ಕರ್ನಾಟಕ

karnataka

ಐಸಿಸಿ ಟಿ20 ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಮುಂಬೈಕರ್ ಸೂರ್ಯಕುಮಾರ್​

By

Published : Aug 10, 2022, 3:26 PM IST

ಐಸಿಸಿ ಟಿ20 ಬ್ಯಾಟರ್​ಗಳ ನೂತನ ಪಟ್ಟಿ ರಿಲೀಸ್ ಆಗಿದ್ದು, ಇದರ ಪ್ರಕಾರ ಟೀಂ ಇಂಡಿಯಾದ ಸೂರ್ಯಕುಮಾರ್ ಯಾದವ್​ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

Suryakumar Yadav
Suryakumar Yadav

ಮುಂಬೈ:ಐಸಿಸಿ ಟಿ20 ನೂತನ ಶ್ರೇಯಾಂಕ್​ ರಿಲೀಸ್ ಆಗಿದ್ದು, ಬ್ಯಾಟಿಂಗ್​ ವಿಭಾಗದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್​ ಸೂರ್ಯಕುಮಾರ್ ಯಾದವ್​ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮುಂಬೈಕರ್​​ ಮೂರು ಸ್ಥಾನಗಳ ಬಡ್ತಿ ಪಡೆದುಕೊಂಡು, 2ನೇ ಸ್ಥಾನ ಅಲಂಕರಿಸಿದ್ದಾರೆ.

ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ಮೊದಲನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೀಂ ಇಂಡಿಯಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಕೂಡ ಉತ್ತಮ ಏರಿಕೆ ಕಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯ್​​ ಚೇತರಿಕೆ ಕಂಡಿದ್ದು, ಸದ್ಯ 44ನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಆವೇಶ್ ಖಾನ್​, ಅಕ್ಸರ್ ಪಟೇಲ್​ ಹಾಗೂ ಕುಲ್ದೀಪ್ ಯಾದವ್ ಕೂಡ ಚೇತರಿಕೆ ಕಂಡಿದ್ದಾರೆ.

ಇದನ್ನೂ ಓದಿ:ಏಷ್ಯಾಕಪ್​​ಗೆ ಸ್ಥಾನ ಪಡೆದ ಕಾರ್ತಿಕ್: 'ಆತ ಕಾಮೆಂಟರಿಗೆ ಸೂಕ್ತ' ಎಂದ ಜಡೇಜಾ!

ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕ

  • ಬಾಬರ್ ಆಜಂ(ಪಾಕಿಸ್ತಾನ) 818 ಪಾಯಿಂಟ್​
  • ಸೂರ್ಯಕುಮಾರ್ ಯಾದವ್​(ಇಂಡಿಯಾ) 805 ಪಾಯಿಂಟ್​
  • ಮೊಹಮ್ಮದ್ ರಿಜ್ವಾನ್​(ಪಾಕಿಸ್ತಾನ) 794 ಪಾಯಿಂಟ್​
  • ಮರ್ಕ್ರಾಮ್(ದಕ್ಷಿಣ ಆಫ್ರಿಕಾ) 792 ಪಾಯಿಂಟ್
  • ಡೇವಿಡ್ ಮಲನ್​(ಇಂಗ್ಲೆಂಡ್​) 731 ಪಾಯಿಂಟ್
  • ಆರನ್​ ಫಿಂಚ್​(ಆಸ್ಟ್ರೇಲಿಯಾ) 716 ಪಾಯಿಂಟ್​
  • ನಿಶಾಂಕ್​​(ಶ್ರೀಲಂಕಾ) 661 ಪಾಯಿಂಟ್
  • ಕಾನ್ವೆ(ನ್ಯೂಜಿಲ್ಯಾಂಡ್​) 655 ಪಾಯಿಂಟ್​
  • ನಿಕೂಲಸ್ ಪೂರನ್​​(ವೆಸ್ಟ್ ಇಂಡೀಸ್​​)644 ಪಾಯಿಂಟ್
  • ಮಾರ್ಟಿನ್ ಗಪ್ಟಿಲ್​(ನ್ಯೂಜಿಲ್ಯಾಂಡ್​) 638 ಪಾಯಿಂಟ್

ಜಿಂಬಾಬ್ವೆ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಮುಂಬರುವ ಏಷ್ಯಾಕಪ್​ ತಂಡದಲ್ಲೂ ಸೂರ್ಯಕುಮಾರ್ ಯಾದವ್ ಅವಕಾಶ ಪಡೆದುಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದ್ದಾರೆ.

ABOUT THE AUTHOR

...view details