ಕರ್ನಾಟಕ

karnataka

ಆಸ್ಟ್ರೇಲಿಯಾಕ್ಕೆ ಮೂವರು ಸ್ಪಿನ್ನರ್​ಗಳ ಅಗತ್ಯ ಇಲ್ಲ: ಮೈಕೆಲ್ ಕಾಸ್ಪ್ರೊವಿಚ್

By

Published : Feb 28, 2023, 2:11 PM IST

ಆಸ್ಟ್ರೇಲಿಯಾ ತಂಡದಲ್ಲಿ ಮೂವರು ಸ್ಪಿನ್ನರ್​ಗಳ ಅಗತ್ಯ ಇಲ್ಲ - ಸ್ಕಾಟ್ ಬೋಲ್ಯಾಂಡ್ ಅವರನ್ನು ಎರಡನೇ ಪಂದ್ಯಕ್ಕೆ ಕೈ ಬಿಡಬಾರದಿತ್ತು - ಗ್ರೀನ್​, ಸ್ಟಾರ್ಕ್​ ತಂಡಕ್ಕೆ ಮರಳ ಬೇಕಿದೆ - ಮಾಜಿ ಆಟಗಾರ ಮೈಕೆಲ್ ಕಾಸ್ಪ್ರೊವಿಚ್

Kasprowicz
ಮೈಕೆಲ್ ಕಾಸ್ಪ್ರೊವಿಚ್

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಇಂದೋರ್‌ನಲ್ಲಿ ಬುಧವಾರ ಆರಂಭವಾಗಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ಗೆ ಮಿಚೆಲ್ ಸ್ಟಾರ್ಕ್, ಕ್ಯಾಮರೂನ್ ಗ್ರೀನ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮೈಕೆಲ್ ಕಾಸ್ಪ್ರೊವಿಚ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಯಕ ಪ್ಯಾಟ್ ಕಮಿನ್ಸ್​ ಮತ್ತು ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್‌ ಮತ್ತು ಕೇವಲ ಒಬ್ಬ ವೇಗಿಯೊಂದಿಗೆ ನವದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಆಡಿತ್ತು. ಭಾರತದ ಸ್ಪಿನ್ನರ್​ಗಳ ದಾಳಿಗೆ ನಲುಗಿದ ಆಸಿಸ್​ 6 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಭಾರತ 2-0 ರಿಂದ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಮುನ್ನಡೆ ಸಾಧಿಸಿದೆ.

"ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುವ ಬಗ್ಗೆ ಆಕ್ಷೇಪ ಇಲ್ಲ. ಆದರೆ, ಎರಡನೇ ಪಂದ್ಯದಕ್ಕೆ ಸ್ಕಾಟ್ ಬೋಲ್ಯಾಂಡ್ ಅವರನ್ನು ಕೈ ಬಿಡಲಾಗಿತ್ತು. ಈ ಬಗ್ಗೆ ಅಸಮಾಧಾನ ಇದೆ. ಮೊದಲ ಪಂದ್ಯದಲ್ಲಿ 17 ಓವರ್​ ಮಾಡಿರುವ ಬೋಲ್ಯಾಂಡ್ 34 ರನ್​ ಮಾತ್ರ ಬಿಟ್ಟುಕೊಟ್ಟು ಉತ್ತಮ ಬೌಲಿಂಗ್​ ಮಾಡಿದ್ದರು. ಭಾರತದಲ್ಲಿ ಆಸಿಸ್​ ಟೀಮ್​ಗೂ ಮೂವರು ಸ್ಪಿನ್ನರ್​ಗಳ ಅಗತ್ಯ ಇದೆ ಎಂದು ನನಗೆ ಅನಿಸುವುದಿಲ್ಲ" ಎಂದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿನ ಪಂದ್ಯಕ್ಕೆ ಬೋಲ್ಯಾಂಡ್ ಅವರನ್ನು ಕೈ ಬಿಟ್ಟು ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದ ಬಗ್ಗೆ ಮೈಕೆಲ್ ಕಾಸ್ಪ್ರೊವಿಚ್ ಅಸಮಾಧಾನ ಹೊರಹಾಕಿದ್ದಾರೆ. "ನಮಗೆ (ಆಸ್ಟ್ರೇಲಿಯಾ) ಮೂವರು ಸ್ಪಿನ್ನರ್‌ಗಳ ಅಗತ್ಯವಿಲ್ಲ, ಅದು ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್ ಮತ್ತು ನಾಥನ್ ಲಿಯಾನ್ ಆಡಿದ್ದರು. ಅವರಲ್ಲಿ ಒಬ್ಬರ ಬದಲಿ ನಾನು ಬೋಲ್ಯಾಂಡ್‌ ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.

"ಏಕೆಂದರೆ, ಮಧ್ಯಮ ವೇಗಿ ಬೋಲ್ಯಾಂಡ್ ಒಂದು ತುದಿಯಿಂದ ಒತ್ತಡ ಹೆಚ್ಚಿಸುತ್ತಾರೆ. ಮೊದಲ ಪಂದ್ಯದಲ್ಲಿ ಏಳು ವಿಕೆಟ್​ ಪಡೆದ ಮಾರ್ಫಿ ಇನ್ನೊಂದು ಬದಿಯಲ್ಲಿ ಸ್ಪಿನ್​ ಬೌಲಿಂಗ್​ ಬ್ಯಾಲೆನ್ಸ್​​ ಮಾಡುತ್ತಾರೆ. ಹೀಗಿರುವಾಗ ಬೌಲರ್​ಗಳ ಬದಲು ನಾವು ಪಂದ್ಯ ಗೆಲ್ಲಲು ಬೇರೆಯದನ್ನು ನೋಡ ಬೇಕಿದೆ" ಎಂದು ಮೈಕೆಲ್ ಕಾಸ್ಪ್ರೊವಿಚ್ ಹೇಳಿದ್ದಾರೆ.

ತಂಡಕ್ಕೆ ಕ್ಯಾಮರೂನ್​ ಗ್ರೀನ್​ ಮತ್ತು ಮಿಚೆಲ್​ ಸ್ಟಾರ್ಕ್​ ಸೇರ್ಪಡೆ ಆಗುವ ಸಾಧ್ಯತೆ ಮತ್ತು ಅವರು ಯಾರ ಬದಲಿ ಆಡಿದರೆ ಸೂಕ್ತ ಎಂಬದರ ಬಗ್ಗೆ ಮೈಕೆಲ್​ ಹೇಳಿದ್ದು, ಮೂರನೇ ಟೆಸ್ಟ್​ಗೆ ಆಸ್ಟ್ರೇಲಿಯಾ ತಂಡ ಹೇಗಿರಬೇಕು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. "ಕೌಟುಂಬಿಕ ಕಾರಣಗಳಿಂದ ಟೀಂನಿಂದ ಹೊರಗುಳಿದಿರುವ ಆಸ್ಟ್ರೇಲಿಯಾದ ನಾಯಕ ಪ್ಯಾಟ್​ ಕಮಿನ್ಸ್​ ಜಾಗಕ್ಕೆ ಗ್ರಿನ್​ ಮತ್ತು ವಾರ್ನರ್​ ಬದಲಿ ಸ್ಟಾರ್ಕ್​ ಬಂದರೆ, ತಂಡ ಬಲಿಷ್ಟವಾಗಲಿದೆ. ಮಧ್ಯಮ ಕ್ರಮಾಂಕಕ್ಕೆ ಗ್ರೀನ್​ ಬಲ ತುಂಬಲಿದ್ದಾರೆ. ಬೌಲಿಂಗ್​ನಲ್ಲಿ ಸ್ಟಾರ್ಕ್​ ನೆರವಾಗಲಿದ್ದಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಕೆಲ್ ಕಾಸ್ಪ್ರೊವಿಚ್: 51 ವರ್ಷ ವಯಸ್ಸಿನ ಮೈಕೆಲ್ ಕಾಸ್ಪ್ರೊವಿಚ್ ಅವರು 38 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು. ಭಾರತದಲ್ಲಿ ಕೊನೆಯದಾಗಿ ಗೆದ್ದ 2004-05ರ ಸರಣಿಯ ಭಾಗವಾಗಿದ್ದರು. ಬೆರಳಿನ ಗಾಯಗಳಿಂದಾಗಿ ಮೊದಲ ಎರಡು ಟೆಸ್ಟ್‌ಗಳನ್ನು ಕಳೆದುಕೊಂಡ ನಂತರ ಗ್ರೀನ್ ಮತ್ತು ಸ್ಟಾರ್ಕ್ ಇಬ್ಬರೂ ಮೂರನೇ ಟೆಸ್ಟ್​ ಪಂದ್ಯದ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಮೂರನೇ ಪಂದ್ಯಕ್ಕೆ ತಂಡ ಹೀಗಿರಲಿದೆ - ಮ್ಯಾಟ್ ರೆನ್ಶಾ, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನೆ, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಕ್ಯಾಮರೂನ್​ ಗ್ರೀನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್/ ಮಿಚೆಲ್​ ಸ್ಟಾರ್ಕ್​.

ಇದನ್ನೂ ಓದಿ:ವಾಂಖೆಡೆಯಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ಜೀವಮಾನದ ಪ್ರತಿಮೆ : ವಿಶ್ವಕಪ್​ ವೇಳೆಗೆ ಅನಾವರಣ

ABOUT THE AUTHOR

...view details