ಕರ್ನಾಟಕ

karnataka

ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿ ಭಾರತದ ಧ್ವಜಾರೋಹಣ

By

Published : Jul 28, 2022, 6:17 PM IST

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 15 ಕ್ರೀಡಾ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Indian flag hoisted at CWG village in Birmingham
ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿ ಭಾರತದ ಧ್ವಜಾರೋಹಣ

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುನ್ನಾದಿನದಂದು ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿ ನಡೆದ ಭಾರತದ ಧ್ವಜಾರೋಹಣ ಸಮಾರಂಭ ನಡೆಯಿತು. ಇದರಲ್ಲಿ ಭಾರತದ ಹಾಕಿ ಪುರುಷರ ಮತ್ತು ಮಹಿಳಾ ತಂಡಗಳು ಸೇರಿದಂತೆ ಹಲವಾರು ಕ್ರೀಡಾಪಟುಗಳು ಭಾಗವಹಿಸಿದರು.

ಟೀಮ್ ಇಂಡಿಯಾದ ಚೆಫ್ ಡಿ ಮಿಷನ್ ರಾಜೇಶ್ ಭಂಡಾರಿ ಧ್ವಜಾರೋಹಣ ಮಾಡಿದರು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಐಒಎ ಖಜಾಂಚಿ ಆನಂದೇಶ್ವರ್ ಪಾಂಡೆ, ಕ್ರೀಡಾಕೂಟದ ಡೆಪ್ಯುಟಿ ಚೆಫ್ ಡಿ ಮಿಷನ್ ಅನಿಲ್ ಧೂಪರ್ ಮತ್ತು ಇತರ ಐಒಎ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಹಿಂದಿನ ಆವೃತ್ತಿಯಲ್ಲಿ ಭಾರತ 66 ಪದಕಗಳನ್ನು ಗಳಿಸಿತ್ತು. ಇದರಲ್ಲಿ 26 ಚಿನ್ನದ ಪದಕಗಳನ್ನು ಭಾರತ ಗೆದ್ದಿತ್ತು. ಶೂಟಿಂಗ್​​ನಲ್ಲೇ ಏಳು ಚಿನ್ನದ ಪದಕಗಳು ಸೇರಿ ಒಟ್ಟು 16 ಪದಕಗಳು ಬಂದಿದ್ದವು.

ಈಗ ಬರ್ಮಿಂಗ್‌ಹ್ಯಾಮ್‌ನಲ್ಲಿ 15 ಕ್ರೀಡಾ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಆದರೆ, ಈ ಬಾರಿ ಶೂಟಿಂಗ್ ಮತ್ತು ಬಿಲ್ಲುಗಾರಿಕೆ ಸೇರಿಸದಿರುವುದು ಕಾರಣ ಭಾರತ ಪದಕಗಳ ಮೇಲೆ ಕಪ್ಪು ಛಾಯೆ ಬೀರುವ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆದಾಗ್ಯೂ, ಪ್ಯಾರಾ ಸ್ಪೋರ್ಟ್ಸ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಕೆಲ ಪದಕಗಳನ್ನು ಗಳಿಸುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ:ಕಾಮನ್​ವೆಲ್ತ್​ ಕ್ರೀಡಾಕೂಟ: ರಾಷ್ಟ್ರ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶ; ದೊಡ್ಡ ಗೌರವ ಎಂದ ಸಿಂಧು

ABOUT THE AUTHOR

...view details