ಕರ್ನಾಟಕ

karnataka

Asia Cup 2023: ವಾಘಾ ಗಡಿ ಮೂಲಕ ಲಾಹೋರ್​ಗೆ ತೆರಳಲಿದ್ದಾರೆ ರೋಜರ್ ಬಿನ್ನಿ, ರಾಜೀವ್ ಶುಕ್ಲಾ

By ETV Bharat Karnataka Team

Published : Aug 26, 2023, 2:52 PM IST

Updated : Aug 26, 2023, 2:58 PM IST

Rajeev Shukla and Roger Binny will go to Pakistan: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನದ ಮೇರೆಗೆ ಕಾರ್ಯದರ್ಶಿ ಜಯ್​ ಶಾ ಬದಲಾಗಿ, ರಾಜೀವ್ ಶುಕ್ಲಾ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮಾತ್ರ ಪಾಕಿಸ್ತಾನಕ್ಕೆ ಹೋಗುತ್ತಿದ್ದಾರೆ. ಇಬ್ಬರ ಪ್ರವಾಸವನ್ನು ಬಹುತೇಕ ಅಂತಿಮವೆಂದು ಪರಿಗಣಿಸಲಾಗಿದೆ.

Rajeev Shukla - Roger Binny
Rajeev Shukla -Roger Binny

ನವದೆಹಲಿ: ರಾಜಕೀಯ ಬಿಕ್ಕಟ್ಟು ಮತ್ತು ಭದ್ರತೆಯ ಸಮಸ್ಯೆಯಿಂದಾಗಿ ಭಾರತ ಕ್ರಿಕೆಟ್​ ತಂಡ ಏಷ್ಯಾಕಪ್​ಗೆ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿತು. ಆದರೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನದ ಮೇರೆಗೆ ಏಷ್ಯಾಕಪ್ ವೇಳೆ ಲಾಹೋರ್​ಗೆ ಭೇಟಿ ನೀಡಲಿದ್ದಾರೆ.

ಇದೇ ತಿಂಗಳ 30 ರಂದು ಏಷ್ಯಾಕಪ್‌ ಪಂದ್ಯಗಳು ಆರಂಭವಾಗಲಿವೆ. ಪಾಕಿಸ್ತಾನ ಮತ್ತು ನೇಪಾಳ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಭಾರತ ಪಾಕಿಸ್ತಾನ ಪ್ರವಾಸ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಟೀಮ್​ ಇಂಡಿಯಾದ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್​ 2 ರಂದು ಭಾರತ ತಂಡ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 7 ರ ವರೆಗೆ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಗಳಲ್ಲಿ ಇಬ್ಬರೂ ಅಧಿಕಾರಿಗಳು ಹಾಜರಿರುತ್ತಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಏಷ್ಯಾಕಪ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಎಲ್ಲಾ ಪ್ರಮುಖ ಅಧಿಕಾರಿಗಳನ್ನು ಆಹ್ವಾನಿಸಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ರಾಜೀವ್‌ಗೆ ಮಾತ್ರ ಅವಕಾಶ ನೀಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ಈ ಇಬ್ಬರೂ ಅಧಿಕಾರಿಗಳು ವಾಘಾ ಗಡಿ ಮೂಲಕ ಲಾಹೋರ್‌ಗೆ ತೆರಳಲಿದ್ದಾರೆ.

ವರದಿಗಳ ಪ್ರಕಾರ, ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಉಪಸ್ಥಿತರಿರುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಪಂದ್ಯದ ನಂತರ ಮೂವರು ಅಧಿಕಾರಿಗಳು ಭಾರತಕ್ಕೆ ವಾಪಸಾಗಲಿದ್ದು, ಇಲ್ಲಿಂದ ರಾಜೀವ್ ಶುಕ್ಲಾ ಮತ್ತು ರೋಜರ್ ಬಿನ್ನಿ ಲಾಹೋರ್‌ಗೆ ತೆರಳಲಿದ್ದಾರೆ. 2004 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಭೇಟಿಕೊಟ್ಟಿದ್ದಾಗ, ರಾಜೀವ್ ಶುಕ್ಲಾ ಕೂಡ ಪಾಕಿಸ್ತಾನ ಪ್ರವಾಸಕ್ಕೆ ಹೋಗಿದ್ದರು.

ವಿಶ್ವಕಪ್​ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್​​:2023 ವಿಶ್ವಕಪ್​ ತಯಾರಿಯ ಹಿನ್ನೆಲೆ ಟಿ20 ಮಾದರಿಯಲ್ಲಿ ನಡೆಯುತ್ತಿದ್ದ ಏಷ್ಯಾಕಪ್​ನ್ನು ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಈ ವರ್ಷ ಏಷ್ಯಾಕಪ್​ ಆಯೋಜನೆಗೊಂಡಿದೆ.

ಇದನ್ನೂ ಓದಿ:ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್​ಗೆ ವಿರಾಟ್ ಕೊಹ್ಲಿ​ ಫಿಟ್​ ಅಂಡ್​​ ಪರ್ಫೆಕ್ಟ್​ ಆಗಿದ್ದಾರೆ: ಮಿಸ್ಟರ್​ 360

Last Updated : Aug 26, 2023, 2:58 PM IST

ABOUT THE AUTHOR

...view details