ಕರ್ನಾಟಕ

karnataka

ರಿಂಕು ಉತ್ತಮ ಆಟಗಾರ, ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ: ಕೆಎಲ್​ ರಾಹುಲ್​

By ETV Bharat Karnataka Team

Published : Dec 16, 2023, 10:22 PM IST

Hints at Rinku ODI debut vs South Africa: ದಕ್ಷಿಣ ಆಫ್ರಿಕಾದ ಏಕದಿನ ಸರಣಿಯಲ್ಲಿ ರಿಂಕು ಸಿಂಗ್​ ಪದಾರ್ಪಣೆಯ ಸಾಧ್ಯತೆ ಬಗ್ಗೆ ನಾಯಕ ರಾಹುಲ್​​ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

KL Rahul
KL Rahul

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): 26ರ ಹರೆಯದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ದಕ್ಷಿಣ ಆಫ್ರಿಕಾದ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡುವ ಸಾಧ್ಯತೆಯಿದೆ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

ರಿಂಕು ಪದಾರ್ಪಣೆ:ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಲ್ ರಾಹುಲ್​​ ಮಾತನಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನಗಳಲ್ಲಿ ರಿಂಕು ಸಿಂಗ್​ ನಂ.6 ರಲ್ಲಿ ಬ್ಯಾಟ್ ಮಾಡಬಹುದೇ ಎಂದು ರಾಹುಲ್‌ ಕೇಳಿದ ಪ್ರಶ್ನೆಗೆ,"ರಿಂಕು ಎಂತಹ ಉತ್ತಮ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಐಪಿಎಲ್‌ನಲ್ಲಿ ಅವರನ್ನು ಎಷ್ಟು ನುರಿತವರು ವೀಕ್ಷಿಸಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಟಿ20 ಸರಣಿಯಲ್ಲಿ ತೋರಿದ ಪ್ರದರ್ಶನ ಮತ್ತು ಒತ್ತಡವನ್ನು ನಿಯಂತ್ರಿಸುವ ರೀತಿ ಉತ್ತಮವಾಗಿದೆ. ಇದು ನೋಡಲು ಉಲ್ಲಾಸದಾಯಕವಾಗಿತ್ತು. ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಹೀಗಾಗಿ ಅವರು ಅವಕಾಶಗಳನ್ನು ಸೃಷ್ಠಿಸಿಕೊಳ್ಳುತ್ತಾರೆ" ಎಂದಿದ್ದಾರೆ.

2023ರ ಐಪಿಎಲ್​ ಆವೃತ್ತಿಯ ಪ್ರದರ್ಶನದಿಂದ ರಾಷ್ಟ್ರೀಯ ತಂಡದಲ್ಲಿ ರಿಂಕು ಅವಕಾಶ ಪಡೆದುಕೊಂಡರು. ವೆಸ್ಟ್​ ಇಂಡೀಸ್​ ಪ್ರವಾಸ, ಐರ್ಲೆಂಡ್​ ಪ್ರವಾಸ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಏಕದಿನ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ರಿಂಕು 6ನೇ ಸ್ಥಾನದಲ್ಲಿ ಫಿನಿಶರ್ ಸ್ಥಾನ ತುಂಬಲಿದ್ದಾರೆ.

ಯುವ ಪಡೆ ಮುನ್ನಡೆಸುತ್ತಿರುವ ರಾಹುಲ್​:ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ರಹಿತವಾಗಿ ಯುವ ಪಡೆಯ ಮುಂದಾಳತ್ವದಲ್ಲಿ ಕೆ ಎಲ್​ ರಾಹುಲ್​ ದಕ್ಷಿಣ ಆಫ್ರಿಕಾದಲ್ಲಿ ಡಿ. 17ರಿಂದ 21ರ ವರೆಗೆ ಏಕದಿನ ಸರಣಿ ಆಡಲಿದೆ. ರಾಹುಲ್​ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು,"ನಾನು ಈ ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತೇನೆ. ಟೆಸ್ಟ್ ಸರಣಿಯಲ್ಲಿ ನಾಯಕ, ಕೋಚ್ ಮತ್ತು ಮ್ಯಾನೇಜ್‌ಮೆಂಟ್ ಬಯಸುವ ಯಾವುದೇ ಪಾತ್ರವನ್ನು ತೆಗೆದುಕೊಳ್ಳಲು ನನಗೆ ಸಂತೋಷವಾಗಿದೆ. ನನ್ನ ದೇಶಕ್ಕಾಗಿ ಟಿ20ಯಲ್ಲಿಯೂ ಸಹ ಆಡಲು ನಾನು ಬಯಸುತ್ತೇನೆ" ಎಂದರು.

ಸರಣಿಯಲ್ಲಿ ಅವಕಾಶ ಸಿಕ್ಕರೆ ಸಂಜು ಆಡುತ್ತಾರೆ: ಸಂಜು ಸ್ಯಾಮ್ಸನ್​ ಅವರ ಅವಕಾಶದ ಬಗ್ಗೆ ಕೇಳಲಾದ ಪ್ರಶ್ನೆಗೆ,"ಸಂಜು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಅವರು ಏಕದಿನ ಕ್ರಿಕೆಟ್ ಆಡಿದಾಗಲೆಲ್ಲಾ ಅವರ ಪಾತ್ರ ನಿರ್ವಹಿಸಿದ್ದಾರೆ. ಅವರು ನಂ. 5 ಅಥವಾ 6 ರಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಸದ್ಯಕ್ಕೆ, ನಾನು ವಿಕೆಟ್ ಕೀಪಿಂಗ್​ ಮಾಡಲಿದ್ದೇನೆ, ಆದರೆ ಅವಕಾಶವಿದ್ದರೆ ಅವರು ಆ ಪಾತ್ರದಲ್ಲಿ ಖಂಡಿತವಾಗಿಯೂ ಸರಣಿಯ ಒಂದು ಹಂತದಲ್ಲಿ ಆಡುತ್ತಾರೆ" ಎಂದು ತಿಳಿಸಿದರು.

ರೋಹಿತ್​, ವಿರಾಟ್​ ಜವಾಬ್ದಾರಿ ಯಾರಿಗೂ ಹೊರಲು ಸಾಧ್ಯವಿಲ್ಲ: ಅನುಭವಿ ಆಟಗಾರರ ಬದಲಿ ಸಾಮರ್ಥ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್​, "ನಾವು ಏಕದಿನಗಳನ್ನು ಹೇಗೆ ಆಡಲು ಬಯಸುತ್ತೇವೆ ಎಂಬುದರ ವಿಷಯದಲ್ಲಿ ಬಹಳಷ್ಟು ಬದಲಾವಣೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಆದರೆ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಿದ ಪಾತ್ರವನ್ನು ಹೊಸಬರು ನಿರ್ವಹಿಸುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹೊಸಬರಿಗೆ ಹೊಂದಿಕೊಳ್ಳಲು ಸಮಯ ನೀಡಬೇಕು ಮತ್ತು ನನ್ನ ಕಡೆಯಿಂದ ಯಾವುದೇ ಒತ್ತಡ ಇರುವುದಿಲ್ಲ" ಎಂದಿದ್ದಾರೆ.

ಇದನ್ನೂ ಓದಿ:ಹರಿಣಗಳ ವಿರುದ್ಧ ಏಕದಿನ ಸರಣಿ: ವಿಶ್ವಕಪ್ ನಂತರದ ಹೊಸ ಆರಂಭದ ಮೇಲೆ ಯುವ ಭಾರತದ ಕಣ್ಣು

ABOUT THE AUTHOR

...view details