ಕರ್ನಾಟಕ

karnataka

ಓವಲ್​ನಲ್ಲಿ ಅಶ್ವಿನ್​ ಆಡದಿದ್ದರೆ ಅದಕ್ಕಿಂತ ದೊಡ್ಡ ಆಶ್ಚರ್ಯವಿಲ್ಲ: ಆಶಿಷ್​ ನೆಹ್ರಾ

By

Published : Sep 1, 2021, 2:50 PM IST

5 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ 1 ಪಂದ್ಯ ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ. ಗುರುವಾರ ಓವಲ್​ನಲ್ಲಿ 4ನೇ ಟೆಸ್ಟ್​ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆ ಪಡೆದುಕೊಳ್ಳುವುದಕ್ಕೆ ಎರಡೂ ತಂಡಗಳು ಹಾತೊರೆಯುತ್ತಿವೆ.

England vs India
ರವಿಚಂದ್ರನ್ ಅಶ್ವಿನ್

ಮುಂಬೈ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್​ ವೇಳೆ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡದ ಒಬ್ಬ ವೇಗದ ಬೌಲರ್​ ಬದಲಿಗೆ ಅನುಭವಿ ಹಾಗೂ ವಿಶ್ವದ 2ನೇ ಶ್ರೇಯಾಂಕದ ಬೌಲರ್ ಆಗಿರುವ ರವಿಚಂದ್ರನ್​ ಅಶ್ವಿನ್​ ಜೊತೆಯಾಗಿ ಮುನ್ನಡೆಯಬೇಕು. ಒಂದು ವೇಳೆ ಅಶ್ವಿನ್​ಗೆ ಅವಕಾಶ ಸಿಗದಿದ್ದರೆ ಅದಕ್ಕಿಂತ ಬೇರೆ ಆಶ್ಚರ್ಯ ಮತ್ತೊಂದಿಲ್ಲ ಎಂದು ಮಾಜಿ ಟೀಮ್ ಇಂಡಿಯಾ ಬೌಲರ್ ಆಶಿಷ್ ನೆಹ್ರಾ ಹೇಳಿದ್ದಾರೆ.

5 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ 1 ಪಂದ್ಯ ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ. ಗುರುವಾರ ಓವಲ್​ನಲ್ಲಿ 4ನೇ ಟೆಸ್ಟ್​ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆ ಪಡೆದುಕೊಳ್ಳುವುದಕ್ಕೆ ಎರಡೂ ತಂಡಗಳು ಹಾತೊರೆಯುತ್ತಿವೆ.

ಓವಲ್ ಬ್ಯಾಟಿಂಗ್​ಗೆ ಹೆಚ್ಚು ಅನುಕೂಲಕರವಾಗಿರುವ ಸ್ಥಳ. ಇಂಗ್ಲೆಂಡ್​ ಪ್ರತಿ ಸೀಸನ್​ನಲ್ಲಿ ಪರಿಸ್ಥಿತಿ ಬದಲಾಗುವ ಒಂದು ಸ್ಥಳ. ಅಲ್ಲಿ ಏನೂ ಬೇಕಾದರೂ ಆಗಬಹದು. ಅಲ್ಲಿ ಹೆಚ್ಚು ಬೌನ್ಸ್​ ಕಂಡುಬರಬಹುದು. ಆದರೆ ಚಲನೆ ಹೆಚ್ಚಿರುವುದಿಲ್ಲ. ಸಲೈವಾವನ್ನು ಈ ದಿನಗಳಲ್ಲಿ ಬಳಸಲು ನಿಷೇಧವಿರುವುದರಿಂದ ಬೌಲರ್​ಗಳಿಗೆ ಇಲ್ಲಿ ಹೆಚ್ಚು ಕಷ್ಟಪಡಬೇಕಾಗುತ್ತದೆ. ಈ ಟೆಸ್ಟ್​ ಪಂದ್ಯದಲ್ಲಿ ಯಾರಾದರೂ ಒಬ್ಬ ವೇಗಿ ಬದಲಿಗೆ ರವಿಚಂದ್ರನ್​ ಅಶ್ವಿನ್ ಆಡಿದರೆ ಉತ್ತಮ. ಅಶ್ವಿನ್ ಓವಲ್​ನಲ್ಲಿ ಆಡಲು ಅವಕಾಶ ಪಡೆಯದಿದ್ದರೆ ಖಂಡಿತ ದೊಡ್ಡ ಆಶ್ಚರ್ಯ ಎಂದು ನೆಹ್ರಾ ಹೇಳಿದ್ದಾರೆ.

ನಾವು ಹಲವು ಬಾರಿ ಇಂಗ್ಲೆಂಡ್ ಪ್ರವಾಸವನ್ನು ಹೊಂದಿದ್ದೇವೆ. 2011ರಿಂದ ಇದು ನಮಗೆ ನಾಲ್ಕನೇ ಪ್ರವಾಸ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದೇ ದೊಡ್ಡ ಸವಾಲು. ನೀವು 2011ರಿಂದ ನೋಡಿದರೆ ನಾವು ಅಲ್ಲಿ ಅತಿಥೇಯರ ವಿರುದ್ಧ ಉತ್ತಮ ಹೋರಾಟ ನಡೆಸಿದ್ದೇವೆ. 2018ರಲ್ಲಿ ಗೆಲುವು ಕೂಡ ಸಾಧಿಸಿದ್ದೇವೆ. ಈ ಬಾರಿ ಸರಣಿಯನ್ನು ಗೆಲ್ಲುವ ಅವಕಾಶ ಕೂಡ ಇದೆ. ಸರಣಿ ಗೆಲುವು ಸಾಧ್ಯವಾಗದಿದ್ದಲ್ಲಿ 2-2ರಲ್ಲಿ ಸಮಬಲ ಸಾಧಿಸುವ ಅವಕಾಶ ಕೂಡ ಇದೆ. ಆದರೆ ಇಂಗ್ಲೆಂಡ್ ಈ ಸರಣಿಯನ್ನು ಗೆದ್ದರೆ ನನಗೆ ಯಾವುದೇ ಆಶ್ಚರ್ಯವಿಲ್ಲ ಎಂದು ನೆಹ್ರಾ ಹೇಳಿದ್ದಾರೆ.

ಇದನ್ನು ಓದಿ:’ಬ್ಯಾಟಿಂಗ್ ಬಲಪಡಿಸಬೇಕು ಇಲ್ಲ ಅಮೂಲ್ಯ ಆಟಗಾರನನ್ನು ಕೈಬಿಡಬೇಕು‘.. ಕೊಹ್ಲಿ ಮುಂದಿರುವುದು ಇವರೆಡೇ ದಾರಿ!

ABOUT THE AUTHOR

...view details