ಚೆನ್ನೈ:ನನಗೆನಾಯಕ ವಿರಾಟ್ ಕೊಹ್ಲಿ. ನಾನು ಉಪನಾಯಕ. ವಿರಾಟ್ ಕೇಳಿದಾಗ ಸಲಹೆ ನೀಡುವ ಮೂಲಕ ಅವರ ಮತ್ತು ತಂಡದ ಬೆನ್ನಿಗೆ ನಿಲ್ಲುತ್ತೇನೆ. ಉಪನಾಯಕನಾಗಿ ಕೊಡುಗೆ ನೀಡಲು ಇದಕ್ಕಿಂತ ಸಂತೋಷ ಬೇರೆ ಏನಿದೆ ಎಂದು ಭಾರತ ತಂಡದ ಉಪನಾಯಕ ಮತ್ತು ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ವಿಜೇತ ಅಜಿಂಕ್ಯಾ ರಹಾನೆ ಹೇಳಿದರು.
ಆಸ್ಟ್ರೇಲಿಯಾದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ನಂತರ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳಿದ್ದ ವಿರಾಟ್ ಕೊಹ್ಲಿ, ತವರಿನಲ್ಲಿ ಫೆ.5ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಉಳಿದ ಮೂರು ಪಂದ್ಯಗಳಿಗೆ ರಹಾನೆ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದರು.
ಇದನ್ನೂ ಓದು...ಯರಾ ವ್ಯಾಲಿ ಕ್ಲಾಸಿಕ್ ಟೂರ್ನಿ.. ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸೆರೆನಾ, ಆ್ಯಶ್ ಬಾರ್ಟಿ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರಾಟ್ ಕೊಹ್ಲಿಗೆ ಸಲಹೆಗೆ ನೀಡುವ ಕೆಲಸ ನನ್ನದು. ಆದರೆ, ನನ್ನ ಕೆಲಸ ನಿಜವಾಗಿಯೂ ಸುಲಭ. ಅವರು ಕೆಲವು ವಿಷಯಗಳ ಕುರಿತು ನನ್ನನ್ನು ಕೇಳಿದಾಗಲೆಲ್ಲಾ ನನಗೆ ಗೊತ್ತಿರುವ ಸಲಹೆಗಳನ್ನು ನೀಡುತ್ತೇನೆ. ಅವರ ಮತ್ತು ತಂಡದ ಗೊಂದಲಗಳಿಗೆ ಸಲಹೆ ನೀಡುತ್ತೇನೆ.
ವಿರಾಟ್ ನಾಯಕನಾಗಿರುವ ಸಂದರ್ಭದಲ್ಲಿ ಅವರ ಹಿಂದೆ ನಿಲ್ಲುವುದೇ ನನ್ನ ಕೆಲಸ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ನನಗೆ ವಿರಾಟ್ ಕೊಹ್ಲಿಯೇ ನಾಯಕ. ನಾನು ಉಪನಾಯಕ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಮೊದಲ ಪಂದ್ಯದ ನಂತರ ಕೌಟುಂಬಿಕ ಕಾರಣಗಳಿಂದ ಅವರು ಭಾರತಕ್ಕೆ ಮರಳಿದರು.
ಹೀಗಾಗಿ, ನಾಯಕತ್ವ ವಹಿಸಿಕೊಂಡೆ. ಈಗ ವಿರಾಟ್ ತಂಡಕ್ಕೆ ಮರಳಿರುವುದು ಸಂತಸದ ಸಂಗತಿ. ನಾವು ಒಟ್ಟಾಗಿ ಮತ್ತು ನಮ್ಮ ಸಾಮರ್ಥ್ಯ ತೋರಿಸಲು ಪ್ರಯತ್ನಿಸುತ್ತೇವೆ ಎಂದು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು. ವಿರಾಟ್ ಅನುಪಸ್ಥಿತಿಯಲ್ಲಿ ಆಸೀಸ್ ವಿರುದ್ಧದ ಎರಡನೇ ಪಂದ್ಯಕ್ಕೆ ನಾಯಕತ್ವ ವಹಿಸಿಕೊಂಡಿದ್ದ 32 ವರ್ಷದ ರಹಾನೆ, ಆಕರ್ಷಕ ಶತಕ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟರು.
ನಂತರ ಸರಣಿಯನ್ನು ಉಳಿಸಿಕೊಂಡರು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ (4ನೇ ಸ್ಥಾನ) ಕಣಕ್ಕಿಳಿದರು. ಅದಕ್ಕೂ ಮೊದಲು 5ನೇ ಸ್ಥಾನದಲ್ಲಿ ಕ್ರೀಸ್ಗೆ ಬರುತ್ತಿದ್ದರು. ಉಳಿದ ಎರಡು ಪಂದ್ಯಗಳಲ್ಲಿ 1 ಡ್ರಾ ಸಾಧಿಸಿದರೆ, ಮತ್ತೊಂದು ಪಂದ್ಯ 32 ವರ್ಷಗಳ ದಾಖಲೆ ಮುರಿದಿದ್ದಲ್ಲದೆ, ಸರಣಿಯನ್ನೂ ಕೈವಶ ಮಾಡಿಕೊಂಡರು.