ಕರ್ನಾಟಕ

karnataka

19ರ ಹರೆಯದಲ್ಲೇ ಯುಎಸ್​ ಓಪನ್​ ಕಿರೀಟ! 17 ವರ್ಷದ ಬಳಿಕ ನಡಾಲ್​ ದಾಖಲೆ ಸರಿಗಟ್ಟಿದ ಅಲ್ಕರಜ್

By

Published : Sep 12, 2022, 6:45 AM IST

Updated : Sep 12, 2022, 7:12 AM IST

ಭಾನುವಾರ ನಡೆದ ಯುಎಸ್​ ಓಪನ್ 2022 ಪುರುಷರ ಸಿಂಗಲ್ಸ್‌​ ಟೆನ್ನಿಸ್ ಫೈನಲ್‌ ಪಂದ್ಯಾವಳಿ ಬಹಳ ರೋಚಕತೆಯಿಂದ ಕೂಡಿತ್ತು. ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಜಿದ್ದಾಜಿದ್ದಿಯಲ್ಲಿ ಈ ಬಾರಿಯ ಪ್ರತಿಷ್ಟಿತ ಪ್ರಶಸ್ತಿ​ ಸ್ಪೇನ್‌ನ ಅಲ್ಕರಜ್​ ಪಾಲಾಯಿತು.

Carlos beats Casper Ruud  Alcaraz first Grand Slam title in US Open  US Open 2022  ಅಲ್ಕರಾಜ್​ಗೆ ಪಾಲಾದ ಯುಎಸ್​ ಓಪನ್​ 2022 ಟೈಟಲ್  ನಡಾಲ್​ ದಾಖಲೆ ಸರಿಗಟ್ಟಿದ ಯುವ ಆಟಗಾರ  ಯುಎಸ್​ ಓಪನ್​ 2022 ಟೆನಿಸ್​ ಪಂದ್ಯಾವಳಿ  ಸ್ಪ್ಯಾನಿಷ್ ದಂತಕಥೆ ರಾಫೆಲ್ ನಡಾಲ್  ಯುಎಸ್​ ಓಪನ್​ 2022
ಯುಎಸ್​ ಓಪನ್​ 2022 ಟೈಟಲ್

ನ್ಯೂಯಾರ್ಕ್:ಭಾನುವಾರ ನಡೆದಪ್ರತಿಷ್ಟಿತ ಯುಎಸ್​ ಓಪನ್​ 2022 ಪುರುಷರ ಸಿಂಗಲ್ಸ್‌ ಟೆನಿಸ್​ ಪಂದ್ಯಾವಳಿಯ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್‌ ಅಲ್ಕರಜ್‌ ಮತ್ತು ನಾರ್ವೆಯ ಕ್ಯಾಸ್ಪರ್‌ ರೂಡ್ ಅನಿರೀಕ್ಷಿತವಾಗಿ ಪ್ರಶಸ್ತಿ ಕಣದಲ್ಲಿ ನಿಂತು ಮುಖಾಮುಖಿಯಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಕುತೂಹಲದ ಸಂಗತಿ ಎಂದರೆ, ಇಬ್ಬರಿಗೂ ಇದು ಮೊದಲ ಯುಎಸ್ ಓಪನ್ ಫೈನಲ್ ಆಗಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ಆಟಗಾರರು ನೀನಾ-ನಾನಾ ಎಂಬಂತೆ ಸ್ಪರ್ಧಿಸಿದರು. ಅಂತಿಮವಾಗಿ ಗೆಲುವು ಸ್ಪೇನ್‌ನ 19 ವರ್ಷದ ಆಟಗಾರ ಅಲ್ಕರಜ್‌ಗೆ ಒಲಿಯಿತು.

ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಹೋರಾಟದಲ್ಲಿ 6-4, 2-6, 7-6(1), 6-3 ಸೆಟ್‌ಗಳಿಂದ ಅಲ್ಕರಜ್​ ಗೆದ್ದು ಸಂಭ್ರಮಿಸಿದರು. ಇದರೊಂದಿಗೆ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನೂ ಪಡೆದಿದ್ದಾರೆ.

ಸ್ಪ್ಯಾನಿಷ್ ದಂತಕಥೆ ರಾಫೆಲ್ ನಡಾಲ್ 2005 ರಲ್ಲಿ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಕಿರಿಯ ಆಟಗಾರನಾಗಿ (19 ವರ್ಷ) ಗೆದ್ದಿದ್ದರು. ಅಂದಿನಿಂದ ಆ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. ಇದೀಗ ಅಲ್ಕರಜ್ ಈ ದಾಖಲೆ ಸರಿಗಟ್ಟಿದ್ದಾರೆ. ಈ ಗೆಲುವಿನ ಮೂಲಕ ವಿಶ್ವ ಟೆನಿಸ್‌ನಲ್ಲಿ ಕೇವಲ 19ನೇ ವಯಸ್ಸಿನಲ್ಲಿಯೇ ನಂಬರ್ ಒನ್ ಶ್ರೇಯಾಂಕ ಹೊಂದಿದ ಮೊದಲ ಆಟಗಾರನಾಗಿ ಅಲ್ಕರಜ್​ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ:ದಕ್ಷಿಣ ಭಾರತ ಜೂನಿಯರ್ ಅಥ್ಲೆಟಿಕ್ಸ್​ನಲ್ಲಿ ಶಿರಸಿ ಹುಡುಗನ ಚಿನ್ನದ ಬೇಟೆ.. ಹ್ಯಾಮರ್ ಎಸೆತದಲ್ಲಿ ದಾಖಲೆ ನಿರ್ಮಾಣ

Last Updated : Sep 12, 2022, 7:12 AM IST

ABOUT THE AUTHOR

...view details