ಕರ್ನಾಟಕ

karnataka

ಪಾಕಿಸ್ತಾನ ತಂಡದಲ್ಲಿ ಮತ್ತೆ ಮೂವರಿಗೆ ಕೊರೊನಾ: ತಂಡದ ಟ್ರೈನಿಂಗ್​ ನಿಷೇಧ ಮುಂದುವರಿಕೆ

By

Published : Dec 1, 2020, 7:38 PM IST

ನ್ಯೂಜಿಲ್ಯಾಂಡ್​ ಆರೋಗ್ಯ ಸಚಿವಾಲಯ ಕ್ವಾರಂಟೈನ್​ನಲ್ಲಿದ್ದ ಆಟಗಾರರಿಗೆ ಹೇಗೆ ಸೋಂಕು ಹರಡಿದೆ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಮತ್ತೆ ಮೂವರಿಗೆ ಕೋವಿಡ್ ದೃಢಪಟ್ಟಿರುವುದು ಸರಣಿ ನಡೆಯುವುದರ ಮೇಲೆ ಪರಿಣಾಮ ಬೀರಿದೆ.

ಪಾಕ್ ಆಟಗಾರರಿಗೆ ಕೊರೊನಾ
ಪಾಕ್ ಆಟಗಾರರಿಗೆ ಕೊರೊನಾ

ಕ್ರೈಸ್ಟ್​ಚರ್ಚ್​:ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡದಲ್ಲಿ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತ ಆಟಗಾರರ ಸಂಖ್ಯೆ 10ಕ್ಕೇರಿದೆ. ಇನ್ನು ಸರಣಿಗೂ ಮುನ್ನ ಒಂದು ಪರೀಕ್ಷೆ ಮಾತ್ರ ಬಾಕಿ ಉಳಿದಿದ್ದು, ಭಾನುವಾರ ನಡೆಯಲಿದೆ.

ನ್ಯೂಜಿಲ್ಯಾಂಡ್​ ಆರೋಗ್ಯ ಸಚಿವಾಲಯ ಕ್ವಾರಂಟೈನ್​ನಲ್ಲಿದ್ದ ಆಟಗಾರರಿಗೆ ಹೇಗೆ ಸೋಂಕು ಹರಿಡಿದೆ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಮತ್ತೆ ಮೂವರಿಗೆ ಕೋವಿಡ್ ದೃಢಪಟ್ಟಿರುವುದು ಸರಣಿ ನಡೆಯುವುದರ ಮೇಲೆ ಪರಿಣಾಮ ಬೀರಿದೆ.

ಹೊಸ ಸುತ್ತಿನ ಪರೀಕ್ಷೆಯಲ್ಲಿ 46 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಇದರಲ್ಲಿ 3 ಮೂವರ ಫಲಿತಾಂಶ ಪಾಸಿಟಿವ್ ಬಂದಿದೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗಾಗಲೇ ಕೋವಿಡ್ ಪ್ರೋಟೋಕಾಲ್​ಗಳನ್ನು ಬ್ರೇಕ್ ಮಾಡಿರುವುದಕ್ಕಾಗಿ ಫೈನಲ್ ವಾರ್ನಿಂಗ್ ನೀಡಲಾಗಿದೆ. ಜೊತೆಗೆ ಅವರ ಮುಂದಿನ ಸರಣಿ ಸಿದ್ಧತೆಗೂ ತೊಡಕಾಗುತ್ತಿದೆ. ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್​​ನಲ್ಲಿ ಡಿಸೆಂಬರ್ 18ರಿಂದ 3 ಪಂದ್ಯಗಳ ಟಿ-20 ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ABOUT THE AUTHOR

...view details