ಕರ್ನಾಟಕ

karnataka

ಹಾರ್ದಿಕ್‌ ಹೈ ಪ್ರೊಫೈಲ್‌ ಆಟಗಾರ, ಅಷ್ಟೇ ವಿನಮ್ರತೆಯ ವ್ಯಕ್ತಿ ಕೂಡಾ: ಗ್ಯಾರಿ ಕರ್ಸ್ಟನ್‌

By

Published : May 30, 2022, 9:21 AM IST

Updated : May 30, 2022, 11:15 AM IST

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ಗುಜರಾತ್​ ಟೈಟಾನ್ಸ್ ಪ್ರಸಕ್ತ ಸಾಲಿನ ಐಪಿಎಲ್‌​ ಟ್ರೋಫಿ ಗೆದ್ದು ಸಂಭ್ರಮಿಸಿತು. ಪಂದ್ಯದ ಬಳಿಕ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್ ತಂಡದ ಪ್ರಯಾಣವನ್ನು ಮೆಲುಕು ಹಾಕಿದರು.

Gujarat Titans mentor Gary Kirsten, Gary Kirsten reaction, Gary Kirsten news, Gujarat Titans head coach Ashish Nehra news, Narendra Modi Stadium in Gujarat, Gujarat captain Hardik Pandya news, IPL 2022, ಗುಜರಾತ್ ಟೈಟಾನ್ಸ್ ಮಾರ್ಗದರ್ಶಕ ಗ್ಯಾರಿ ಕರ್ಸ್ಟನ್, ಗ್ಯಾರಿ ಕರ್ಸ್ಟನ್ ಪ್ರತಿಕ್ರಿಯೆ, ಗ್ಯಾರಿ ಕರ್ಸ್ಟನ್ ಸುದ್ದಿ, ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಸುದ್ದಿ, ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂ, ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಸುದ್ದಿ, ಐಪಿಎಲ್ 2022,
ಕೃಪೆ: Twitter

ಅಹಮದಾಬಾದ್: ಗುಜರಾತ್ ಟೈಟಾನ್ಸ್ ತಂಡ ಐಪಿಎಲ್‌ನ ಹೊಸ ಚಾಂಪಿಯನ್ ಆಗಿದೆ. ತಮ್ಮ ಚೊಚ್ಚಲ ಸೀಸನ್‌ನಲ್ಲೇ ಹಾರ್ದಿಕ್‌ ಪಾಂಡ್ಯ ಬಳಗ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದೆ ಅನ್ನೋದು ವಿಶೇಷ. ಅಮೋಘ ಗೆಲುವಿನ ನಂತರ ತಂಡದ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್ ಮನದಾಳ ಹಂಚಿಕೊಂಡರು.

'ಹರಾಜಿನ ಸಂದರ್ಭದಲ್ಲಿ ತಂಡದ ಸಮತೋಲನ ಮತ್ತು ಆಲ್‌ರೌಂಡರ್‌ಗಳ ಆಯ್ಕೆ ಅತ್ಯಂತ ಮುಖ್ಯವಾಗಿತ್ತು. ವಿಭಿನ್ನ ಪಾತ್ರಗಳನ್ನು ನಿರ್ವಹಿಸಬಲ್ಲ ಆಟಗಾರರನ್ನು ಆಶಿಶ್ ನೆಹ್ರಾ ಗುರುತಿಸಿದ್ದರು. ಅಂತಹ ಆಟಗಾರರನ್ನು ನಾವು ಬ್ಯಾಟಿಂಗ್​ ಕ್ರಮಾಂಕ 4, 5, 6 ರಲ್ಲಿ ಹೊಂದಿದ್ದೇವೆ. ನಮ್ಮ ಬೌಲಿಂಗ್ ಪ್ರದರ್ಶನ ಪಂದ್ಯಾವಳಿಯ ಉದ್ದಕ್ಕೂ ಪ್ರಬಲವಾಗಿತ್ತು. ಅಂತಿಮವಾಗಿ ಹೆಚ್ಚುವರಿ ಬೌಲರ್‌ನೊಂದಿಗೆ ತಂಡ ಮುನ್ನಡೆಯಿತು' ಎಂದರು.

ಇದನ್ನೂ ಓದಿ:ಕಪ್​ ಗೆಲ್ಲಲು ನಾವಷ್ಟೇ ಕಷ್ಟಪಟ್ಟಿಲ್ಲ, ನೆಹ್ರಾ, ಕರ್ಸ್ಟನ್‌ರಿಂದ ಹಿಡಿದು ಎಲ್ಲರ ಶ್ರಮವಿದೆ: ಪಾಂಡ್ಯ

ಫೈನಲ್‌ನಲ್ಲಿ ಆಲ್​​ರೌಂಟರ್​ ಆಟ ಪ್ರದರ್ಶಿಸಿದ ಪಾಂಡ್ಯರನ್ನು ಶ್ಲಾಘಿಸಿದ ಗ್ಯಾರಿ, 'ಹಾರ್ದಿಕ್ ತುಂಬಾ ವಿನಮ್ರ ಮತ್ತು ಕಲಿಯಲು ಉತ್ಸುಕರಾದ ಆಟಗಾರ. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿ, ಜವಾಬ್ದಾರಿಯಿಂದ ಪಂದ್ಯವನ್ನು ಮುನ್ನಡೆಸಿದರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಚ್ ಆಶಿಶ್ ನೆಹ್ರಾ ಶ್ಲಾಘಿಸಿದ ಗ್ಯಾರಿ, 'ಆಶಿಶ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ರಣತಂತ್ರ ಹೆಣೆಯುವುದರಲ್ಲಿ ಆತ ನಿಪುಣ. ಪಂದ್ಯಾವಳಿಯಲ್ಲಿ ಅವರು ಬಹಳಷ್ಟು ತೊಡಗಿಸಿಕೊಂಡಿದ್ದಾರೆ ಎಂದರು.

2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್‌ ಮತ್ತು ಆಟಗಾರನ ಪಾತ್ರದಲ್ಲಿ ಆಶಿಶ್ ನೆಹ್ರಾ ಇದ್ದರು. ಈಗ ಪಾತ್ರ ಬದಲಾಗಿದೆ. ಆಶಿಶ್ ಗುಜರಾತ್ ಟೈಟಾನ್ಸ್‌ನಲ್ಲಿ ಮುಖ್ಯ ಕೋಚ್ ಪಾತ್ರ ವಹಿಸಿದರೆ, ಗ್ಯಾರಿ ಅವರ ಮಿತ್ರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಾಂಡ್ಯರ ಹೊರತಾಗಿ 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟಿಗಿದ್ದ ನಂತರ ಗುಜರಾತ್​ ಟೈಟಾನ್ಸ್​ನಲ್ಲಿ ಆಶಿಶ್ ನೆಹ್ರಾ ಜೊತೆ ಪುನರ್ಮಿಲನವನ್ನು ಕರ್ಸ್ಟನ್ ಆನಂದಿಸಿದ್ದಾರೆ.

ಇದನ್ನೂ ಓದಿ:ನೋಡಿ: ಮಿಂಚಿನಂತೆ ಬೌಲಿಂಗ್​ ಮಾಡಿ ಉಮ್ರಾನ್​ ದಾಖಲೆ ಮುರಿದ ಲಾಕಿ ಫರ್ಗ್ಯೂಸನ್!

Last Updated : May 30, 2022, 11:15 AM IST

ABOUT THE AUTHOR

...view details