ಕರ್ನಾಟಕ

karnataka

ಥಾಮಸ್ ಕಪ್: ಇಂಡೋನೇಷ್ಯಾ ಮಣಿಸಿ ಇತಿಹಾಸ ಬರೆದ ಭಾರತದ ಬ್ಯಾಡ್ಮಿಂಟನ್​ ತಂಡ

By

Published : May 15, 2022, 4:04 PM IST

India wins Thomas cup.. ಭಾರತೀಯ ಪುರುಷರ ಬ್ಯಾಡ್ಮಿಂಟನ್​ ತಂಡವು ಇಂಡೋನೇಷ್ಯಾ ಮಣಿಸಿ ಚೊಚ್ಚಲ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

India beat Indonesia 3-0 to win maiden Thomas Cup
ಥಾಮಸ್ ಕಪ್: ಇಂಡೋನೇಷ್ಯಾ ಮಣಿಸಿ ಇತಿಹಾಸ ಬರೆದ ಭಾರತ ಬ್ಯಾಡ್ಮಿಂಟನ್​ ತಂಡ

ಬ್ಯಾಂಕಾಕ್:ಇಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ 3-0 ಅಂತರದಿಂದ ಮೇಲುಗೈ ಸಾಧಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್​ ತಂಡವು ಚೊಚ್ಚಲ ಥಾಮಸ್ ಕಪ್ ಎತ್ತಿಹಿಡಿದು ಹೊಸ ಇತಿಹಾಸ ಬರೆದಿದೆ.

ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಸ್ಮರಣೀಯ ಪ್ರದರ್ಶನದ ಮೂಲಕ ಭಾರತವು ಶ್ರೇಷ್ಠ ಸಾಧನೆಗೆ ಪಾತ್ರವಾಗಿದೆ. ನಾಕೌಟ್ ಹಂತಗಳ ಬಳಿಕ ಸೇನ್ ಅವರು ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ವಿಶ್ವದ ಐದನೇ ಶ್ರೇಯಾಂಕದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 8-21, 21-17, 21-16 ಅಂತರದಲ್ಲಿ ಜಯಗಳಿಸಿದರು. ಮನೋಬಲ ಮತ್ತು ಕೌಶಲ್ಯಯುತ ಅದ್ಭುತ ಪ್ರದರ್ಶನ ತೋರಿದರು.

ದೇಶದ ಅತ್ಯುತ್ತಮ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ಗೇಮ್‌ನಲ್ಲಿ ನಾಲ್ಕು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡಿತಲ್ಲದೆ, ಅದ್ಭುತ ಪ್ರದರ್ಶನ ನೀಡಿದರು. ಶ್ರೀಕಾಂತ್ ನಂತರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೊನಾಟನ್ ಕ್ರಿಸ್ಟಿಯನ್ನು 48 ನಿಮಿಷಗಳಲ್ಲಿ 21-15, 23-21ರಿಂದ ಸೋಲಿಸಿ ಸ್ಪರ್ಧೆಗೆ ಅಂತ್ಯ ಹಾಡಿದರು.

ಫ್ರಧಾನಿ ಶ್ಲಾಘನೆ:ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 'ಭಾರತದ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ! ಥಾಮಸ್ ಕಪ್ ಗೆದ್ದ ಭಾರತದ ಗೆಲುವಿಗೆ ಇಡೀ ದೇಶವೇ ಸಂಭ್ರಮದಲ್ಲಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಭವಿಷ್ಯದ ಟೂರ್ನಿಗಳಿಗೆ ಶುಭವಾಗಲಿ. ಈ ಗೆಲುವು ಹಲವು ಕ್ರೀಡಾಪಟುಗಳಿಗೆ ಪ್ರೇರಣೆ ನೀಡಲಿದೆ' ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಬ್ರೆಜಿಲ್​ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್​ನಲ್ಲಿ ಬಥಿಂಡಾದ ಕುವರಿ ಶ್ರೇಯಾಗೆ ಸ್ವರ್ಣ ಪದಕ

ABOUT THE AUTHOR

...view details