ಕರ್ನಾಟಕ

karnataka

ವೀಕ್ಷಿಸಿ: ರೊನಾಲ್ಡೋ 'ಕೋಲಾ'ಹಲ ಸೃಷ್ಟಿಸಿದ ಬಳಿಕ ಬಿಯರ್ ಕೆಳಗಿಟ್ಟ ಫ್ರಾನ್ಸ್‌ ಆಟಗಾರ

By

Published : Jun 17, 2021, 9:51 AM IST

ಯುಇಎಫ್​ಎ ಯೂರೋ-2020 ಫುಟ್ಬಾಲ್‌ ಟೂರ್ನಮೆಂಟ್​ನ ಪಂದ್ಯದಲ್ಲಿ ಜರ್ಮನಿ ವಿರುದ್ಧ 1-0ರಲ್ಲಿ ಫ್ರಾನ್ಸ್​ ಜಯಗಳಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಆಟಗಾರ ಪೌಲ್ ಪೊಗ್ಬಾ ಭಾಗವಹಿಸಿದ್ದರು. ಈ ವೇಳೆ ತಮ್ಮ ಮುಂದಿನ ಮೇಜಿನ ಮೇಲಿದ್ದ ಬಿಯರ್ ಬಾಟಲಿಯನ್ನು ಅವರು ಕೆಳಗಿಟ್ಟು, ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದರು.

paul pogba
paul pogba

ಮ್ಯೂನಿಚ್(ಜರ್ಮನಿ):ಫ್ರಾನ್ಸ್​​​ನಫುಟ್​ಬಾಲ್ ಆಟಗಾರ ಪೌಲ್ ಪೊಗ್ಬಾ ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಹಾದಿಯನ್ನೇ ತುಳಿದಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ತಮ್ಮ ಮುಂದಿದ್ದ ಬಿಯರ್ ಬಾಟಲಿಯನ್ನು ತೆಗೆದು ಅವರು ಕೆಳಗಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುಇಎಫ್​ಎ ಯೂರೋ-2020 ಟೂರ್ನಮೆಂಟ್​ನ ಪಂದ್ಯದಲ್ಲಿ ಜರ್ಮನಿ ವಿರುದ್ಧ 1-0ರಲ್ಲಿ ಫ್ರಾನ್ಸ್​ ಜಯಗಳಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಪೌಲ್ ಪೊಗ್ಬಾ ಭಾಗವಹಿಸಿದ್ದರು. ಈ ವೇಳೆ ತಮ್ಮ ಮುಂದೆ ಮೇಜಿನ ಮೇಲಿದ್ದ ಬಿಯರ್ ಬಾಟಲಿಯನ್ನು ಕೆಳಗಿಟ್ಟರು.

ಯುಇಎಫ್​ಎ ಯೂರೋ-2020 ಟೂರ್ನಮೆಂಟ್​ನಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. ಈ ಮೊದಲು ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇದೇ ರೀತಿಯಲ್ಲಿ ಕೊಕಾಕೋಲಾ ಬಾಟಲಿಯೊಂದನ್ನು ಪಕ್ಕಕ್ಕೆ ಎತ್ತಿಟ್ಟು, 'ನೀರು ಕುಡಿಯಿರಿ ಆರೋಗ್ಯಕ್ಕೆ ಒಳ್ಳೆಯದು' ಎಂಬ ಸಂದೇಶ ನೀಡಿದ್ದರು.

ಪೌಲ್ ಪೊಗ್ಬಾ ಮುಸ್ಲಿಂ ಧರ್ಮೀಯ ಆಗಿದ್ದು ಮದ್ಯ ಸೇವನೆ ವರ್ಜಿತ. ಹಾಗಾಗಿ, ಅವರು ಬಿಯರ್ ಬಾಟಲಿಯನ್ನು ಪಕ್ಕಕ್ಕೆ ಸರಿಸಿದರು ಎಂದು ಹೇಳಲಾಗುತ್ತಿದೆ.

ABOUT THE AUTHOR

...view details