ಕರ್ನಾಟಕ

karnataka

ಮಹಿಳಾ ಕ್ರಿಕೆಟ್​ಗೆ ಜೂಲನ್ ಕೊಡುಗೆ ಅವಿಸ್ಮರಣೀಯ, ಅವರ ಮೇಲೆ ಅಪಾರ ಗೌರವವಿದೆ: ಪೆರ್ರಿ ಪ್ರಶಂಸೆ

By

Published : Mar 15, 2022, 8:43 PM IST

ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್(249) ಪಡೆದ ಬೌಲರ್ ಎಂಬ ವಿಶ್ವದಾಖಲೆ ಹೊಂದಿದ್ದಾರೆ. ಇದರ ಜೊತೆಗೆ 40 ವಿಕೆಟ್ ಪಡೆಯುವ ಮೂಲಕ ಮಹಿಳಾ ಏಕದಿನ ವಿಶ್ವಕಪ್​ನಲ್ಲೂ ಹೆಚ್ಚು ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

Australian all rounder Ellyse Perry on Jhulan Goswami
ಜೂಲನ್ ಗೋಸ್ವಾಮಿ ಎಲಿಸ್ ಪೆರ್ರಿ

ಹ್ಯಾಮಿಲ್ಟನ್: ಭಾರತ ಮಹಿಳಾ ತಂಡದ ಹಿರಿಯ ಬೌಲರ್​ ಜೂಲನ್ ಗೋಸ್ವಾಮಿ ಮಹಿಳಾ ಕ್ರಿಕೆಟ್​ ಬೆಳವಣಿಗೆಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲಿಸ್ ಪೆರ್ರಿ ಪ್ರಶಂಸಿಸಿದ್ದಾರೆ.

ಭಾರತ ತಂಡದಲ್ಲಿ ಜೂಲನ್ ಪಾತ್ರದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಪೆರ್ರಿ, ನಾನಷ್ಟೇ ಅಲ್ಲ, ನಮ್ಮ ಸಂಪೂರ್ಣ ತಂಡ(ಆಸ್ಟ್ರೇಲಿಯಾ) ಜೂಲನ್​ ಅವರಿಗೆ ಅತ್ಯುನ್ನತ ಗೌರವ ಹೊಂದಿದೆ. ನಿಮಗೆ ಗೊತ್ತಿರಬಹುದು, ಅವರು ಈ ಆಟಕ್ಕೆ ನೀಡಿರುವ ಕೊಡುಗೆ ಕೇವಲ ಭಾರತ ತಂಡಕ್ಕೆ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಇಡೀ ಮಹಿಳಾ ಕ್ರಿಕೆಟ್​ಗೆ ಅವರ ಕೊಡುಗೆ ನಂಬಲಾಸಾಧ್ಯ ಎಂದು ಪೆರ್ರಿ ವಿಂಡೀಸ್ ಪಂದ್ಯ ಗೆದ್ದ ನಂತರ ಹೇಳಿದ್ದಾರೆ.

ನಾನು ಖಂಡಿತವಾಗಿ ಅವರು ಇಷ್ಟು ದೀರ್ಘಾವಧಿಯಲ್ಲಿ ಕ್ರಿಕೆಟ್​ನಲ್ಲಿ ಯಶಸ್ವಿಯಾಗಿರುವಂತೆ ಜೀವನದಲ್ಲೂ ಅವರ ದೀರ್ಘಾಯುಷ್ಯವನ್ನು ಬಯಸುತ್ತೇನೆ. ಅವರ ಹೊಸ ಚೆಂಡಿನಲ್ಲಿ ಅವರು ಭಾರತ ತಂಡದ ತಳಪಾಯವಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವುದು ನಿಜವಾಗಿಯೂ ಕಷ್ಟವಾಗಿರುತ್ತದೆ ಎಂದು ವಿಶ್ವದ ಶ್ರೇಷ್ಠ ಆಲ್​ರೌಂಡರ್ ತಿಳಿಸಿದ್ದಾರೆ.

ಇಷ್ಟು ದೀರ್ಘಾವಧಿಯವರೆಗೆ ಆಡಿರುವ ಆಟಗಾರ್ತಿಯ ವಿರುದ್ಧ ಆಡುವ ಅವಕಾಶವನ್ನು ಪಡೆಯುವುದಕ್ಕೆ ತುಂಬಾ ಸಂತೋಷವಿದೆ ಮತ್ತು ಅವರ ಬಗ್ಗೆ ಹೆಚ್ಚಿನ ಅಭಿಮಾನವನ್ನು ತೋರದಿರಲು ಅಸಾಧ್ಯ. ನಾನು ಜೂಲನ್ ಅವರನ್ನು ಮೈದಾನದಲ್ಲಿ ನೋಡಲು ಯಾವಾಗಲೂ ಸಂತೋಷವಾಗುತ್ತದೆ. ಅವರೊಡನೆ ಮಾತನಾಡುವುದಕ್ಕೆ ನಾನು ಸದಾ ಸಿದ್ಧರಿಳುತ್ತೇನೆ ಎಂದು ತಿಳಿಸಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್(249) ಪಡೆದ ಬೌಲರ್ ಎಂಬ ವಿಶ್ವದಾಖಲೆ ಹೊಂದಿದ್ದಾರೆ. ಇದರ ಜೊತೆಗೆ 40 ವಿಕೆಟ್ ಪಡೆಯುವ ಮೂಲಕ ಮಹಿಳಾ ಏಕದಿನ ವಿಶ್ವಕಪ್​ನಲ್ಲೂ ಹೆಚ್ಚು ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಜಯ.. ವಿಶ್ವದಾಖಲೆ ಮತ್ತಷ್ಟು ಬಲಿಷ್ಠಪಡಿಸಿಕೊಂಡ ಭಾರತ..

ABOUT THE AUTHOR

...view details