ಕರ್ನಾಟಕ

karnataka

ಲಾಲಾರಸ ಬಳಕೆ ನಿಷೇಧ ಬೌಲರ್​ಗಳನ್ನು ರೊಬೊಟ್​​​​​​​ಗಳಾಗಿಸಿದೆ : ಐಸಿಸಿಗೆ ಅಕ್ರಂ ಎಚ್ಚರಿಕೆ

By

Published : Jun 11, 2020, 2:51 PM IST

ವೈರಸ್​ ಭೀತಿಯಿಂದ ಐಸಿಸಿ ತಾತ್ಕಾಲಿಕವಾಗಿ ತಂಡಗಳು ಮೈದಾನಕ್ಕಿಳಿದು ಅಭ್ಯಾಸ ಮಾಡುತ್ತಿರುವುದನ್ನು ನಿಷೇಧಿಸಿದೆ. ಆದರೆ ಬೌಲರ್​ಗಳು ಬೆವರನ್ನ ಚೆಂಡಿಗೆ ಲೇಪಿಸಲು ಅವಕಾಶ ನೀಡಿದೆ.

ಲಾಲಾರಸದ ಬಳಕೆಯ ನಿಷೇಧ
ಲಾಲಾರಸದ ಬಳಕೆಯ ನಿಷೇಧ

ಕರಾಚಿ: ಎಂಜಲು ಅಥವಾ ಲಾಲಾರಸದ ಬಳಕೆ ನಿಷೇಧಿಸುವುದರ ವಿರುದ್ಧ ಪಾಕಿಸ್ತಾನದ ಲೆಜೆಂಡ್​ ವಾಸಿಮ್​ ಅಕ್ರಂ ಐಸಿಸಿಗೆ ಎಚ್ಚರಿಕೆ ನೀಡಿದ್ದು, ಬೌಲರ್​ಗಳು ರೊಬೊಟ್​​​​​​​ಗಳನ್ನಾಗಿ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೌಲರ್​ಗಳು ಸಾಂಪ್ರಾದಾಯಿಕವಾಗಿ ಬೆವರು ಮತ್ತು ಲಾಲಾರಸವನ್ನು ಬಳಸಿಕೊಂಡು ಚೆಂಡಿನ ಒಂದು ಬದಿಗೆ ಹೊಳಪು ತರುವುದಲ್ಲದೇ, ಚೆಂಡನ್ನು ಗಾಳಿಯಲ್ಲಿ ಚಲಿಸಲು ಅಥವಾ ಸ್ವಿಂಗ್ ಮಾಡುತ್ತಾರೆ.

ವೈರಸ್​ ಭೀತಿಯಿಂದ ಐಸಿಸಿ ತಾತ್ಕಾಲಿಕವಾಗಿ ತಂಡಗಳು ಮೈದಾನಕ್ಕಿಳಿದು ಅಭ್ಯಾಸ ಮಾಡುತ್ತಿರುವುದನ್ನು ನಿಷೇಧಿಸಿದೆ. ಆದರೆ ಬೌಲರ್​ಗಳು ಬೆವರನ್ನು ಚೆಂಡಿಗೆ ಲೇಪಿಸಲು ಅವಕಾಶ ನೀಡಿದೆ.

‘ಇದು(ಲಾಲಾರಸ ಬಳಕೆ ನಿಷೇದ) ಬೌಲರ್​ಗಳನ್ನು ರೋಬೋಟ್​ಗಳನ್ನಾಗಿ ಮಾಡುತ್ತದೆ ಮತ್ತು ಸ್ವಿಂಗ್​ ಇಲ್ಲದೇ ಬೌಲಿಂಗ್ ಮಾಡುವಂತೆ ಮಾಡಿದೆ. ಅಲ್ಲದೇ ಸ್ವಿಂಗ್ ಮಾಡಬೇಕಾದರೆ ಚೆಂಡು ಸ್ವಾಭಾವಿಕವಾಗಿ ಹಳೆಯದಾಗುವವರೆಗೂ ಕಾಯುವಂತಹ ಸನ್ನಿವೇಶ ನಿರ್ಮಾಣ ಮಾಡಿದೆ’ ಎಂದು ಅಕ್ರಮ್​ ಹೇಳಿದ್ದಾರೆ.

ನಾನು ಚೆಂಡನ್ನು ಹೊಳೆಯಲು ಮತ್ತು ಅದನ್ನು ಸ್ವಿಂಗ್ ಮಾಡಲು ಲಾಲಾರಸವನ್ನು ಬಳಸಿ ಬೆಳೆದ ಕಾರಣ ಇಂದು ನನಗೆ ರಸಪ್ರಶ್ನೆ ಪರಿಸ್ಥಿತಿ ಎದುರಾಗಿದೆ ಎಂದು ಅಕ್ರಮ್​ ತಿಳಿಸಿದ್ದಾರೆ.

ಈ ಕಠಿಣ ಸಂದರ್ಭದಲ್ಲಿ ಬೌಲರ್​ಗಳು ಸ್ವಿಂಗ್​ ಮಾಡಲು ಚೆಂಡು ಹಳೆಯದಾಗುವವರೆಗೂ ಹಾಗೂ ಒರಟಾಗುವವರೆಗೂ ಕಾಯಲೇಬೇಕಿದೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಹೆಚ್ಚು ತಂಪಾಗಿರುವುದರಿಂದ ಅಲ್ಲಿ ಬೆವರು ಕೂಡ ಬರುವುದಿಲ್ಲ. ಹಾಗಾಗಿ ಸ್ವಿಂಗ್ ಕಾಣುವ ಸಾಧ್ಯತೆ ಕೂಡ ಕಡಿಮೆಯಿದೆ. ಹಾಗೆಯೇ ಕೇವಲ ಬೆವರನ್ನು ಬಳಕೆ ಮಾಡಿದರೆ ಚೆಂಡು ಒದ್ದೆಯಾಗುವ ಸಂಭವವಿರುತ್ತದೆ ಎಂದು 414 ಟೆಸ್ಟ್​ ವಿಕೆಟ್​, 502 ಏಕದಿನ ವಿಕೆಟ್​ ಪಡೆದಿರುವ ಅಕ್ರಂ​ ವಿವರಿಸಿದ್ದಾರೆ.

ಇನ್ನು ಲಾಲಾರಸ ಬಳಗೆ ನಿಷೇಧ ಮಾಡಿರುವುದರಿಂದ ಬೌಲರ್​ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಅಕ್ರಂ​ ವಿನಂತಿಸಿಕೊಂಡಿದ್ದಾರೆ.

ABOUT THE AUTHOR

...view details