ಕರ್ನಾಟಕ

karnataka

IND vs NZ 3rd T20I: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಕ್ಲೀನ್‌ಸ್ವೀಪ್‌ ಗುರಿ

By

Published : Nov 21, 2021, 7:07 AM IST

Updated : Nov 21, 2021, 8:05 AM IST

ಭಾರತ-ನ್ಯೂಜಿಲೆಂಡ್‌ ನಡುವಿನ ಟಿ20 ಸರಣಿಯ 3ನೇ/ಅಂತಿಮ ಪಂದ್ಯ (India vs New Zealand, 3rd T20I) ಕೋಲ್ಕತಾದಲ್ಲಿ ಇಂದು ಸಂಜೆ ನಡೆಯಲಿದೆ.

india vs new zealand t20 3rd and final match
ind vs nz t20i: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಲೀನ್‌ ಸ್ವೀಪ್‌ ಗುರಿ

ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಪರಿಣಾಮ ಸೆಮಿಫೈನಲ್‌ ಹಂತ ಪ್ರವೇಶಿಸಲು ವಿಫಲವಾಗಿದ್ದ ಭಾರತ ಕ್ರಿಕೆಟ್‌ ತಂಡ ಇಂದು ಸಂಜೆ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ 3ನೇ ಟಿ20 (India vs New Zealand, 3rd T20I) ಪಂದ್ಯ ಗೆದ್ದು ಸರಣಿಯನ್ನು 3-0 ಅಂತರದಿಂದ ಗೆಲ್ಲುವ ತವಕದಲ್ಲಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಲವು ಬದಲಾವಣೆಗಳ ಮೂಲಕ ರೋಹಿತ್‌ ಪಡೆ ಕಣಕ್ಕಿಳಿಯುವ ಸಾಧ್ಯತೆ ಕಾಣುತ್ತಿದೆ. ಕಳೆದೆರಡು ಪಂದ್ಯಗಳಲ್ಲಿ ಸ್ಥಾನ ಪಡೆಯದವರಿಗೆ ಇಂದು ಅವಕಾಶ ಸಿಗುವ ನಿರೀಕ್ಷೆ ಇದೆ.

ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಆವೇಶ್‌ ಖಾನ್‌, ಯಜುವೇಂದ್ರ ಚಹಲ್‌ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. 2022ರ ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೇವಲ 11 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿರುವ ರೋಹಿತ್‌ ಶರ್ಮಾ ಆ ವೇಳೆಗಾಗಲೇ ಬಲಿಷ್ಠ ತಂಡ ಕಟ್ಟಬೇಕಿದೆ. ಹೀಗಾಗಿ ಯುವ ಬ್ಯಾಟರ್‌ ಹಾಗೂ ಬೌಲರ್‌ಗಳಿಗೆ ಅವಕಾಶ ಕೊಟ್ಟು ನೋಡಲಿದ್ದಾರೆ.

ದುಬೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಐಸಿಸಿ ವಿಶ್ವಕಪ್‌ ಟಿ20ಯಲ್ಲಿ ರನ್ನರ್‌ ಅಪ್‌ ಆಗಿರುವ ನ್ಯೂಜಿಲೆಂಡ್‌ ತಂಡ ಟೀಂ ಇಂಡಿಯಾ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತಿದ್ದು ಒಂದು ಪಂದ್ಯವನ್ನಾದರೂ ಗೆಲ್ಲುವ ಒತ್ತಡದಲ್ಲಿದೆ. ಈ ನಿಟ್ಟಿನಲ್ಲಿ ಇಂದಿನ ಪಂದ್ಯ ಗೆದ್ದು ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಲು ರಣತಂತ್ರಗಳನ್ನು ರೂಪಿಸುತ್ತಿದೆ. ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಬೌಲರ್‌ ಟೀಂ ಸೌಥಿ ಕಿವೀಸ್‌ ತಂಡ ಮುನ್ನಡೆಸುತ್ತಿದ್ದಾರೆ.

ಪಂದ್ಯ ಸಮಯ: ಸಂಜೆ 7 ಗಂಟೆಗೆ

ಸ್ಥಳ: ಈಡನ್‌ ಗಾರ್ಡನ್ಸ್‌, ಕೋಲ್ಕತಾ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Last Updated : Nov 21, 2021, 8:05 AM IST

ABOUT THE AUTHOR

...view details