ಕರ್ನಾಟಕ

karnataka

ಭಾರತದ ವಿರುದ್ಧ ಟೆಸ್ಟ್‌ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಮಿಚೆಲ್ ಸ್ಟಾರ್ಕ್​

By

Published : Dec 13, 2020, 3:09 PM IST

ಕುಟುಂಬ ಸದಸ್ಯರ ಅನಾರೋಗ್ಯದ ಕಾರಣ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದ ನಂತರ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡ ತೊರೆದಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೂ ಮೊದಲು ತಂಡ ಸೇರಿಕೊಳ್ಳುತ್ತಿದ್ದಾರೆ.

Starc to be back in Australia squad
ಮಿಚೆಲ್ ಸ್ಟಾರ್ಕ್​

ಸಿಡ್ನಿ: ಡಿಸೆಂಬರ್ 17 ರಿಂದ ಅಡಿಲೇಡ್‌ನ ಓವಲ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸೋಮವಾರ ಮತ್ತೆ ಆಸ್ಟ್ರೇಲಿಯಾ ತಂಡ ಸೇರಿಕೊಳ್ಳಲಿದ್ದಾರೆ.

ಮಿಚೆಲ್ ಸ್ಟಾರ್ಕ್​

ಭಾರತ vs ಆಸ್ಟ್ರೇಲಿಯಾ ಅಹರ್ನಿಶಿ ಟೆಸ್ಟ್ ಪಂದ್ಯ:

ಕುಟುಂಬ ಸದಸ್ಯರ ಅನಾರೋಗ್ಯದ ಕಾರಣ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದ ನಂತರ ಸ್ಟಾರ್ಕ್ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡವನ್ನು ತೊರೆದಿದ್ದರು.

ಆಸೀಸ್ ತಂಡ ಸೇರಿಕೊಂಡ ಮಿಚೆಲ್ ಸ್ಟಾರ್ಕ್:

"ಅಡಿಲೇಡ್​ಗೆ ತೆರಳಲು ನಾನು ಸಿದ್ಧನಿದ್ದೇನೆ ಎಂದು ಸ್ಟಾರ್ಕ್ ಹೇಳಿದ್ದಾರೆ. ಆಸ್ಟ್ರೇಲಿಯಾ ಎ ತಂಡದ ಸಹ ಆಟಗಾರರೊಂದಿಗೆ ಸೋಮವಾರ ಸಿಡ್ನಿಯಿಂದ ಹೊರಡಲಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಚೆಲ್ ಸ್ಟಾರ್ಕ್​

ಸೀನ್ ಅಬಾಟ್, ಜೋ ಬರ್ನ್ಸ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್ ಮತ್ತು ಮಿಚ್ ಸ್ವೆಪ್ಸನ್ ಅವರೊಂದಿಗೆ ಭಾರತದ ಆಟಗಾರರು ಸಿಡ್ನಿಯಿಂದ ತೆರಳಲಿರುವ ವಿಮಾನದಲ್ಲಿ ಸ್ಟಾರ್ಕ್ ಕೂಡ ಪ್ರಯಾಣ ಬೆಳೆಸಲಿದ್ದಾರೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೂ ಮೊದಲು 2 ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ.

"ಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತೇನೆ ಎಂಬ ಸ್ಟಾರ್ಕ್​ ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಕುಟುಂಬದ ಜೊತೆ ಸಮಯ ಕಳೆದ ನಂತರ ಮತ್ತೆ ಸೋಮವಾರ ತಂಡ ಸೇರಿಕೊಳ್ಳುತ್ತಿರುವ ಸ್ಟಾರ್ಕ್​ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ" ಎಂದು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಸ್ಟಾರ್ಕ್​, ಈವರೆಗೂ ಆಡಿದ ಏಳು ಪಂದ್ಯಗಳಲ್ಲಿ 42 ವಿಕೆಟ್ ಪಡೆದಿದ್ದಾರೆ.

ABOUT THE AUTHOR

...view details