ಕರ್ನಾಟಕ

karnataka

ರೆಕಾರ್ಡ್​ಗಳ ರಾಜ.. ವಿಶ್ವಕಪ್​ನ ಫೈನಲ್​ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ

By

Published : Dec 18, 2022, 11:01 PM IST

ಫುಟ್ಬಾಲ್​ನಲ್ಲಿ ದಾಖಲೆಗಳ ರಾಜ ಎಂದೇ ಖ್ಯಾತರಾದ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ವಿಶ್ವಕಪ್​ನ ಫೈನಲ್​ನಲ್ಲೂ ದಾಖಲೆಗಳ ಸುರಿಮಳೆಗೈದಿದ್ದಾರೆ.

messi-new-records-in-world-cup
ದಾಖಲೆಗಳ ರಾಜ... ವಿಶ್ವಕಪ್​ನ ಫೈನಲ್​ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ

ದೋಹಾ (ಕತಾರ್​): ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಪ್ರತಿ ಸುತ್ತಿನಲ್ಲೂ ಸ್ಕೋರ್ ಮಾಡಿದ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾಗಿದ್ದಾರೆ.

ಮೆಸ್ಸಿ ಒಂದೇ ವಿಶ್ವಕಪ್‌ನಲ್ಲಿ ಹೆಚ್ಚಿನ ಪೆನಾಲ್ಟಿ ಗೋಲುಗಳನ್ನು ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಹೆಚ್ಚಿನ ಗೋಲುಗಳನ್ನು ಗಳಿಸಿದ್ದು, ನಾಕೌಟ್ ಹಂತಗಳಲ್ಲಿ ಎಲ್ಲ ಪಂದ್ಯಗಳಲ್ಲಿ ಹೆಚ್ಚಿನ ಗೋಲುಗಳನ್ನು ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಜರ್ಮನ್ ಲೆಜೆಂಡ್ ಲೋಥರ್ ಮ್ಯಾಥ್ಯೂಸ್ ಅವರ ದಾಖಲೆಯನ್ನೂ ಮೆಸ್ಸಿ ಹಿಂದಿಕ್ಕಿದ್ದಾರೆ.

ಫಿಫಾ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಆಡಿದ ಕೇವಲ ಆರು ಜನ ಆಟಗಾರರಲ್ಲಿ ಒಬ್ಬರಾದ ಮೆಸ್ಸಿ ತಮ್ಮ 26ನೇ ಪಂದ್ಯವನ್ನು ಆಡುತ್ತಿದ್ದಾರೆ. ಮ್ಯಾಥ್ಯೂಸ್ 25 ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದರು.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಮಯು ಆಟವಾಡಿದ ದಾಖಲೆಯನ್ನು ಮೆಸ್ಸಿ ಬರೆದಿದ್ದಾರೆ. ಈ ಮೂಲಕ ಇಟಲಿಯ ದಂತಕಥೆ ಪಾವೊಲೊ ಮಾಲ್ದಿನಿ ಅವರ ದಾಖಲೆಯನ್ನು ಮೆಸ್ಸಿ ಮುರಿದ್ದಾರೆ. ಭಾನುವಾಋದ ಫೈನಲ್​ ಪಂದ್ಯದಲ್ಲಿ 23 ನಿಮಿಷಗಳನ್ನು ಪೂರೈಸು ಮೂಲಕ ಮೆಸ್ಸಿ 2217 ನಿಮಿಷಗಳ ಆಡಿದ ದಾಖಲೆಯನ್ನು ಮೆಸ್ಸಿ ಬರೆದರು.

ಇಷ್ಟೇ ಅಲ್ಲ, ಇಂದಿನ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಮೆಸ್ಸಿ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು (12) ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ.

ABOUT THE AUTHOR

...view details