ಸೂರತ್:ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭಾರತೀಯ ವನಿತೆಯರ ಟೀಂ ಪ್ರಾಬಲ್ಯ ಸಾಧಿಸಿದ್ದು, ಇನ್ನೂ ಒಂದು ಪಂದ್ಯ ಉಳಿದಿರುವಂತೆ 3-0ಯಲ್ಲಿ ಸರಣಿ ಜಯಿಸಿದೆ.
ಸೂರತ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 5 ವಿಕೆಟ್ಗಳಿಂದ ದಕ್ಷಿಣಆಫ್ರಿಕಾದ ಮಹಿಳಾ ತಂಡ ಮಣಿಸಿ ಸರಣಿ ವಶಪಡಿಸಿಕೊಂಡಿದೆ.ಟಾಸ್ ಗೆದ್ದು ಹರಿಣಗಳಿಗೆ ಬ್ಯಾಟಿಂಗ್ ಆಹ್ವಾನ ನೀಡಿದ ಹರ್ಮನ್ಪ್ರೀತ್ ಕೌರ್ ನಿರ್ಧಾರವನ್ನು ಭಾರತೀಯ ಬೌಲರ್ಗಳು ಸಮರ್ಥಿಸಿಕೊಂಡರು. ಭಾರತದ ಸ್ಪಿನ್ ಬೌಲಿಂಗ್ ಮುಂದೆ ಪರದಾಡಿದ ದ.ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 98 ರನ್ಗಳಿಸಿತು.