ಹೈದರಾಬಾದ್: ಭಾನುವಾರ ನಡೆದ ಟಿ 20 ವಿಶ್ವಕಪ್ 2021 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡದ 10 ವಿಕೆಟ್ಗಳ ಜಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ, ಹಸಿರು ಅಂಗಿಗಳಲ್ಲಿ ಅಭಿಮಾನಿಗಳು ಐತಿಹಾಸಿಕ ವಿಜಯವನ್ನು ಆನಂದಿಸುತ್ತಿದ್ದಾಗ, ಇತ್ತ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರ ತಂದೆಯ ಕಣ್ಣಲ್ಲಿ ಸಂತೋಷದ ಕಣ್ಣೀರು ಬಂದಿತ್ತು.
T20 World Cup 2021: ಭಾರತದ ವಿರುದ್ಧ ಗೆದ್ದ ಪಾಕ್.. ಭಾವುಕರಾದ ಪಾಕಿಸ್ತಾನ ತಂಡದ ನಾಯಕ ಬಾಬರ್ ತಂದೆ
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 29 ವರ್ಷಗಳ ಬಳಿಕ ಮೊದಲ ಸಲ ಸೋಲು ಕಂಡಿದೆ. ಭಾನುವಾರ ನಡೆದ ಟಿ 20 ವಿಶ್ವಕಪ್ 2021 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡದ 10 ವಿಕೆಟ್ಗಳ ಜಯ ಸಾಧಿಸಿದೆ. ಈ ವೇಳೆ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರ ತಂದೆಯ ಕಣ್ಣಲ್ಲಿ ಸಂತೋಷದ ಕಣ್ಣೀರು ಬಂದಿತು.
ಅಭಿಮಾನಿಗಳಿಂದ ಸುತ್ತುವರಿದಿದ್ದ ಬಾಬರ್ ಆಜಮ್ ಅವರ ತಂದೆ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲ ಬಾರಿಗೆ ಪಾಕ್ ಜಯ ಸಾಧಿಸಿದ ನಂತರ ಭಾವೋದ್ವೇಗಗೊಂಡರು. ಪಾಕಿಸ್ತಾನಿ ಪತ್ರಕರ್ತ ಮಝೆರ್ ಅರ್ಷದ್ ಅವರು ಹಂಚಿಕೊಂಡ ವಿಡಿಯೋದಲ್ಲಿ, ಕ್ರೀಡಾಂಗಣದಲ್ಲಿರುವ ಬಾಬರ್ ಅವರ ತಂದೆ ಸಂತೋಷದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದು, ಅವರನ್ನು ಅಭಿನಂದಿಸಲು ಅಭಿಮಾನಿಗಳು ಸುತ್ತುವರೆದಿರುವುದನ್ನು ಕಾಣಬಹುದು.
ಪಾಕಿಸ್ತಾನ ನಾಯಕ ಬಾಬರ್ ಟಾಸ್ ಗೆದ್ದರು ಮತ್ತು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟೀಂ ಇಂಡಿಯಾಗೆ ಪಾಕ್ ವೇಗಿ ಶಾಹೀನ್ ಶಾ ಅಫ್ರಿದಿ ಆರಂಭಿಕ ಆಘಾತ ನೀಡಿದರು. ಟೀಂ ಇಂಡಿಯಾ ನೀಡಿದ್ದ 152ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ನಾಯಕ ಬಾಬರ್ ಆಜಂ ಅಜೇಯ 68ರನ್ ಹಾಗೂ ರಿಜ್ವಾನ್ ಅಜೇಯ 79ರನ್ಗಳ ಜೊತೆಯಾಟ ನೀಡಿ ಜಯ ತಂದಿಟ್ಟರು. ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 29 ವರ್ಷಗಳ ಬಳಿಕ ಮೊದಲ ಸಲ ಸೋಲು ಕಂಡಿದೆ.