ಕರ್ನಾಟಕ

karnataka

Hockey World Cup: 1972ರ ಮ್ಯೂನಿಚ್​ ಒಲಿಂಪಿಕ್ಸ್‌ನ ಭಾರತದ ಅಗ್ರ ಸಾಧನೆ

By

Published : Jan 10, 2023, 7:43 PM IST

ಭಾರತದಲ್ಲಿ ಆಯೋಜನೆಗೊಂಡಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್ - ಜನವರಿ 13 ರಿಂದ 15ರ ವರೆಗೆ ನಡೆಯಲಿರುವ ಪಂದ್ಯಾವಳಿಗಳು - 47 ವರ್ಷಗಳ ಬಳಿಕ ವಿಶ್ವಕಪ್​ ಗೆಲ್ಲುವ ತವಕದಲ್ಲಿ ಭಾರತ. ​

India Hockey Team
ಮ್ಯೂನಿಚ್​ ಒಲಿಂಪಿಕ್ಸ್‌ನ ಭಾರತದ ಅಗ್ರ ಸಾಧನೆ

ನವದೆಹಲಿ: ಇನ್ನು ಮೂರು ದಿನದಲ್ಲಿ ಭಾರತದಲ್ಲಿ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಆಯೋಜಿಸಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್​ ಆರಂಭವಾಗಲಿದೆ. 15ನೇ ಆವೃತ್ತಿಯು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಜನವರಿ 13 ರಿಂದ 29 ರವರೆಗೆ ನಡೆಯಲಿದೆ. 47 ವರ್ಷದ ನಂತರ ಮತ್ತೆ ಕಪ್​ ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತ ತಂಡ ಇದೆ.

1972ರ ಮ್ಯೂನಿಚ್​ ಒಲಿಂಪಿಕ್ಸ್‌ನ ಭಾರತದ ಅಗ್ರ ಸಾಧನೆ

ಈ ಮಹಾನ್ ಹಾಕಿ ಕದನದಲ್ಲಿ, ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ, ಪೂಲ್ ಬಿ ಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ, ಪೂಲ್, ಸಿ ಯಲ್ಲಿ ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್​ ಮತ್ತು ಪೂಲ್, ಡಿ ನಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ. ಇನ್ನು ಮೂರು ದಿನದಲ್ಲಿ ಪಂದ್ಯಗಳು ಆರಂಭವಾಗಲಿರುವುದರಿಂದ ಬಹುತೇಕ ತಂಡಗಳು ಭಾರತಕ್ಕೆ ಬಂದಿಳಿದಿವೆ.

ಮ್ಯೂನಿಚ್​ ಒಲಿಂಪಿಕ್ಸ್‌

1928, 1932, 1936, 1948, 1952, 1956, 1964 ಮತ್ತು 1980ರ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕಗಳನ್ನು ಗಳಿಸಿತ್ತು. 2021ರಲ್ಲಿ ಜಪಾನ್​ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಹಾಕಿ ತಂಡ 41 ವರ್ಷಗಳ ಪದಕದ ಕೊರತೆ ನೀಗಿಸಿತು. 1975ರಲ್ಲಿ ಧ್ಯಾನಚಂದ್ ಅವರು ಗಳಿಸಿ ಗೋಲುಗಳು ಭಾರತವನ್ನು ವಿಶ್ವಚಾಂಪಿಯನ್​ ಆಗಿ ಮಾಡಿತ್ತು. ಇದಕ್ಕೂ ಮೊದಲು 1971ರಲ್ಲಿ ಪಾಕಿಸ್ತಾನ ಕಪ್​ ಗೆದ್ದಿತ್ತು. 1973ರಲ್ಲಿ ಸೆಮಿಫೈನಲ್​ನಲ್ಲಿ ನೆರೆಯ ರಾಷ್ಟ್ರ ಪಾಕ್​ ಅನ್ನು ಭಾರತ ಸೋಲಿಸಿತ್ತು. 1975ರಲ್ಲಿ ಪೈನಲ್​ ಇಂಡೋ ಪಾಕ್​ ಪಂದ್ಯವಾಗಿತ್ತು. ಇದರಲ್ಲಿ ಭಾರತ ಗೆದ್ದು ಇತಿಹಾಸ ಸೃಷ್ಟಸಿತ್ತು.

ಹಾಕಿಯಲ್ಲಿ ಭಾರತದ ಪ್ರದರ್ಶನ: ಭಾರತೀಯ ಹಾಕಿ ತಂಡ 1970 ರಿಂದ 80ರ ನಡುವಿನ ಹತ್ತು ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. 1971ರಲ್ಲಿ ಪಾಕಿಸ್ತಾನದ ನೂರ್​ ಖಾನ್​ ಅವರ ಪ್ರಸ್ತಾವನೆಯಂತೆ ಹಾಕಿ ವಿಶ್ವಕಪ್​ ಆರಂಭವಾಗಿತ್ತು. ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದ ಈ ಹಾಕಿ ವಿಶ್ವಕಪ್​ ಅಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಸ್ಪೇನ್‌ನ ಬಾರ್ಸಿಲೋನಾಗೆ ವರ್ಗಾಯಿಸಲಾಗಿತ್ತು. ಮೊದಲ ವಿಶ್ವಕಪ್​ ಪಂದ್ಯದಲ್ಲಿ ಆತಿಥೇಯ ಸ್ಪೇನ್ ಸೋಲಿಸಿ ವಿಶ್ವಕಪ್​ ಮುಡಿಗೇರಿಸಿಕೊಂಡಿತ್ತು. ಈ ವಿಶ್ವಕಪ್​ನಲ್ಲಿ ಭಾರತ ಸೆಮಿಸ್​ನಲ್ಲಿ ಪಾಕ್​ನಿಂದ ಸೋಲನುಭವಿಸಿ ಕಿನ್ಯಾದ ವಿರುದ್ಧ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಮ್ಯೂನಿಚ್ ಒಲಿಂಪಿಕ್ಸ್: 1972ರಲ್ಲಿ ಮ್ಯೂನಿಚ್​ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಪ್ಲೇ - ಆಫ್‌ನಲ್ಲಿ ನೆದರ್ಲ್ಯಾಂಡ್ಸ್ ಅನ್ನು ಸೋಲಿಸುವ ಮೂಲಕ ಕಂಚ್ಚು ಗೆದ್ದುಕೊಂಡಿತ್ತು. ಈ ವೇಳೆ, ಭಾರತ ತಂಡದಲ್ಲಿ ಅಜಿತ್ಪಾಲ್ ಸಿಂಗ್, ಹಾರ್ಮಿಕ್ ಸಿಂಗ್, ಚಾರ್ಲ್ಸ್ ಕಾರ್ನೆಲಿಯಸ್, ಹರ್ಚರಣ್ ಸಿಂಗ್, ಗಣೇಶ್, ವಿಜೆ ಫಿಲಿಪ್ಸ್, ಹರ್ಬಿಂದರ್ ಸಿಂಗ್ ಮತ್ತು ಬಿಪಿ ಗೋವಿಂದ ಎಂ ಪಿ ಇದ್ದರು. ನೆದರ್ಲ್ಯಾಂಡ್ಸ್, ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೀನ್ಯಾದಂತಹ ತಂಡಗಳನ್ನು ಹಿಂದಿಕ್ಕಿ ಗುಂಪಿನ ಅಗ್ರ ತಂಡವಾಗಿ ಭಾರತ ಹೊರಹೊಮ್ಮಿತ್ತು.

ವಿಶ್ವಕಪ್​ನ ಮೂರನೇ ಆವೃತ್ತಿಯಲ್ಲಿ ಭಾರತ ವಿಶ್ವಕಪ್​ ಗೆದ್ದುಕೊಂಡಿತ್ತು. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು ಭಾರತ ಫೈನಲ್​​ನಲ್ಲಿ ಮಣಿಸಿತ್ತು. ಪಾಕ್​ ಮತ್ತು ಭಾರತದ ನಡುವೆ ನಡೆದ ಈ ಪಂದ್ಯದಲ್ಲಿ ಧ್ಯಾನ್​ಚಂದ್​ ಅವರು ಗಳಿಸಿದ ಗೋಲ್​ 2-1ರ ಅಂತದ ಗೆಲುವನ್ನು ಗಳಿಸಿತ್ತು.

ಇದನ್ನೂ ಓದಿ:Hockey World Cup: ಹಾಕಿಯಲ್ಲಿ 28 ಪದಕ ಗೆದ್ದಿರುವ ಭಾರತ: ಸ್ವಾತಂತ್ರ್ಯ ಪೂರ್ವದಲ್ಲೇ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಸಿಹಿ

ABOUT THE AUTHOR

...view details