ಕರ್ನಾಟಕ

karnataka

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ: ವಿರಾಟ್​ ಕೊಹ್ಲಿಯಿಂದ ಹಲವು ದಾಖಲೆಗಳ ನಿರೀಕ್ಷೆ

By ETV Bharat Karnataka Team

Published : Dec 25, 2023, 6:25 PM IST

Virat Kohli records: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಅವರು ಎರಡು ದೊಡ್ಡ ದಾಖಲೆ ಬರೆಯುವ ನಿರೀಕ್ಷೆ ಇದೆ.

virat kohli
virat kohli

ಹೈದರಾಬಾದ್​​: ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ವಿಶ್ವಕಪ್​ ಫೈನಲ್​ ನಂತರ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ 30ರವರೆಗೆ ಸೆಂಚೂರಿಯನ್‌, ಎರಡನೇ ಪಂದ್ಯ ಜನವರಿ 3ರಿಂದ 7 ರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿದೆ.

ಸಂಗಕ್ಕಾರ vs ಕೊಹ್ಲಿ​:ಈ ಪಂದ್ಯಗಳಲ್ಲಿ ವಿರಾಟ್ 66 ರನ್ ಗಳಿಸಿದ ತಕ್ಷಣವೇ ಹೊಸದೊಂದು ದಾಖಲೆ ನಿರ್ಮಿಸುವರು. ತಮ್ಮ ವೃತ್ತಿಜೀವನದಲ್ಲಿ ಈವರೆಗೆ ವಿರಾಟ್ ವರ್ಷವೊಂದರಲ್ಲಿ 2,000 ಅಂತರರಾಷ್ಟ್ರೀಯ ರನ್​ ಗಳಿಸಿದ ಸಾಧನೆಯಲ್ಲಿ ಒಟ್ಟು 6 ಬಾರಿ ಮಾಡಿದ್ದಾರೆ. 2023ರಲ್ಲಿ 2 ಸಾವಿರ ರನ್​ ಪೂರೈಸಲು ಅವರಿಗೆ ಕೇವಲ 66 ರನ್​ಗಳ ಅವಶ್ಯಕತೆ ಇದೆ. ಬಾಕ್ಸಿಂಗ್​​ ಡೇ ಟೆಸ್ಟ್​ನಲ್ಲಿ ಈ ರನ್​ ಗಳಿಸುತ್ತಿದ್ದಂತೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ದಾಖಲೆ ಮುರಿಯುವರು.

ವಿರಾಟ್ ಕೊಹ್ಲಿ

ಸದ್ಯ ಲಂಕಾ ಬ್ಯಾಟರ್​ ಸಂಗಕ್ಕಾರ ಮತ್ತು ವಿರಾಟ್​ ಕೊಹ್ಲಿ ವರ್ಷದಲ್ಲಿ 2,000 ರನ್​ ಪೂರೈಸಿದ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. 2023ರ ಕೊನೆಯ ಪಂದ್ಯವಾದ ಸೆಂಚೂರಿಯನ್ ಟೆಸ್ಟ್‌ನಲ್ಲಿ ವಿರಾಟ್​ 66 ರನ್​ ಗಳಿಸಿದರೆ 7ನೇ ಬಾರಿಗೆ 2,000 ಗಡಿ ದಾಟಿದಂತಾಗುತ್ತದೆ. ಇದರಿಂದ ವಿರಾಟ್​ 7ನೇ ಬಾರಿಗೆ ಈ ಸಾಧನೆ ಮಾಡಲಿದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ಸೆಹ್ವಾಗ್​ vs ಕೊಹ್ಲಿ:ಹರಿಣಗಳ ವಿರುದ್ಧ ಅತಿ ಹೆಚ್ಚು ರನ್​ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್​ (1236) ಮೂರನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸುವ ಅವಕಾಶವೂ ಇದೆ. ರನ್​ ಮಷಿನ್​ ಕೊಹ್ಲಿ 71 ರನ್​ ಗಳಿಸಿದಲ್ಲಿ ವಿರೇಂದ್ರ ಸೆಹ್ವಾಗ್​ ಅವರನ್ನು ಹಿಂದಿಕ್ಕುವರು. ಸೆಹ್ವಾಗ್​ ದಕ್ಷಿಣ ಆಫ್ರಿಕಾ ವಿರುದ್ಧ 1306 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧ 1741 ರನ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ vs ಕೊಹ್ಲಿ: ವಿರಾಟ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 14 ಟೆಸ್ಟ್ ಪಂದ್ಯಗಳ 24 ಇನ್ನಿಂಗ್ಸ್‌ನಲ್ಲಿ 56.18 ಸರಾಸರಿಯಲ್ಲಿ 3 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 1,236 ರನ್ ಗಳಿಸಿದ್ದಾರೆ. ಆಫ್ರಿಕನ್ ನೆಲದಲ್ಲಿ 7 ಪಂದ್ಯಗಳ 14 ಇನ್ನಿಂಗ್ಸ್‌ ಮೂಲಕ 2 ಶತಕ ಮತ್ತು 3 ಅರ್ಧ ಶತಕಗಳೊಂದಿಗೆ 719 ರನ್ ಪೇರಿಸಿದ್ದಾರೆ.

ಇದನ್ನೂ ಓದಿ:ಹಾರ್ದಿಕ್​ ಪಾಂಡ್ಯ ಬಿಕರಿಗೆ ಗುಜರಾತ್​ ಟೈಟಾನ್ಸ್​ಗೆ ₹100 ಕೋಟಿ ನೀಡಿತಾ ಮುಂಬೈ ಇಂಡಿಯನ್ಸ್​?

ABOUT THE AUTHOR

...view details