ಬರ್ಮಿಂಗ್ಹ್ಯಾಮ್(ಎಡ್ಜಬಾಸ್ಟನ್): ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 245ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 378ರನ್ಗಳ ಗುರಿ ನೀಡಿದೆ. ಎರಡು ದಿನಗಳ ಆಟ ಬಾಕಿ ಇರುವ ಕಾರಣ ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 416 ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ 284 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 132ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 10ವಿಕೆಟ್ ನಷ್ಟಕ್ಕೆ 245ರನ್ಗಳಿಕೆ ಮಾಡಿ, ಆಲೌಟ್ ಆಗಿದೆ. ತಂಡದ ಪರ ಪೂಜಾರಾ(66) ಹಾಗೂ ಪಂತ್(57)ರನ್ಗಳಿಕೆ ಮಾಡಿದರು.
ಇಂಗ್ಲೆಂಡ್ ತಂಡದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ 4 ವಿಕೆಟ್ ಪಡೆದುಕೊಂಡಿದ್ದು, ಬ್ರಾಡ್, ಪ್ಯಾಟ್ಸ್ ತಲಾ 2 ವಿಕೆಟ್ ಹಾಗೂ ಆ್ಯಂಡರ್ಸನ್ ಮತ್ತು ಲೆಂಚ್ 1 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ:ಒಂದೇ ಟೆಸ್ಟ್ನಲ್ಲಿ ಶತಕ, ಅರ್ಧಶತಕ: 72 ವರ್ಷಗಳ ಹಳೆಯ ದಾಖಲೆ ಬ್ರೇಕ್ ಮಾಡಿದ ರಿಷಭ್ ಪಂತ್
ಈಗಾಗಲೇ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆಯಲ್ಲಿದ್ದು, ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಅವಶ್ಯವಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋಲು ಕಂಡರೆ, ಸರಣಿ ಸಮಬಲಗೊಳ್ಳಲಿದೆ. ಇಂದು ಮತ್ತು ನಾಳೆಯ ಪಂದ್ಯ ಬಾಕಿ ಇದ್ದು, ಒಟ್ಟು 150 ಓವರ್ಗಳ ಆಟ ನಡೆಯಲಿದೆ. ಹೀಗಾಗಿ, ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.ಆದರೆ, ಫಲಿತಾಂಶ ಯಾರ ಪರವಾಗಿ ಬರಲಿದೆ ಎಂಬುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ.