ಕರ್ನಾಟಕ

karnataka

ಪತ್ನಿಯನ್ನು ನಿಂದಿಸಿ ಕಮೆಂಟ್ : ಅವರನ್ನು ಬಿಟ್ಟು ಬಿಡಿ ಎಂದು RCB ಅಭಿಮಾನಿಗಳಿಗೆ ಕ್ರಿಶ್ಚಿಯನ್​ ಮನವಿ

By

Published : Oct 12, 2021, 4:47 PM IST

Updated : Oct 12, 2021, 4:53 PM IST

ದುರಾದೃಷ್ಟವಶಾತ್​ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ನಾವು ಅಂತಿಮ ಹಂತದಲ್ಲಿ ಎಡವಿದೆವು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಕಸಗಳು ಸಂಪೂರ್ಣ ಅಸಹ್ಯಕರವಾಗಿವೆ..

Christian and his pregnant partner face online abuse after RCB's exit
ಡೇನಿಯಲ್ ಕ್ರಿಸ್ಚಿಯನ್​

ಶಾರ್ಜಾ :14ನೇ ಆವೃತ್ತಿಯ ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಆರ್​ಸಿಬಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡದ ಡೇನಿಯಲ್ ಕ್ರಿಶ್ಚಿಯನ್​ರನ್ನು ತೆಗಳುವ ಭರದಲ್ಲಿ ಅವರ ಗರ್ಭಿಣಿ ಪತ್ನಿಯನ್ನು ನಿಂದಿಸಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಪಡೆ ಕೇವಲ 138 ರನ್​ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಕೆಕೆಆರ್ ಇನ್ನೂ 2 ಎಸೆತಗಳಿರುವಂತೆ ಗೆದ್ದು 2ನೇ ಕ್ವಾಲಿಫೈಯರ್ ಆಗಿ ಫೈನಲ್‌ ಪ್ರವೇಶಿಸಿತು.

ಡೇನಿಯಲ್ ಕ್ರಿಶ್ಚಿಯನ್ ಇನ್ಸ್ಟಾ ಗ್ರಾಮ್ ಸ್ಟೋರಿ

ಆದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಡೇನಿಯಲ್ ಕ್ರಿಶ್ಚಿಯನ್ ಮತ್ತು ಅವರ ಗರ್ಭಿಣಿ ಪತ್ನಿಯನ್ನು ಕೆಟ್ಟದಾಗಿ ಕಮೆಂಟ್​ ಮಾಡಿ ಆರ್​ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಕುರಿತು ಇನ್ಸ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಕ್ರಿಶ್ಚಿಯನ್​ ದಯವಿಟ್ಟು ನನ್ನ ಪತ್ನಿಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಪಾರ್ಟ್ನರ್​ ಇನ್ಸ್‌ಸ್ಟಾಗ್ರಾಮ್​ ಪೋಸ್ಟ್​ಗೆ ಸಂಬಂಧಿಸಿ ಬಂದಿರುವ ಕಮೆಂಟ್​ಗಳನ್ನು ಒಮ್ಮೆ ನೋಡಿ. ನಿನ್ನೆಯ ಪಂದ್ಯದಲ್ಲಿ ನಾನು ಚೆನ್ನಾಗಿ ಆಡಲಿಲ್ಲ. ಆದರೆ, ಆಟವನ್ನು ಕೇವಲ ಆಟವನ್ನಾಗಿ ನೋಡಿ. ದಯವಿಟ್ಟು ಅವರನ್ನು(ಪತ್ನಿ)ಯನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಎಲಿಮಿನೇಟರ್​ ಪಂದ್ಯದಲ್ಲಿ ಡೇನಿಯಲ್ ಕ್ರಿಶ್ಚಿಯನ್​ ಕೇವಲ 9 ರನ್​ಗಳಿಸಿ ರನ್​ಔಟ್​ ಆಗಿದ್ದರು. ಬೌಲಿಂಗ್​ನಲ್ಲೂ ಕೇವಲ 1.5 ಓವರ್​ಗಳಲ್ಲಿ 27 ರನ್​ ಬಿಟ್ಟು ಕೊಟ್ಟಿದ್ದರು. ಅದರಲ್ಲೂ 12ನೇ ಓವರ್​ನಲ್ಲಿ ಬರೋಬ್ಬರಿ 22 ರನ್​ ಬಿಟ್ಟು ಕೊಟ್ಟು ದುಬಾರಿಯಾಗಿದ್ದರು.

ಈ ಕಾರಣದಿಂದ ಆರ್​ಸಿಬಿ ಅಭಿಮಾನಿಗಳು ತಮ್ಮ ತಂಡದ ಸೋಲಿಗೆ ಡೇನಿಯಲ್​ ಅವರೇ ಕಾರಣ ಎಂದು ಟ್ರೋಲ್ ಮಾಡಿದ್ದಲ್ಲದೆ, ಅವರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕಮೆಂಟ್ ಮಾಡಿ ನಿಂದಿಸಿದ್ದಾರೆ.

ಈಗಾಗಲೇ ಆರ್​ಸಿಬಿ ತಂಡದ ಗ್ಲೇನ್ ಮ್ಯಾಕ್ಸ್​ವೆಲ್ ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿಯ ಐಪಿಎಲ್ ಟೂರ್ನಿ ಅತ್ಯುತ್ತಮವಾಗಿತ್ತು. ತಾವೂ ತಂಡದ ಗೆಲುವಿಗಾಗಿ ಶೇ.120ರಷ್ಟು ಶ್ರಮವಹಿಸಿದ್ದೇವೆ.

ದುರಾದೃಷ್ಟವಶಾತ್​ ನಮಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ನಾವು ಅಂತಿಮ ಹಂತದಲ್ಲಿ ಎಡವಿದೆವು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ಕಸಗಳು ಸಂಪೂರ್ಣ ಅಸಹ್ಯಕರವಾಗಿವೆ.

ನಾವು ಕೂಡ ಮನುಷ್ಯರು, ಪ್ರತಿದಿನ ದಿನ ನಮ್ಮ ಕೈಲಾದಷ್ಟು ಉತ್ತಮ ಪ್ರಯತ್ನವನ್ನೇ ನೀಡಿದ್ದೇವೆ. ಕೆಟ್ಟದನ್ನು ಹರಡುವ ಬದಲು ಉತ್ತಮ ವ್ಯಕ್ತಿಯಾಗಿರಲು ಪ್ರಯತ್ನಿಸಿ ಎಂದಿದ್ದಾರೆ.

ಇದನ್ನು ಓದಿ:ಸೋಲಿನ ಬಳಿಕ ಆರ್​​ಸಿಬಿ ಅಭಿಮಾನಿಗಳ ಮೇಲೆ ಕೆಂಡವಾದ ಮ್ಯಾಕ್ಸಿ..

Last Updated : Oct 12, 2021, 4:53 PM IST

ABOUT THE AUTHOR

...view details