ಕರ್ನಾಟಕ

karnataka

ICC Ranking: ಟಿ20ಯಲ್ಲಿ ಶೆಫಾಲಿ ನಂಬರ್​ 1, ODIನಲ್ಲಿ ಕುಸಿದ ಮಿಥಾಲಿ ರಾಜ್

By

Published : Jul 13, 2021, 5:59 PM IST

ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಜೆಸ್​ ಜೊನಾಸೆನ್ ಮತ್ತು ಮೇಗಸ್ ಶೂಟ್​ ಅಗ್ರ-2ರಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ ಮತ್ತು ಶಬ್ನಿಮ್ ಇಸ್ಮಾಯಿಲ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಭಾರತದ ಜೂಲನ್ ಗೋಸ್ವಾಮಿ(5) ಮತ್ತು ಪೂನಮ್ ಯಾದವ್(9) ಅಗ್ರ 10ರಲ್ಲಿ ಕಾಣಿಸಿದ್ದಾರೆ..

ಶೆಫಾಲಿ ವರ್ಮಾ ಐಸಿಸಿ ರ್ಯಾಂಕಿಂಗ್
ಶೆಫಾಲಿ ವರ್ಮಾ ಐಸಿಸಿ ರ್ಯಾಂಕಿಂಗ್

ದುಬೈ :ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ವೆಸ್ಟ್​ ಇಂಡೀಸ್ ತಂಡದ ನಾಯಕಿ ಸ್ಟೆಫನಿ ಟೇಲರ್​ ಶತಕ ಸಿಡಿಸಿದ್ದರಿಂದ 4 ಸ್ಥಾನ ಮೇಲೇರಿ ಅಗ್ರಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧಶತಕ ಬಾರಿಸಿದ್ದರಿಂದ ಮಿಥಾಲಿ ರಾಜ್ (762) ಅಗ್ರಸ್ಥಾನ ಪಡೆದಿದ್ದರು. ದಕ್ಷಿಣ ಆಫ್ರಿಕಾದ ಲಿಜೆಲ್ ಲೀ(758) 3ನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಮೃತಿ ಮಂದಾನ 9ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಜೆಸ್​ ಜೊನಾಸೆನ್ ಮತ್ತು ಮೇಗಸ್ ಶೂಟ್​ ಅಗ್ರ-2ರಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ ಮತ್ತು ಶಬ್ನಿಮ್ ಇಸ್ಮಾಯಿಲ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಭಾರತದ ಜೂಲನ್ ಗೋಸ್ವಾಮಿ(5) ಮತ್ತು ಪೂನಮ್ ಯಾದವ್(9) ಅಗ್ರ 10ರಲ್ಲಿ ಕಾಣಿಸಿದ್ದಾರೆ.

ಶೆಫಾಲಿ ವರ್ಮಾ ಐಸಿಸಿ ರ್ಯಾಂಕಿಂಗ್

ಟಿ20ಯಲ್ಲಿ ಶೆಫಾಲಿ ಅಗ್ರಸ್ಥಾನ :ಭಾರತದ ಯುವ ಬ್ಯಾಟರ್​ ಶೆಫಾಲಿ ವರ್ಮಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಶೆಫಾಲಿ 773 ರೇಟಿಂಗ್ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಬೆತ್​ ಮೂನಿ ಅವರಿಗಿಂತ 29 ರೇಟಿಂಗ್ ಅಂಕ ಮುಂದಿದ್ದಾರೆ. ಭಾರತದ ಮತ್ತೊಬ್ಬ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ 4ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಸ್ಟಾರ್ ಸ್ಪಿನ್ನರ್​ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ದಕ್ಷಿಣ ಆಫ್ರಿಕಾದ ಶಬ್ನಮ್ ಇಸ್ಮಾಯಿಲ್ ಮತ್ತು ಇಂಗ್ಲೆಂಡ್​ನ ಸಾರಾ ಗ್ಲೇನ್‌ ನಂತರದ ಸ್ಥಾನದಲ್ಲಿದ್ದಾರೆ.

ಭಾರತ ಸ್ಪಿನ್​ ತ್ರಿವಳಿಗಳಾದ ದೀಪ್ತಿ ಶರ್ಮಾ, ಪೂನಮ್ ಯಾದವ್ ಮತ್ತು ರಾಧಾ ಯಾದವ್​ ಕ್ರಮವಾಗಿ 6,7 ಮತ್ತು 8ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ :ಬಯೋಪಿಕ್​ಗೆ ದಾದಾ ಸಮ್ಮತಿ... ಬಾಲಿವುಡ್​ನ ಈ ಸ್ಟಾರ್​ ನಟ ನಟಿಸುವ ಸಾಧ್ಯತೆ

ABOUT THE AUTHOR

...view details