ಅಬುಧಾಬಿ :ಡೇವಿಡ್ ವೀಸ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ನೆದೆರ್ಲೆಂಡ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ನಮೀಬಿಯಾ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಮೊದಲ ಜಯ ದಾಖಲಿಸಿದೆ.
ಅಬುಧಾಬಿಯ ಸೇಕ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ನೆದರ್ಲೆಂಡ್ಸ್ ನೀಡಿದ್ದ 165 ರನ್ಗಳ ಗುರಿಯನ್ನ ನಮೀಬಿಯಾ 19 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್ಗೆ ಪದಾರ್ಪಣೆ ಮಾಡಿರುವ ನಮೀಬಿಯಾ ಮೊದಲ ಜಯ ಸಾಧಿಸಿತು. 2019ರಲ್ಲಿ ಚುಟುಕು ಕ್ರಿಕೆಟ್ಗೆ ಪದಾರ್ಪಣೆ ಮಾಡಿತ್ತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ಮೂಲದ ಡೇವಿಡ್ ವೀಸ್ 40 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ ಅಜೇಯ 66 ರನ್ ಗಳಿಸಿ ನಮೀಬಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ಗೆರಾಡ್ ಎರಾಸ್ಮಸ್ 22 ಎಸೆತಗಳಲ್ಲಿ 32 ರನ್, ಸ್ಟೇಫನ್ ಬಾರ್ಡ್ 19, ಜೆಜೆ ಸ್ಮಿತ್ ಅಜೆಯ 14 ರನ್ಗಳಿಸಿದರು.