ಮುಂಬೈ:ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 189 ರನ್ಗಳ ಸವಾಲಿನ ಮೊತ್ತ ಪೇರಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಆರ್ಸಿಬಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಯಲ್ಪಟ್ಟಿತ್ತು. ಆದರೆ ಆರಂಭಿಕರಾದ ಅನುಜ್ ರಾವತ್(0) ಮತ್ತು ನಾಯಕ ಫಾಫ್ ಡುಪ್ಲೆಸಿಸ್(8) ಹಾಗೂ ವಿರಾಟ್ ಕೊಹ್ಲಿ(12) ತಂಡದ ಮೊತ್ತ 40ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.
ವಿಕೆಟ್ ಬೀಳುತ್ತಿದ್ದರು ಅಬ್ಬರದ ಬ್ಯಾಟಿಂಗ್ ಮ್ಯಾಕ್ಸ್ವೆಲ್ 34 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ಗಳ ಸಹಿತ 55 ರನ್ಗಳಿಸಿದರು. ಇವರು ಕುಲ್ದೀಪ್ ಯಾದವ್ ಎಸೆದ 9ನೇ ಓವರ್ನಲ್ಲಿ 23 ರನ್ ಚಚ್ಚಿದರು. ಆದರೆ ಅವರ ಮುಂದಿನ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದ ಪ್ರಭುದೇಸಾಯಿ ಇಂದು 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ತಂಡದ ಮೊತ್ತ 93 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆರ್ಸಿಬಿಯಾ ಆಪತ್ಪಾಂಧವ ದಿನೇಶ್ ಕಾರ್ತಿಕ್ ಆಲ್ರೌಂಡರ್ ಮೊಹಮ್ಮದ್ ಶಹಬಾಜ್ ಜೊತೆಗೂಡಿ 6ನೇ ವಿಕೆಟ್ಗೆ 97ರನ್ಗಳ ಜೊತೆಯಾತ ನೀಡಿ 190ರನ್ಗಳ ಸವಾಲಿನ ಗುರಿ ನೀಡಲು ನೆರವಾದರು.
ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ ಅಜೇಯ 66 ರನ್ ಸಿಡಿಸಿದರು. ಅವರು ಬಾಂಗ್ಲಾದೇಶದ ಮುಸ್ತಫಿಜುರ್ ರಹಮಾನ್ ಎಸೆದ 18ನೇ ಓವರ್ನಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 28 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಶಹಬಾಜ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 32 ರನ್ಗಳಿಸಿದರು.