ಕರ್ನಾಟಕ

karnataka

'ರಣಜಿ ಆಡಲು ಹೋಗಿ'... ಮಹತ್ವದ ಪಂದ್ಯದಲ್ಲಿ ಕೊಹ್ಲಿ ವೈಫಲ್ಯಕ್ಕೆ ಅಭಿಮಾನಿಗಳ ಆಕ್ರೋಶ

By

Published : May 27, 2022, 9:19 PM IST

ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Virat Kohli got out cheaply
Virat Kohli got out cheaply

ಅಹಮದಾಬಾದ್​(ಗುಜರಾತ್​):ಇಂಡಿಯನ್ ಪ್ರೀಮಿಯರ್ ಲೀಗ್​ನ ಕ್ವಾಲಿಫೈಯರ್​ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ತಂಡದ ಅನುಭವಿ ಆಟಗಾರ ವಿರಾಟ್​ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಇನ್ನಿಲ್ಲದ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಇವರ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್​ಸಿಬಿ ಫಾಲೋವರ್ಸ್​​ ಟೀಕೆ ವ್ಯಕ್ತಪಡಿಸಿದ್ದು, ಕೌಂಟಿ ಅಥವಾ ರಣಜಿ ಪಂದ್ಯವನ್ನಾಡಲು ಹೋಗುವಂತೆ ಒತ್ತಾಯಿಸಿ, ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:IPL ಫೈನಲ್​ಗೋಸ್ಕರ ಮದುವಣಗಿತ್ತಿಯಂತೆ ಮೋದಿ ಕ್ರೀಡಾಂಗಣ ಶೃಂಗಾರ.. ಟಿಕೆಟ್ ಖರೀದಿ ಬಲು ಜೋರು!

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನೂ ನೀಡಿಲ್ಲ. ಆದರೆ, ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ 73ರನ್​ಗಳಿಕೆ ಮಾಡಿ ಫಾರ್ಮ್​ಗೆ ಮರಳಿದ್ದರು. ಇದಾದ ಬಳಿಕ ಲಖನೌ ಹಾಗೂ ಇಂದಿನ ನಿರ್ಣಾಯಕ ಪಂದ್ಯದಲ್ಲೂ ವೈಫಲ್ಯ ಅನುಭವಿಸಿರುವ ಕಾರಣ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಫಾರ್ಮ್​ ಮರಳಿ ಪಡೆದುಕೊಳ್ಳಲು ರಣಜಿ ಅಥವಾ ಕೌಂಟಿ ಕ್ರಿಕೆಟ್ ಆಡುವಂತೆ ಅನೇಕರು ಟ್ವೀಟ್ ಮಾಡಿ, ವಿರಾಟ್​ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details