ಸಿಡ್ನಿ: ಮಹಿಳಾ ಕ್ರಿಕೆಟ್ನಲ್ಲಿ ದೊಡ್ಡ ಟಿ20 ಲೀಗ್ಆದ ಆಸ್ಟ್ರೇಲಿಯಾದ ಬಿಗ್ಬ್ಯಾಶ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮಹಿಳಾ ತಂಡದ ಆಟಗಾರ್ತಿ ಕರ್ಟ್ನಿ ವೆಬ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಾವೂ ಯಾವ ಪುರುಷ ಕ್ರಿಕೆಟರ್ಗೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕೊನೆಯ ಓವರ್ನಲ್ಲಿ 15 ರನ್.. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆದ್ದ ಮಹಿಳಾ ಕ್ರಿಕೆಟರ್..
ತಂಡದ ಗೆಲುವಿಗೆ ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್ನ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಮರಿಝಾನ್ನೆ ಕಾಪ್ ಅವರ ಓವರ್ನಲ್ಲಿ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗೆ ಕರ್ಟ್ನಿ ವೆಬ್ ಸಿಕ್ಸರ್ ಸಿಡಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಮಹಿಳಾ ಬಿಗ್ಬ್ಯಾಶ್ ಲೀಗ್ನಲ್ಲಿ ಬಲಿಷ್ಠ ತಂಡದವಾದ ಸಿಡ್ನಿ ಸಿಕ್ಸರ್ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 139 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಡೇನಿಯಲ್ ವೇಟ್ ಅವರ ಅರ್ಧಶತಕ ಹಾಗೂ ಕರ್ಟ್ನಿ ವೆಬ್ರ ಕೊನೆ ಎಸೆತದಲ್ಲಿ ಸಿಡಿಸಿದ ಆಕರ್ಷಕ ಸಿಕ್ಸರ್ ನೆರವನಿಂದ ರೋಚಕ ಜಯ ಸಾಧಿಸಿತು.
ರೆನೆಗೇರ್ಡ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 15 ರನ್ ಅಗತ್ಯವಿತ್ತು. ಕಾರ್ಲಿ ಲೀಸನ್(15) ಹಾಗೂ ಕಾರ್ಟ್ನಿ ವೆಬ್(19) ಕ್ರೀಸ್ನಲ್ಲಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಮರಿಝಾನ್ನೆ ಕಾಪ್ ಬೌಲಿಂಗ್ನಲ್ಲಿದ್ದರು. ಮೊದಲ ಎಸೆತದಲ್ಲಿ ಕಾರ್ಲಿ ಲೀಸನ್ ಸಿಂಗಲ್ ತೆಗೆದುಕೊಂಡರು, ನಂತರದ 2 ಎಸೆತಗಳಲ್ಲಿ ವೆಬ್ 2 ಹಾಗೂ 4 ರನ್ ಬಾರಿಸಿದರು. 4ನೇ ಎಸೆತದಲ್ಲಿ ಒಂದು ರನ್ ಪೂರೈಸಿ ಲೀಸನ್ ರನ್ಔಟ್ ಆದರು. ಕೊನೆ ಎರಡು ಎಸೆತದಲ್ಲಿ 7ರನ್ ಅಗತ್ಯವಿತ್ತು, 5ನೇ ಎಸೆತದಲ್ಲಿ 2 ರನ್ ತೆಗೆದುಕೊಂಡ ವೆಬ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು.