ಕರ್ನಾಟಕ

karnataka

ಹೋಮ್​ ಸ್ಟೇ ವ್ಯವಹಾರ: ಕ್ರಿಕೆಟಿಗ ಯುವರಾಜ್ ಸಿಂಗ್​ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್

By

Published : Nov 23, 2022, 4:21 PM IST

ಹೋಟೆಲ್ ಅಥವಾ ಅತಿಥಿ ಗೃಹವನ್ನು ನಡೆಸುವ ಮೊದಲು ಅದನ್ನು ನಡೆಸಲು ಉದ್ದೇಶಿಸಿರುವ ಪ್ರತಿಯೊಬ್ಬ ವ್ಯಕ್ತಿಯು ನಿಗದಿತ ರೀತಿಯಲ್ಲಿ ನಿಗದಿತ ಪ್ರಾಧಿಕಾರದೊಂದಿಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹೇಳಿದ್ದಾರೆ.

ಹೋಮ್​ ಸ್ಟೇ ವ್ಯವಹಾರ: ಕ್ರಿಕೆಟಿಗ ಯುವರಾಜ್ ಸಿಂಗ್​ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್
home-stay-business-goa-tourism-department-notice-to-cricketer-yuvraj-singh

ಪಣಜಿ (ಗೋವಾ): ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಗೋವಾದ ಪ್ರವಾಸೋದ್ಯಮ ಇಲಾಖೆ ನೋಟಿಸ್ ಜಾರಿ ಮಾಡಿದೆ. ಮೋರ್ಜಿಮ್​​ನಲ್ಲಿರುವ ತನ್ನ ವಿಲ್ಲಾವನ್ನು ಹೋಮ್​ಸ್ಟೇ ಎಂದು ಆನ್ಲೈನ್​ನಲ್ಲಿ ಲಿಸ್ಟಿಂಗ್ ಮಾಡುವ ಮುನ್ನ ಅದನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲು ವಿಫಲವಾದ ಆರೋಪದ ಮೇಲೆ ಅವರಿಗೆ ನೋಟಿಸ್ ನೀಡಲಾಗಿದೆ. ಡಿಸೆಂಬರ್ 8 ರಂದು ವೈಯಕ್ತಿಕ ವಿಚಾರಣೆಗಾಗಿ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯು ವರ್ಚವಾರಾ, ಮೊರ್ಜಿಮ್‌ನಲ್ಲಿರುವ ವಿಲ್ಲಾವನ್ನು ಇಲಾಖೆಯೊಂದಿಗೆ ನೋಂದಾಯಿಸಲು ವಿಫಲವಾದ ಕಾರಣಕ್ಕಾಗಿ ರಜಿಸ್ಟ್ರೇಶನ್ ಆಫ್ ಟೂರಿಸ್ಟ್ ಟ್ರೇಡ್ ಆ್ಯಕ್ಟ್​ ಕಾಯಿದೆ ಅಡಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಪರ್ನೆಮ್‌ನ ವರ್ಚವಾರಾದಲ್ಲಿರುವ ನಿಮ್ಮ ವಸತಿ ಕಟ್ಟಡವು ಹೋಮ್​ಸ್ಟೇ ಆಗಿ ಕಾರ್ಯನಿರ್ವಹಿಸುತ್ತಿದ್ದು, Airbnb ನಂಥ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಿಸ್ಟಿಂಗ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ಪ್ರವಾಸೋದ್ಯಮ ಇಲಾಖೆಯು ಯುವರಾಜ್ ಸಿಂಗ್ ಅವರ ಟ್ವೀಟ್ ಅನ್ನು ಕೂಡ ಉಲ್ಲೇಖಿಸಿದೆ. ತಮ್ಮ ಗೋವಾದ ಮನೆಯಲ್ಲಿ ವಿಶೇಷ ವಾಸ್ತವ್ಯವನ್ನು ಆಯೋಜಿಸುವುದಾಗಿ ಉಲ್ಲೇಖಿಸಿದ ಟ್ವೀಟ್​ ಇದಾಗಿದೆ.

ನಾನು ನನ್ನ ಗೋವಾದ ಮನೆಯಲ್ಲಿ 6 ಜನರ ಗುಂಪಿಗೆ ವಿಶೇಷ ವಾಸ್ತವ್ಯವನ್ನು ಆಯೋಜಿಸಲಿದ್ದೇನೆ, @Airbnb ನಲ್ಲಿ ಮಾತ್ರ. ಇಲ್ಲಿ ನಾನು ನನ್ನ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತೇನೆ ಮತ್ತು ಮನೆಯು ಕ್ರಿಕೆಟ್​ನಲ್ಲಿನ ನನ್ನ ವರ್ಷಗಳ ನೆನಪುಗಳಿಂದ ತುಂಬಿದೆ. ಇದು ಸಂಭವಿಸುತ್ತದೆ ಎಂದು ಸಿಂಗ್ ಟ್ವೀಟ್​ ಮಾಡಿದ್ದರು.

ಹೋಟೆಲ್ ಅಥವಾ ಅತಿಥಿ ಗೃಹವನ್ನು ನಡೆಸುವ ಮೊದಲು ಅದನ್ನು ನಡೆಸಲು ಉದ್ದೇಶಿಸಿರುವ ಪ್ರತಿಯೊಬ್ಬ ವ್ಯಕ್ತಿಯು ನಿಗದಿತ ರೀತಿಯಲ್ಲಿ ನಿಗದಿತ ಪ್ರಾಧಿಕಾರದೊಂದಿಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹೇಳಿದ್ದಾರೆ.

ಹಾಗಾಗಿ, ಗೋವಾ ನೋಂದಣಿ ವ್ಯಾಪಾರ ವಹಿವಾಟು ಕಾಯ್ದೆ, 1982ರ ಅಡಿ ನೋಂದಣಿ ಮಾಡದಿದ್ದಕ್ಕಾಗಿ ನಿಮ್ಮ ವಿರುದ್ಧ ದಂಡದ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು ಈ ಮೂಲಕ ನಿಮಗೆ ನೋಟಿಸ್ ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಇದಲ್ಲದೆ ನಿಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ವೈಯಕ್ತಿಕ ವಿಚಾರಣೆಗಾಗಿ ಗೊತ್ತುಪಡಿಸಿದ ಪ್ರಾಧಿಕಾರದ ಕೊಠಡಿಯಲ್ಲಿ 08.12.2022 ರಂದು ಬೆಳಿಗ್ಗೆ 11:00 ಗಂಟೆಗೆ ಕೆಳಗೆ ಸಹಿ ಮಾಡಿದವರ ಮುಂದೆ ಹಾಜರಾಗಲು ನಿಮಗೆ ನಿರ್ದೇಶಿಸಲಾಗಿದೆ ಎಂದು ನೋಟಿಸ್​​ನಲ್ಲಿ ತಿಳಿಸಲಾಗಿದೆ.

ಸೂಚಿಸಿದ ದಿನಾಂಕದೊಳಗೆ (ಡಿಸೆಂಬರ್ 8) ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಅದನ್ನು ಕಾಯಿದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು 1 ಲಕ್ಷದವರೆಗೆ ದಂಡವನ್ನು ವಿಧಿಸಬಹುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಹೋಂಸ್ಟೇಗಳ ಮೇಲೆ ಸರ್ಕಾರದ ಹಿಡಿತವೂ ಇಲ್ಲ, ಲೆಕ್ಕವೂ ಇಲ್ಲ.. ಕ್ರಮ ಕೈಗೊಳ್ಳೋದ್ಯಾರು!?

ABOUT THE AUTHOR

...view details