ಕರ್ನಾಟಕ

karnataka

ಅಗ್ರ ಐವರು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ಏಳು ಮತ್ತು ಎಂಟನೇ ಬ್ಯಾಟ್ಸ್‌ಮನ್‌ಗಳು ಏನ್ಮಾಡ್ತಾರೆ?: ಶೋಯೆಬ್‌ ಅಖ್ತರ್‌

By ETV Bharat Karnataka Team

Published : Sep 8, 2023, 6:13 PM IST

ICC World Cup 2023: ವಿಶ್ವಕಪ್​ಗೆ ಬಿಸಿಸಿಐ ಪ್ರಕಟಿಸಿರು ತಂಡದಲ್ಲಿ ಬ್ಯಾಟಿಂಗ್​ಗೆ ಹೆಚ್ಚು ಒತ್ತು ಕೊಟ್ಟಿರುವುದರ ಬಗ್ಗೆ ಶೋಯೆಬ್‌ ಅಖ್ತರ್‌ ಮಾತನಾಡಿದ್ದು, ಮೇಲಿನ ಕ್ರಮಾಂಕದಲ್ಲಿ ಬ್ಯಾಟರ್​ಗಳು ವಿಫಲವಾದರೆ, ಕೆಳ ಕ್ರಮಾಂಕದವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

SHOAIB AKHTAR
SHOAIB AKHTAR

ನವದೆಹಲಿ:ವಿಶ್ವಕಪ್​ಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ಹೆಚ್ಚು ಬ್ಯಾಟಿಂಗ್​​ಗೆ ಒತ್ತು ಕೊಡಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಮಾತನಾಡಿದ್ದು, ಮೊದಲ ಐದು ಬ್ಯಾಟರ್​ಗಳು ಮಾಡಲಾಗದ್ದನ್ನು ಕೆಳ ಕ್ರಮಾಂಕದ ಬ್ಯಾಟರ್​ಗಳು ಮಾಡಬೇಕು ಎಂಬ ಲೆಕ್ಕಾಚಾರ ಎಷ್ಟು ಸರಿ, ಈ ಹಿನ್ನೆಲೆಯಲ್ಲಿ ಬೌಲರ್​ಗಳನ್ನು ಕೈಬಿಟ್ಟಿರುವುದು ಸರಿ ಅಲ್ಲ ಎಂದು ಅವರು ಸ್ಟಾರ್​ ಸ್ಪೋರ್ಟ್ಸ್​ನ ಆನ್​ಲೈನ್​ ವೇದಿಕೆಯಲ್ಲಿ ಚರ್ಚಿಸಿದ್ದಾರೆ.

ತಂಡದಲ್ಲಿ ಯುಜುವೇಂದ್ರ ಚಹಾಲ್​ಗೆ ಅವಕಾಶ ಸಿಗದಿರುವುದು ಅಚ್ಚರಿಯ ಸಂಗತಿ ಎಂದಿದ್ದಾರೆ. ಯುಜುವೇಂದ್ರ ಚಹಾಲ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದು ನನ್ನ ತಿಳಿವಳಿಕೆಯನ್ನು ಮೀರಿದೆ. ಭಾರತ ತಂಡ 150-200ಕ್ಕೆ ಔಟಾದಾಗ ಎದುರಾಳಿಯನ್ನು ಸಮರ್ಥವಾಗಿ ಕಟ್ಟಿಹಾಕಲು ಬೌಲರ್​ಗಳ ಅಗತ್ಯ ಇದೆ. ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡುವುದರ ಅರ್ಥವೇನು? ಅಗ್ರ ಐವರು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ಏಳು ಮತ್ತು ಎಂಟನೇ ಕ್ರಮಾಂಕದಲ್ಲಿರುವ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಾರೆ? ಭಾರತ ಬೌಲರ್​ಗಳನ್ನು ಮಿಸ್​ ಮಾಡಿಕೊಳ್ಳಲಿದೆ ಎಂದು ಅಖ್ತರ್​ ಹೇಳಿದ್ದಾರೆ.

ಅಕ್ಟೋಬರ್ 14 ರಂದು ಅಹಮದಾಬಾದ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ಒತ್ತಡ ಇರಲಿದೆ ಎಂದಿದ್ದಾರೆ. ಈ ಒತ್ತಡದ ಕಾರಣ ಭಾರತವನ್ನು ಪಾಕಿಸ್ತಾನ ಸುಲಭವಾಗಿ ಮಣಿಸಲಿದೆ. ಪ್ರತಿ ಆಟಗಾರ ಮತ್ತು ನಾಯಕ ರೋಹಿತ್​ ಶರ್ಮಾಗೆ ಹೆಚ್ಚಿನ ಒತ್ತಡ ಇರಲಿದೆ. ಇದನ್ನೇ ಪಾಕ್​ ಲಾಭ ಮಾಡಿಕೊಂಡು ಪ್ರಶಸ್ತಿ ಗೆಲ್ಲಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ 2013 ರಿಂದ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ಭಾರತದಲ್ಲೇ ವಿಶ್ವಕಪ್​ ನಡೆಯುತ್ತಿರುವುದರಿಂದ ಟೀಮ್​ ಮೇಲೆ ಹೆಚ್ಚಿನ ಭರವಸೆ ಇದೆ. ಇದೇ ತಂಡಕ್ಕೆ ಒತ್ತಡವಾಗಿ ಪರಿಣಮಿಸುವ ಸಾಧ್ಯತೆ ಇದೆ. ಏಕೆಂದರೆ ಪ್ರತಿ ಪಂದ್ಯವನ್ನು ಗೆಲ್ಲಲೇ ಬೇಕು ಎಂದು ಅಭಿಮಾನಿಗಳು ಎದುರು ನೋಡುತ್ತಾರೆ. ಸೋತಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಟೀಕಾ ಪ್ರಹಾರವೇ ಆಗುತ್ತದೆ ಇದರಿಂದ ತಂಡದ ಆಟಗಾರರಿಗೆ ಹೆಚ್ಚು ಒತ್ತಡ ಆಗಲಿದೆ.

ಭಾರತ -ಪಾಕಿಸ್ತಾನ ಪಂದ್ಯ ಮಹಾ ಭಾರತದಂತೆ ಬಿಂಬಿಸಲಾಗುತ್ತಿದೆ:"ಅಕ್ಟೋಬರ್​ 14 ರಂದು ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂಬತೆ ಈಗಲೇ ಬಿಂಬಿಸಲಾಗುತ್ತಿದೆ. ಇಂದು ತಂಡಕ್ಕೆ ಹೆಚ್ಚಿನ ಒತ್ತಡ ತರಲಿದೆ. ದೊಡ್ಡ ಮೈದಾನದಲ್ಲಿ ಸಂಪೂರ್ಣ ಪ್ರೇಕ್ಷಕರಿಂದ ತುಂಬಿರುತ್ತದೆ. ಟಿವಿ ಮತ್ತು ಮೊಬೈಲ್​ನಲ್ಲಿ ಕೋಟಿಗಟ್ಟಲೆ ಜನ ಪಂದ್ಯವನ್ನು ನೋಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪೋಸ್ಟ್​ಗಳು, ಮೀಮ್ಸ್​ಗಳು ಹರಿದಾಡುತ್ತವೆ. ಪಂದ್ಯಕ್ಕೂ ಮುನ್ನ ಈ ರೀತಿಯ ವಿಚಾರಗಳು ಆಟಗಾರರ ಮೇಲೆ ಹೆಚ್ಚಿನ ಪ್ರೆಶರ್​ಗೆ ಕಾರಣ ಆಗುತ್ತದೆ. ಪಾಕಿಸ್ತಾನ ತಂಡಕ್ಕೆ ಪಂದ್ಯ ಗೆಲ್ಲುವ ಅಗತ್ಯ ಅಷ್ಟೇ ಇದೆ. ಆದರೆ ಭಾರತಕ್ಕೆ ಹಾಗಿಲ್ಲ ಮೇಲಿನ ಎಲ್ಲ ಒತ್ತಡಗಳನ್ನು ಎದುರಿಸ ಬೇಕಿದೆ" ಎಂದು ಶೋಯಬ್​ ಹೇಳಿದ್ದಾರೆ.

ಇದನ್ನೂ ಓದಿ:ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿ.. ಆದರೂ ಆತಂಕವಿಲ್ಲ.. ಮೀಸಲು ದಿನದಂದು ನಡೆಯಲಿದೆ ಮ್ಯಾಚ್​

ABOUT THE AUTHOR

...view details