

US Open 2023 Semi Final Results: ಮೆಡ್ವೆಡೆವ್ ಸೆಪ್ಟೆಂಬರ್ 11ರಂದು ಯುಎಸ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರ ವಿರುದ್ಧ ಸೆಣಸಲಿದ್ದಾರ. ಸೆಮಿಫೈನಲ್‌ನಲ್ಲಿ ಶುಕ್ರವಾರ, ಕಾರ್ಲೋಸ್ ಅಲ್ಕಾರಾಜ್ 7-6 (3), 6-1, 3-6, 6-3 ಸೆಟ್‌ಗಳಿಂದ ಮಣಿಸಿದ್ದಾರೆ.

US Open final
ಹಾಲಿ ಚಾಂಪಿಯನ್ ಅಲ್ಕಾರಾಜ್ ಮಣಿಸಿದ ಮೆಡ್ವೆಡೆವ್: ಜೊಕೊವಿಕ್ ಜೊತೆಗೆ ಫೈನಲ್​ನಲ್ಲಿ ಹಣಾಹಣಿ

ನ್ಯೂಯಾರ್ಕ್:ಶುಕ್ರವಾರ ರಾತ್ರಿ ನಡೆದ ಅಮೆರಿಕ ಓಪನ್ ಸೆಮಿಫೈನಲ್‌ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿದರು. ಡೇನಿಯಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್ ಜೊತೆಗೆ ಅಮೆರಿಕನ್​​ ಓಪನ್ ಫೈನಲ್​ನಲ್ಲಿ ಹಣಾಹಣಿ ನಡೆಸಲಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ 7-6 (3), 6-1, 3-6, 6-3 ಮೂಲಕ ಡೇನಿಯಲ್ ಮೆಡ್ವೆಡೆವ್, ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ್ದಾರೆ. ಈ ಮೂಲಕ 2021ರ ಅಮೆರಿಕನ್​ ಓಪನ್ ಚಾಂಪಿಯನ್​ನ ಫೈನಲ್​ನಲ್ಲಿ ಡೇನಿಯಲ್ ಮೆಡ್ವೆಡೆವ್, ಜೊಕೊವಿಕ್ ಮುಖಾಮುಖಿಯಾಗಲಿದ್ದಾರೆ.

ಈ ನಷ್ಟವು ಅವನನ್ನು ಎಷ್ಟು ದಿನ ಕಾಡಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ಸೋಲು ಅನುಭವಿಸಿದ ಅಲ್ಕರಾಜ್ ಅವರು, ''ದಿನಗಳು? ವಾರಗಳು? ನನಗೆ ಗೊತ್ತಿಲ್ಲ. ಈ ನಷ್ಟದ ಬಗ್ಗೆ ನಾನು ದೀರ್ಘಕಾಲ ಯೋಚಿಸಲು ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ, ನಾನು ಈ ಸೋಲಿನಿಂದ ಕಲಿಯಬೇಕಾಗಿದೆ. ಮುಂದೆ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಈ ರೀತಿಯ ಪಂದ್ಯಗಳು ನೀವು ಉತ್ತಮವಾಗಿ ಆಡಲು ಮತ್ತು ಬೆಳೆಯಲು ಬಹಳಷ್ಟು ಸಹಾಯ ಮಾಡುತ್ತವೆ. ಎಂದು ಅವರು ಹೇಳಿದರು.

"ನೀವು 23 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದ ಆಟಗಾರರೊಂದಿಗೆ ಆಡುವುದು ಸವಾಲಾಗಿರುತ್ತದೆ. ಮತ್ತು ನನ್ನ ಬಳಿ ಒಂದೇ ಒಂದು ಆಯ್ಕೆ ಮಾತ್ರ ಇದೆ" ಎಂದು ಗೆಲವು ಸಾಧಿಸಿದ ಮೆಡ್ವೆಡೆವ್ ಹೇಳಿದರು. "ನಾನು ಅವರನ್ನು ಇಲ್ಲಿ ಸೋಲಿಸಿದ ಸಂದರ್ಭದಲ್ಲಿ ಉತ್ತಮವಾಗಿ ಆಡುತ್ತಿದ್ದೆ, ಆದ್ದರಿಂದ ನಾನು ಮುಂದೆಯೂ ಅದನ್ನೇ ಮಾಡಬೇಕಾಗಿದೆ '' ಎನ್ನುತ್ತಾರೆ ಅವರು.

ಮೆಡ್ವೆಡೆವ್ ಉತ್ತಮ ಪ್ರದರ್ಶನ:ನಿನ್ನೆ (ಶುಕ್ರವಾರ) ರಾತ್ರಿ, ಮೆಡ್ವೆಡೆವ್ ಮತ್ತು ಅಲ್ಕಾರಾಜ್ ಇಬ್ಬರೂ ಅದ್ಭುತವಾಗಿ ಆಡಿದರು. ಅಮೆರಿಕನ್​ ಓಪನ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆಯೊಂದಿಗೆ ಬಂದಿದ್ದ ಅಲ್ಕರಾಜ್​‌ ಅವರನ್ನು ಡೇನಿಯಲ್ ಮೆಡ್ವೆಡೆವ್ ಪಂದ್ಯದ ಮೊದಲ ಸೆಟ್‌ನಲ್ಲಿ ನೀರು ಕುಡಿಸುವಲ್ಲಿ ಯಶಸ್ವಿಯಾದರು. ಮೊದಲ ಸೆಟ್ ಅನ್ನು ಟೈ ಬ್ರೇಕರ್ ತಲುಪಿದರು. ಎರಡನೇ ಸೆಟ್‌ನಲ್ಲಿ ಮೆಡ್ವೆಡೆವ್ ಅದೇ ಪ್ರದರ್ಶನವನ್ನು ಪುನರಾವರ್ತಿಸಿದರು.

ಮೊದಲೆರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ಮೂರನೇ ಸೆಟ್‌ನಲ್ಲಿ ಅಲ್ಕರಾಜ್ ಪ್ರಬಲವಾಗಿ ಹೋರಾಡಿದರು. ಅಲ್ಕರಾಜ್ ಚಾಂಪಿಯನ್ ಫೈಟ್ ಸೆಟ್‌ನಲ್ಲಿ ಮೆಡ್ವೆಡೆವ್ 3-6 ಅಂಕಗಳನ್ನು ಗಳಿಸಿದರು. ಇದರೊಂದಿಗೆ ಅತ್ಯಂತ ನಿರ್ಣಾಯಕ ನಾಲ್ಕನೇ ಸೆಟ್‌ನಲ್ಲಿ ಮೆಡ್ವೆಡೆವ್ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಪಂದ್ಯ ಗೆಲ್ಲುವ ಮೂಲಕ ಫೈನಲ್​ಗೆ ಪ್ರವೇಶಿಸಿದರು.

ಜೊಕೊವಿಕ್ 10ನೇ ಫೈನಲ್:ಸರ್ಬಿಯಾದ ನೊವಾಕ್ ಜೊಕೊವಿಕ್ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಲುಪಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ. ಯುಎಸ್ ಓಪನ್ ಫೈನಲ್‌ನಲ್ಲಿ ಮೆಡ್ವೆಡೆವ್ ಅವರನ್ನು ಸೋಲಿಸುವ ಮೂಲಕ ಸ್ಟಾರ್ ಈ ಸಾಧನೆಯನ್ನು ತಲುಪುತ್ತಾರೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇದು ಜೊಕೊವಿಕ್ ಅವರ 10ನೇ ಯುಎಸ್ ಓಪನ್ ಫೈನಲ್ ಆಗಿದೆ.

ಇದನ್ನೂ ಓದಿ:Neymar: ಬೊಲಿವಿಯಾ ವಿರುದ್ಧ ಬ್ರೆಜಿಲ್​ಗೆ ಭರ್ಜರಿ ಜಯ .. 79 ನೇ ಗೋಲ್​ ಭಾರಿಸುವ ಮೂಲಕ ಪೀಲೆ ದಾಖಲೆ ಮುರಿದ ನೇಮಾರ್

ABOUT THE AUTHOR

...view details