ಕರ್ನಾಟಕ

karnataka

ಸಂಕಷ್ಟದಲ್ಲಿ ಭಾರತ ತಂಡ.. ಕ್ಯಾಚ್​ ಹಿಡಿಯಲು ಹೋಗಿ ಮೂಗಿಗೆ ಗಾಯ, ರಕ್ತಸ್ರಾವ!

By

Published : Dec 23, 2022, 1:33 PM IST

ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಠಿಣ ಫಿಲ್ಡಿಂಗ್​ ಮಾಡುತ್ತಿರುವ ಬಾಂಗ್ಲಾದೇಶ ತಂಡದ ಆಟಗಾರರೊಬ್ಬರು ಕ್ಯಾಚ್​ ಹಿಡಿಯುವ ಭರದಲ್ಲಿ ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

India vs Bangladesh 2nd test match  Mehidy injured his nose while trying to catch  India tour of Bangladesh 2022  here Bangla National Stadium in Dhaka  ಸಂಕಷ್ಟದಲ್ಲಿ ಭಾರತ ತಂಡ  ಕ್ಯಾಚ್​ ಹಿಡಿಯಲು ಹೋಗಿ ಮೂಗಿಗೆ ಗಾಯ  ಭಾರತ ತಂಡ ಸಂಕಷ್ಟ  ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಸಂಕಷ್ಟ  ಭೋಜನ ವಿರಾಮದ ನಂತರ ಉತ್ತಮ  ಉತ್ತಮವಾಗಿ ಬ್ಯಾಟ್​ ಬೀಸತ್ತಿರುವ ಶ್ರೇಯಸ್​ ಅಯ್ಯ
ಕೃಪೆ: ಐಸಿಸಿ ಟ್ವಿಟ್ಟರ್​

ಡಾಕಾ, ಬಾಂಗ್ಲಾದೇಶ: ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಆರಂಭಿಕರನ್ನು ಕಳೆದುಕೊಂಡ ನಂತರ, ಚೆತೇಶ್ವರ ಪೂಜಾರ ಮತ್ತು ಕೊಹ್ಲಿ ಇನ್ನಿಂಗ್ಸ್ ಸುಧಾರಿಸಲು ಪ್ರಯತ್ನಿಸಿದರು. ಆದರೆ, ಬಂಗಾಳದ ಬೌಲರ್ ತೈಜುಲ್ ಇಸ್ಲಾಂ ಮತ್ತೊಮ್ಮೆ ಭಾರತದ ತಂಡದ ಆಟಗಾರರ ಮೇಲೆ ದಂಡೆತ್ತಿದ್ದಾರೆ.

ತೈಜುಲ್ ಇಸ್ಲಾಂ 31ನೇ ಓವರ್ ನಲ್ಲಿ ಪೂಜಾರ (24) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಭೋಜನ ವಿರಾಮದ ನಂತರ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ (24) ಅವರನ್ನು ಬಾಂಗ್ಲಾ ಬೌಲರ್ ಟಸ್ಕಿನ್ ಅಹ್ಮದ್ ವಿಕೆಟ್​ ಪಡೆದರು. ಇದಾದ ಬಳಿಕ ಪಂತ್​ಗೆ ಅಯ್ಯರ್​ ಜೊತೆಗೂಡಿದರು.

ಉತ್ತಮವಾಗಿ ಬ್ಯಾಟ್​ ಬೀಸುತ್ತಿರುವ ಶ್ರೇಯಸ್​ ಅಯ್ಯರ್​ 43.3 ಟಸ್ಕಿನ್​ ಅಹ್ಮದ್​ ಎಸೆತದಲ್ಲಿ ಕ್ಯಾಚ್​ ನೀಡಿದ್ದರು. ಮೆಹಿಡಿ ಹಸನ್​ ಮಿರ್ಜಾ ಜಂಪ್​ ಮಾಡಿ ಒಂದು ಕೈಯಲ್ಲಿ ಕ್ಯಾಚ್​ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಬಾಲ್​ ಅವರ ಕೈಗೆ ತಗುಲಿ ನೆಲಕ್ಕೆ ಬಿದ್ದಿತ್ತು. ಇದೇ ವೇಳೆ, ಅವರು ಸಹ ನೆಲಕ್ಕೆ ಬಿದ್ದಿದ್ದು, ಮೂಗಿನಿಂದ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಿದ್ದಾರೆ.

ಇನ್ನು ಅರ್ಧ ಶತಕ ಪೂರೈಸಿರುವ ಪಂತ್​ ಮತ್ತು ಅಯ್ಯರ್ ಕ್ರೀಸ್​ನಲ್ಲಿದ್ದು ಇಬ್ಬರೂ ಅರ್ಧಶತಕ ಪೂರೈಸಿದ್ದಾರೆ. ಭಾರತ ತಂಡ 59 ಓವರ್​ಗಳಿಗೆ 4 ವಿಕೆಟ್​ಗಳನ್ನು ಕಳೆದುಕೊಂಡು 216 ರನ್​ಗಳನ್ನು ಕಲೆ ಹಾಕಿ ಮುನ್ನುಗ್ಗುತ್ತಿದೆ.

ಓದಿ:ಐಪಿಎಲ್​ ಮಿನಿ ಹರಾಜು: 87 ಸ್ಥಾನಕ್ಕೆ 405 ಆಟಗಾರರ ಪೈಪೋಟಿ

ABOUT THE AUTHOR

...view details