ಕರ್ನಾಟಕ

karnataka

ಕಾಂಗರೂ ಪಡೆಗೆ ಭಾರಿ ಹಿನ್ನಡೆ: ಸ್ಟಾರ್​ ಆಟಗಾರ ಮ್ಯಾಕ್ಸ್​ವೆಲ್​ಗೆ ಗಾಯ.. ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಅಲಭ್ಯ

By ETV Bharat Karnataka Team

Published : Nov 1, 2023, 5:01 PM IST

Glenn Maxwell Injury: ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಗಾಲ್ಫ್​ ಆಡುವ ವೇಳೆ ಗಾಯ ಮಾಡಿಕೊಂಡಿದ್ದು ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

Glenn Maxwell
Glenn Maxwell

ಅಹಮದಾಬಾದ್​ (ಗುಜರಾತ್​): ಐಸಿಸಿ ವಿಶ್ವಕಪ್ 2023ರಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡ ನವೆಂಬರ್ 4ರಂದು ಅಹಮದಾಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ನ್ಯೂಜಿಲೆಂಡ್ ಪಂದ್ಯದ ನಂತರ ಆಸ್ಟ್ರೇಲಿಯಾಕ್ಕೆ ಒಂದು ವಾರದದ ಬಿಡುವಿತ್ತು. ಹೀಗಾಗಿ ಆಸಿಸ್ ಆಟರಾರರು ವಿಶ್ರಾಂತಿಯಲ್ಲಿ ಇದ್ದರು. ಬಿಡುವಿನ ಸಮಯದಲ್ಲಿ ಮ್ಯಾಕ್ಸ್​ವೆಲ್ ಗಾಲ್ಫ್ ಆಡಿದ್ದಾರೆ. ಈ ವೇಳೆ, ಅವರು ಗಾಯಗೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧ ಆಡಲು ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ ನವೆಂಬರ್​ 4ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಪಂದ್ಯ ಆಡಲಿದೆ. ಈ ಪಂದ್ಯ ಕಾಂಗರೂ ಪಡೆಗೆ ಸೆಮೀಸ್​ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮ್ಯಾಕ್ಸ್​ವೆಲ್ ಅಲಭ್ಯತೆ ಆಸಿಸ್​ಗೆ ಕಾಡುವ ಸಾಧ್ಯತೆ ಇದೆ.

ಐದು ಬಾರಿ ವಿಶ್ವ ಚಾಂಪಿಯನ್​ ಆಗಿದ್ದ ಆಸ್ಟ್ರೇಲಿಯಾ 2023ರ ವಿಶ್ವಕಪ್​​ನಲ್ಲಿ ನಿರಾಸೆಯ ಆರಂಭ ಪಡೆಯಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡ ಕಾಂಗರೂಪಡೆ ನಂತರ ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿತು. ಇದರಿಂದ ತಂಡ ವಿಶ್ವಕಪ್​ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇನ್ನೊಂದು ಗೆಲುವು ಆಸ್ಟ್ರೇಲಿಯಾಕ್ಕೆ ಸೆಮೀಸ್ ಪ್ರವೇಶ ಪಕ್ಕಾ ಆಗಲಿದೆ.

ಮ್ಯಾಕ್ಸ್‌ವೆಲ್ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವೇಗದ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಮ್ಯಾಕ್ಸ್‌ವೆಲ್ 2023ರ ವಿಶ್ವಕಪ್‌ನಲ್ಲಿ 6 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 196 ರನ್ ಗಳಿಸಿದ್ದಾರೆ. 40 ಎಸೆತಗಳಲ್ಲಿ ಶತಕ ಗಳಿಸಿದ್ದು, ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವೇಗದ ಶತಕವಾಗಿದೆ. ಕಳೆದ ಪಂದ್ಯದಲ್ಲಿ ಗ್ಲೆನ್​ ನ್ಯೂಜಿಲೆಂಡ್ ವಿರುದ್ಧ 41 ರನ್‌ಗಳ ಇನ್ನಿಂಗ್ಸ್ ಸಹ ಆಡಿದ್ದರು.

ಮ್ಯಾಕ್ಸ್‌ವೆಲ್ ಅವರ ಏಕದಿನ ವೃತ್ತಿಜೀವನದಲ್ಲಿ ಸ್ಫೋಟಕ ಆಲ್‌ರೌಂಡರ್ ಆಗಿದ್ದು, 134 ಏಕದಿನ ಪಂದ್ಯದ 124 ಇನ್ನಿಂಗ್ಸ್‌ನಿಂದ 3691 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 3 ಶತಕಗಳು ಮತ್ತು 23 ಅರ್ಧ ಶತಕಗಳು ದಾಖಲಾಗಿವೆ. ಅವರು 107 ಇನ್ನಿಂಗ್ಸ್‌ಗಳಲ್ಲಿ 68 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:ಸಂಪೂರ್ಣ ಚೇತರಿಸಿಕೊಳ್ಳದ ಹಾರ್ದಿಕ್​ ಪಾಂಡ್ಯ: ಶ್ರೀಲಂಕಾ, ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಅಲಭ್ಯ

ABOUT THE AUTHOR

...view details