ಕರ್ನಾಟಕ

karnataka

Virat Kohli: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವೈಫಲ್ಯ- ವಿರಾಟ್‌ ಕೊಹ್ಲಿ ಹೀಗಂದಿದ್ದೇಕೆ?

By

Published : Jun 9, 2023, 4:19 PM IST

ಒವೆಲ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ನಲ್ಲಿ ಭಾರತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದೆ. ಮೇಲಿನ ಕ್ರಮಾಂಕದ ನಾಲ್ವರು ಬ್ಯಾಟರ್​ಗಳು 20 ರನ್​ ಗಳಿಸುವ ಮುನ್ನವೇ ವಿಕೆಟ್​ ಒಪ್ಪಿಸಿದ್ದಾರೆ. ಈ ನಡುವೆ ವಿರಾಟ್‌ ಕೊಹ್ಲಿ ಇನ್‌ಸ್ಟಾ ಪೋಸ್ಟ್‌ವೊಂದು ಕುತೂಹಲ ಕೆರಳಿಸಿದೆ.

Virat Kohli post
ಕೊಹ್ಲಿ ಹೀಗಂದದ್ದು ಯಾಕೆ?

ಆಸ್ಟ್ರೇಲಿಯಾ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತದ ಬ್ಯಾಟರ್‌ಗಳು ಮುಗ್ಗರಿಸಿದ್ದಾರೆ. ಎರಡನೇ ದಿನ ಬ್ಯಾಟಿಂಗ್​​ಗೆ ಇಳಿದ ಭಾರತ ದಿನದಾಟದ ಅಂತ್ಯಕ್ಕೆ 151 ರನ್​ ಗಳಿಸಿ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಇದೀಗ 3ನೇ ದಿನದಾಟ ನಡೆಯುತ್ತಿದ್ದು ಕ್ರೀಸ್​ನಲ್ಲಿ ಅನುಭವಿ ಬ್ಯಾಟರ್​ ಅಜಿಂಕ್ಯಾ ರಹಾನೆ ಇದ್ದಾರೆ.

ಭಾರತದ ಬ್ಯಾಟರ್​ಗಳು ತರಗಲೆಗಳಂತೆ ವಿಕೆಟ್​ ಒಪ್ಪಿಸಿದ ನಂತರ ಉಪಹಾರ ಸೇವನೆ ಮಾಡುತ್ತಿರುವ ಫೋಟೋಗಳು ಟ್ವಿಟರ್​ನಲ್ಲಿ ಹರಿದಾಡುತ್ತಿದ್ದು ಟೀಕೆಗಳಿಗೆ ಗುರಿಯಾಗಿವೆ. ವಿಶೇಷವಾಗಿ ವಿರಾಟ್​ ಕೊಹ್ಲಿ, ಇಶಾನ್​ ಕಿಶನ್​ ಮತ್ತು ಶುಭಮನ್​ ಗಿಲ್​ ಜೊತೆಯಲ್ಲಿ ನಗುತ್ತಾ ಮಾತನಾಡುತ್ತಿರುವ ಫೋಟೋ ವೈರಲ್​ ಆಗಿದ್ದು, ಐಪಿಎಲ್​ನಲ್ಲಿ ಫ್ರಾಂಚೈಸಿಗಳಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ, ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಕೋರ್​ ಮಾಡಲು ಪರದಾಡುತ್ತಾರೆ ಎಂದು ಕ್ಯಾಪ್ಶನ್​ಗಳನ್ನು ಬರೆದು ವ್ಯಂಗ್ಯವಾಡುತ್ತಿದ್ದಾರೆ.

ವಿರಾಟ್​ ಕೊಹ್ಲಿ ಹೇಳಿದ್ದೇನು?: ಇದಕ್ಕೆ ಉತ್ತರವೆಂಬಂತೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿಯೊಂದನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಅಮೆರಿಕನ್ ಲೇಖಕ ಮಾರ್ಕ್ ಮ್ಯಾನ್ಸನ್ ಅವರ, "ಇತರ ಜನರ ಅಭಿಪ್ರಾಯದ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು" ಎಂಬ ಹೇಳಿಕೆ ಉಲ್ಲೇಖಿಸಿದ್ದಾರೆ.

ಬ್ಯಾಟಿಂಗ್​ನಲ್ಲಿ ಎಡವಿದ ಭಾರತ: ಮೊದಲ ದಿನ ಭಾರತ ಪ್ರಥಮ ಅವಧಿಯಲ್ಲಿ ಎರಡು ವಿಕೆಟ್​ ಪಡೆದರೆ, ಎರಡನೇ ಸೆಷನ್​ನಲ್ಲಿ 1 ವಿಕೆಟ್​ ಮಾತ್ರ ಕಬಳಿಸಿತು. ನಂತರ ಆಸ್ಟ್ರೇಲಿಯಾದ ಹೆಡ್​ ಮತ್ತು ಸ್ಮಿತ್​ ಬ್ಯಾಟಿಂಗ್​ ಪಾರಮ್ಯ ಮೆರೆದರು. ಇದರಿಂದ ಬೃಹತ್​ ಮೊತ್ತದತ್ತ ಆಸಿಸ್​ ಮುಖ ಮಾಡಿತು. ಹೆಡ್​ 90 ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿ ದಾಖಲೆ ಬರೆದರು.

ಎರಡನೇ ದಿನ ಭಾರತದ ಬೌಲರ್​ಗಳು ಕಮ್​ಬ್ಯಾಕ್​ ಮಾಡಿದರು. ಸಿರಾಜ್​ 3 ವಿಕೆಟ್​ ಪಡೆದು ಕಾಂಗರೂ ಪಡೆಗೆ ಮಾರಕವಾದರು. ಇದರಿಂದ 500+ ರನ್​ ಗಳಿಸಿ ಡಿಕ್ಲೇರ್ ಮಾಡಬಹುದು ಎಂದು ಕ್ರಿಕೆಟ್​ ವಿಮರ್ಶಕರ ಲೆಕ್ಕಾಚಾರ ಬುಡಮೇಲಾಯಿತು. 469 ರನ್‌ಗಳ​ ದೊಡ್ಡ ಮೊತ್ತದ ಮೊದಲ ಇನ್ನಿಂಗ್ಸ್​ ಅನ್ನು ಆಸಿಸ್ ಕಟ್ಟಿತು.

469 ರನ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತದ ಜೊತೆಗೆ ಮತ್ತೆರಡು ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ಆರಂಭಿಕರಾದ ಶುಭಮನ್​ ಗಿಲ್​ ಔಟ್​ಸ್ವಿಂಗ್​ ಬಾಲ್​ ಎಂದು ಡ್ರಾಪ್​ ಮಾಡಿದ ಚೆಂಡು ಇನ್​ಸ್ವಿಂಗ್​ ಆಗಿ ವಿಕೆಟ್‌ಗೆ ಬಡಿದರೆ, ರೋಹಿತ್​ ಶರ್ಮಾ ಎಲ್​ಬಿಡಬ್ಲ್ಯೂಗೆ ಬಲಿಯಾದರು. ಗಿಲ್​ ಇನ್ನಿಂಗ್ಸ್​ನಲ್ಲಿ 13 ರನ್ ಕಲೆಹಾಕಿದರೆ, ರೋಹಿತ್​ ಶರ್ಮಾ 15 ರನ್​ ಮಾತ್ರ ಗಳಿಸಿದರು.

ವಿದೇಶಿ ಪಿಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅನುಭವಿ ವಿರಾಟ್​ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಂದರೂ ಬೃಹತ್​ ಜೊತೆಯಾಟ ನೀಡಲಿಲ್ಲ. ಕೊಹ್ಲಿ (14) ಯನ್ನು ಮಿಚೆಲ್​ ಸ್ಟಾರ್ಕ್​ ಔಟ್​ ಸ್ವಿಂಗ್​ನಲ್ಲಿ ಕಾಡಿದರೆ, ಗ್ರೀನ್​ ಪೂಜಾರ (14) ಅವರನ್ನು ಕ್ಲೀನ್​ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​​ ಬಿದ್ದ ಬಳಿಕ ಬಂದ ರಹಾನೆ ಮತ್ತು ಜಡೇಜಾ ಜೋಡಿ ತಂಡಕ್ಕೆ ಆಸರೆಯಾದರು. ಜಡೇಜಾ ಬಿರುಸಿನ ಬ್ಯಾಟಿಂಗ್​ ಮಾಡಿ 7 ಬೌಂಡರಿ ಮತ್ತು 1 ಸಿಕ್ಸ್​ನಿಂದ 48 ರನ್​ ಕಲೆಹಾಕಿ ವಿಕೆಟ್​ ಕೊಟ್ಟರೆ ರೆಹಾನೆ ಎರಡನೇ ದಿನದ ಆಟದ ಅಂತ್ಯದ ವರೆಗೆ ವಿಕೆಟ್​ ಕಾಯ್ದುಕೊಂಡರು.

ಮೂರನೇ ದಿನದ ಆಟದ ಆರಂಭದಲ್ಲಿ ಕ್ರೀಸ್​ನಲ್ಲಿದ್ದ ಶ್ರೀಕರ್​ ಭರತ್​ ವಿಕೆಟ್​ ಕೊಟ್ಟಿದ್ದಾರೆ. ಅಜಿಂಕ್ಯಾ ರೆಹಾನೆ ಅರ್ಧಶತಕ ಗಳಿಸಿ ಆಡುತ್ತಿದ್ದರೆ, ಶಾರ್ದೂಲ್​ ವಿಕೆಟ್​ ಕಾಯ್ದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ICC WTC Final 2023: ಮರುಕಳಿಸುತ್ತಾ ಲಕ್ಷ್ಮಣ್​​-ದ್ರಾವಿಡ್​ ಜೊತೆಯಾಟ..ಭಾರತಕ್ಕೆ ಭರತ್- ರಹಾನೆಯೇ ಇಂದಿನ ಭರವಸೆ

ABOUT THE AUTHOR

...view details