ಕರ್ನಾಟಕ

karnataka

ಕೆರೆಬಿಯನ್​ ಲೀಗ್​ ಮಹಿಳಾ ಟೀಂ ಖರೀದಿಸಿದ ಶಾರುಖ್​ ಖಾನ್

By

Published : Jun 18, 2022, 3:36 PM IST

ಬಾಲಿವುಡ್​ ನಟ ಶಾರೂಖ್​ ಒಡೆತನದ ನೈಟ್​​ ರೈಡರ್ಸ್​ ಗ್ರೂಪ್​ ಇದೀಗ ಮಹಿಳಾ ಕ್ರಿಕೆಟ್​ಗೂ ಕಾಲಿಟ್ಟಿದೆ. ಕೆರೆಬಿಯನ್​ ಲೀಗ್‌ನ ಮಹಿಳಾ ಟಿ-20 ತಂಡವನ್ನು ಶಾರೂಖ್​ ತಮ್ಮದಾಗಿಸಿಕೊಂಡಿದ್ದಾರೆ..

ಕೆರೆಬಿಯನ್​ ಲೀಗ್​ ಮಹಿಳಾ ಟೀಂ ಖರೀದಿಸಿದ ಶಾರುಖ್​ ಖಾನ್
ಕೆರೆಬಿಯನ್​ ಲೀಗ್​ ಮಹಿಳಾ ಟೀಂ ಖರೀದಿಸಿದ ಶಾರುಖ್​ ಖಾನ್

ಮುಂಬೈ (ಮಹಾರಾಷ್ಟ್ರ) :ಐಪಿಎಲ್​ನ ಕೆಕೆಆರ್​ ತಂಡದ ಮಾಲೀಕನಾಗಿರುವ ಬಾಲಿವುಡ್​ ನಟ ಶಾರೂಖ್​ ಖಾನ್​ ಇದೀಗ ಕೆರೆಬಿಯನ್​ ಲೀಗ್​ನ ಮಹಿಳಾ ತಂಡವನ್ನೂ ಖರೀದಿ ಮಾಡಿ ಅದರ ಮಾಲೀಕರಾಗಿದ್ದಾರೆ.

ಈ ಬಗ್ಗೆ ಶಾರೂಖ್​ ಟ್ವೀಟ್​ ಮಾಡಿದ್ದು, ತಮ್ಮ ನೈಟ್ ರೈಡರ್ಸ್ ಫ್ರಾಂಚೈಸಿ ಇದೀಗ ಮೊದಲ ಬಾರಿಗೆ ಮಹಿಳಾ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಮಹಿಳಾ ತಂಡಕ್ಕೆ 'ಟ್ರಿನ್‌ಬಾಗೊ ನೈಟ್ ರೈಡರ್ಸ್' ಎಂದು ಹೆಸರಿಸಲಾಗಿದೆ. ಆಗಸ್ಟ್​ 30ರಿಂದ ಆರಂಭವಾಗಲಿರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ತಂಡ ಕಣಕ್ಕಿಳಿಯಲಿದೆ.

"ಇದು ಕೆಕೆರೈಡರ್ಸ್​, ಎಡಿಕೆ ರೈಡರ್ಸ್​ ಫ್ರಾಂಚೈಸಿಗೆ ಸಂತಸದ ವಿಚಾರ. ಇದೀಗ ಟಿಕೆ ರೈಡರ್ಸ್​ ತಂಡ ನಮ್ಮದಾಗಿದೆ. ಮಹಿಳಾ ತಂಡವನ್ನು ಮೈದಾನದಲ್ಲಿ ಲೈವ್​ ಆಗಿ ನೋಡಲು ಕಾದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಮಹಿಳೆಯರ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 30ರಿಂದ ಪ್ರಾರಂಭವಾಗಲಿದೆ. ಶಾರೂಖ್​ ಖಾನ್​ರ ಟ್ರಿನ್​ಬಾಗೋ ನೈಟ್​ ರೈಡರ್ಸ್​ ತಂಡವಲ್ಲದೇ, ಬಾರ್ಬಡೋಸ್ ರಾಯಲ್ಸ್ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್ ತಂಡಗಳು ಸ್ಪರ್ಧಿಸಲಿವೆ.

ಶಾರುಖ್ ಖಾನ್​, ನಟಿ ಜೂಹಿ ಚಾವ್ಲಾ ಅವರೊಂದಿಗೆ ನೈಟ್ ರೈಡರ್ಸ್ ಗ್ರೂಪ್ ಸಹ ಮಾಲೀಕರಾಗಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ಹೊರತಾಗಿ ಅವರು, ಕೋಲ್ಕತ್ತಾ ನೈಟ್ ರೈಡರ್ಸ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ಮೂರು ಕ್ರಿಕೆಟ್ ತಂಡಗಳ ಮಾಲೀಕತ್ವವನ್ನು ಹೊಂದಿದ್ದಾರೆ.

ಓದಿ:ಟಿ-20ಗೆ ಬಂದು 15 ವರ್ಷ: ಚೊಚ್ಚಲ ಅರ್ಧಶತಕ ಸಿಡಿಸಿದ ದಿನೇಶ್​ ಕಾರ್ತಿಕ್​

TAGGED:

ABOUT THE AUTHOR

...view details