ಕರ್ನಾಟಕ

karnataka

ETV Bharat / sports

ಕೇವಲ​ 4 ರನ್​ಗಳಿಂದ ಪದಾರ್ಪಣೆ ಟೆಸ್ಟ್​ನಲ್ಲಿ ಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡ ಶೆಫಾಲಿ ವರ್ಮಾ

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 396 ರನ್​ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ನಾಯಕಿ ಹೀದರ್​ ನೈಟ್​ 95, ಸೋಫಿಯಾ ಡಂಕ್ಲೇ 74 ಹಾಗೂ ಟಮ್ಮಿ ಬ್ಯೂಮಾಂಟ್ 66 ರನ್​ಗಳಿಸಿದರು.

ಶೆಫಾಲಿ ವರ್ಮಾ
ಶೆಫಾಲಿ ವರ್ಮಾ

By

Published : Jun 17, 2021, 10:45 PM IST

ಬ್ರಿಸ್ಟೋಲ್: ಇಂಗ್ಲೆಂಡ್​ ಮಹಿಳಾ ತಂಡದ ವಿರುದ್ಧ ನಡೆಯುತ್ತಿರವ ಏಕೈಕ ಟೆಸ್ಟ್​ ಪಂದ್ಯದಲ್ಲಿ ಅತಿಥೇಯ ತಂಡಕ್ಕೆ ಭಾರತ ವನಿತೆಯರ ತಂಡ ತಕ್ಕ ಪ್ರತ್ಯುತ್ತರ ನೀಡಿದೆ. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಶೆಫಾಲಿ ವರ್ಮಾ ಪದಾರ್ಪಣೆ ಪಂದ್ಯದಲ್ಲೇ ಶತಕ ದಾಖಲಿಸುವ ಅವಕಾಶವನ್ನು ಕೇವಲ 4 ರನ್​ಗಳಿಂದ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 396 ರನ್​ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ನಾಯಕಿ ಹೀದರ್​ ನೈಟ್​ 95, ಸೋಫಿಯಾ ಡಂಕ್ಲೇ 74 ಹಾಗೂ ಟಮ್ಮಿ ಬ್ಯೂಮಾಂಟ್ 66 ರನ್​ಗಳಿಸಿದರು.

ಭಾರತದ ಪರ 5 ವರ್ಷದ ನಂತರ ಭಾರತ ತಂಡಕ್ಕೆ ಮರಳಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ನೇಹ್ ರಾಣಾ, 4 ವಿಕೆಟ್ ಪಡೆದರೆ ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರು. ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್​ ತಲಾ ಒಂದು ವಿಕೆಟ್ ಪಡೆದರು.

ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕರಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್​ಗೆ 167 ರನ್​ಗಳ ಜೊತೆಯಾಟ ನೀಡಿದರು.

ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶೆಫಾಲಿ ವರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲೂ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 152 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 96 ರನ್​ಗಳಿಸಿದ್ದ ವೇಳೆ ಕೇಟ್​ ಕ್ರಾಸ್​ ಬೌಲಿಂಗ್​ನಲ್ಲಿ ಶ್ರೂಬ್ಸೋಲ್​ಗೆ ಕ್ಯಾಚ್​ ನೀಡಿ ಔಟಾದರು.

ಇನ್ನು ಶೆಫಾಲಿಗೆ ಬೆಂಬಲ ನೀಡಿದ ಅನುಭವಿ ಸ್ಮೃತಿ ಮಂಧಾನ 142 ಎಸೆತಗಳಲ್ಲಿ 12 ಬೌಂಡರಿ ಸಹಿತ ಅಜೇಯ 66ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದನ್ನು ಓದಿ:WTC ಫೈನಲ್​ಗೆ ಭಾರತ ತಂಡ ಪ್ರಕಟ: ಮೂವರು ವೇಗಿ, ಇಬ್ಬರು ಸ್ಪಿನ್ನರ್​ಗಳಿಗೆ ಅವಕಾಶ

ABOUT THE AUTHOR

...view details