ಬ್ರಿಸ್ಟೋಲ್ :ಇಂಗ್ಲೆಂಡ್ ಮತ್ತು ಭಾರತ ವನಿತೆಯರ ಏಕೈಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಆದರೆ, ಫಾಲೋಆನ್ಗೆ ತುತ್ತಾದರೂ ಭಾರತ ತಂಡದ ಆಟಗಾರ್ತಿಯರು ಅದ್ಭುತ ಕಮ್ಬ್ಯಾಕ್ ಮಾಡಿ ಸೋಲು ತಪ್ಪಿಸಿದರು. ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶೆಫಾಲಿ ವರ್ಮಾ, ಸ್ನೇಹ್ ರಾಣಾ ಮಹತ್ವದ ದಾಖಲೆಗೆ ಪಾತ್ರರಾದರು.
ವಿಶ್ವ ಕ್ರಿಕೆಟ್ನ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ಶೆಫಾಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ 96 ರನ್ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್ನಲ್ಲಿ 63 ರನ್ ಗಳಿಸಿದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಹಾಗೂ 2ನೇ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಹಲವು ದಾಖಲೆಗಳಿಗೆ ಪಾತ್ರರಾದರು.
ಒಂದೇ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ - ವಿಶ್ವದಾಖಲೆ