ಕರ್ನಾಟಕ

karnataka

IPL 2022 Auction : ಬರೋಬ್ಬರಿ.. ಕೋಟಿ ಕೊಟ್ಟು ಅಜಿಂಕ್ಯ ರಹಾನೆ ಖರಿದಿಸಿದ KKR

By

Published : Feb 13, 2022, 4:45 PM IST

ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಖರೀದಿಸಿದ್ದಾರೆ. ಚಹರ್ 14 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್​​ ಅಯ್ಯರ್ ಅವರನ್ನು ರೂ. 12.25 ಕೋಟಿಗೆ ಖರೀದಿಸಿದರೆ, ಲಖನೌ ಸೂಪರ್ ಜೈಂಟ್ಸ್ ರೂ. 10 ಕೋಟಿ ನೀಡಿ ಅವೇಶ್ ಖಾನ್ ಅವರನ್ನ ಖರೀದಿಸಿದೆ. ಅನ್ ಕ್ಯಾಪ್ಡ್ ಆಟಗಾರರ ಪೈಕಿ ಅತ್ಯಂತ ದುಬಾರಿ ಮೊತ್ತಕ್ಕೆ ಅವೇಶ್​​ ಖಾನ್​​ ಬಿಕರಿಯಾಗಿದ್ದಾರೆ..

ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ

ಬೆಂಗಳೂರು :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2ನೇ ದಿನದ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 1 ಕೋಟಿ ರೂ.ಗೆ ಖರೀದಿಸಿದೆ.

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮಾರಾಟವಾಗದೆ ಉಳಿದಿದ್ದಾರೆ. ಮೆಗಾ ಹರಾಜಿನ 2ನೇ ದಿನ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್‌ SRHಗೆ ಮಾರಾಟವಾಗಿದ್ದಾರೆ. ಈ ಬಲಗೈ ಬ್ಯಾಟರ್ ಅನ್ನು ಸನ್ ರೈಸರ್ಸ್ ಹೈದರಾಬಾದ್ 2.6 ಕೋಟಿ ರೂ.ಗೆ ಖರೀದಿಸಿದೆ.

ಅಲ್ಲದೆ, ಭಾರತದ ಬ್ಯಾಟರ್ ಮನ್​ದೀಪ್ ಸಿಂಗ್ (Mandeep Singh) ಅವರನ್ನು ದೆಹಲಿ ಕ್ಯಾಪಿಟಲ್ಸ್ 1.1 ಕೋಟಿ ರೂ.ಗೆ ಖರೀದಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜಿನ ಮೊದಲ ದಿನ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಅತಿ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರು.

ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಖರೀದಿಸಿದ್ದಾರೆ. ಚಹರ್ 14 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್​​ ಅಯ್ಯರ್ ಅವರನ್ನು ರೂ. 12.25 ಕೋಟಿಗೆ ಖರೀದಿಸಿದರೆ, ಲಖನೌ ಸೂಪರ್ ಜೈಂಟ್ಸ್ ರೂ. 10 ಕೋಟಿ ನೀಡಿ ಅವೇಶ್ ಖಾನ್ ಅವರನ್ನ ಖರೀದಿಸಿದೆ. ಅನ್ ಕ್ಯಾಪ್ಡ್ ಆಟಗಾರರ ಪೈಕಿ ಅತ್ಯಂತ ದುಬಾರಿ ಮೊತ್ತಕ್ಕೆ ಅವೇಶ್​​ ಖಾನ್​​ ಬಿಕರಿಯಾಗಿದ್ದಾರೆ.

ABOUT THE AUTHOR

...view details