ಕರ್ನಾಟಕ

karnataka

ತವರಿನಲ್ಲೇ ಪಾಕ್ ಆಟಗಾರರಿಗೆ ಸೋಂಕು ತಗುಲಿರಬಹುದು : ನ್ಯೂಜಿಲ್ಯಾಂಡ್ ಮಾಹಿತಿ

By

Published : Dec 9, 2020, 5:01 PM IST

ವೈರಸ್ ದೇಹದೊಳಕ್ಕೆ ಹೊಕ್ಕಿ ಕೆಲ ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆಟಗಾರರು ನ್ಯೂಜಿಲ್ಯಾಂಡ್​ಗೆ ಆಗಮಿಸುವ ಮೊದಲು ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ..

Pakistani players likely contracted COVID before travelling to NZ
ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಕೊರೊನಾ ಸೋಂಕು

ವೆಲ್ಲಿಂಗ್ಟನ್ :ನ್ಯೂಜಿಲ್ಯಾಂಡ್​ಗೆ ಆಗಮಿಸಿದ ಪಾಕ್‌ ಆಟಗಾರರ ಪೈಕಿ ಆರು ಮಂದಿಗೆ ಪಾಕಿಸ್ತಾನ ಅಥವಾ ಪ್ರಯಾಣದ ಸಮಯದಲ್ಲಿ ಕೋವಿಡ್ ಸೋಂಕು ತಗುಲಿರಬಹುದು ಎಂದು ನ್ಯೂಜಿಲ್ಯಾಂಡ್ ಸಾರ್ವಜನಿಕ ಆರೋಗ್ಯ ನಿರ್ದೇಶಕಿ ಡಾ. ಕ್ಯಾರೋಲಿನ್ ಮೆಕ್ಎನ್ಲೆ ಹೇಳಿದ್ದಾರೆ.

ಪಾಕಿಸ್ತಾನ ಆಟಗಾರರು ನ್ಯೂಜಿಲೆಂಡ್‌ಗೆ ಆಗಮಿಸುವ ಮೊದಲು ಕೋವಿಡ್ ಸಂಬಂಧಿತ ಎಲ್ಲಾ ಆರೋಗ್ಯ ಪ್ರೋಟೋಕಾಲ್‌ಗಳನ್ನು ಪೂರೈಸಿದ್ದರೂ ಸಹ, ಮಾರಣಾಂತಿಕ ವೈರಸ್ ಆರು ಕ್ರಿಕೆಟಿಗರ ದೇಹ ಹೊಕ್ಕಿರಬಹುದು ಎಂದು ಮ್ಯಾಕ್ಎನ್ಲೇ ಹೇಳಿದ್ದಾರೆ. ವೈರಸ್ ದೇಹದೊಳಕ್ಕೆ ಹೊಕ್ಕಿ ಕೆಲ ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆಟಗಾರರು ನ್ಯೂಜಿಲ್ಯಾಂಡ್​ಗೆ ಆಗಮಿಸುವ ಮೊದಲು ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.

ಓದಿ5ನೇ ಕೋವಿಡ್ ಟೆಸ್ಟ್​ನಲ್ಲಿ ನೆಗೆಟಿವ್​: ಐಸೊಲೇಷನ್​ ಮುಗಿಸಿ ಅಭ್ಯಾಸಕ್ಕೆ ಸಜ್ಜಾದ ಪಾಕ್​ ತಂಡ

54 ಸದಸ್ಯರ ಪೈಕಿ, ಒಬ್ಬ ಸದಸ್ಯರು ಆಕ್ಲೆಂಡ್‌ಗೆ ಆಗಮಿಸಿದಾಗ ರೋಗಲಕ್ಷಣವನ್ನು ಹೊಂದಿದ್ದರು. ಅವರನ್ನು ಆಕ್ಲೆಂಡ್‌ನ ಕ್ವಾರಂಟೈನ್ ಹೋಟೆಲ್‌ಗೆ ಕರೆದೊಯ್ಯಲಾಯಿತು. ಉಳಿದ 53 ಸದಸ್ಯರು ಕ್ರೈಸ್ಟ್‌ಚರ್ಚ್‌ ಮತ್ತು ಚಟೌ ಪಾರ್ಕ್‌ನಲ್ಲಿ ಪ್ರತ್ಯೇಕ ಉಳಿಯಲು ವ್ಯವಸ್ಥೆ ಮಾಡಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಪಾಕಿಸ್ತಾನ ತಂಡ ಕ್ವೀನ್ಸ್​ಟೌನ್​ನಲ್ಲಿ ಟೆಸ್ಟ್​ ಮತ್ತು ಟಿ20 ಸರಣಿಗಾಗಿ ಅಭ್ಯಾಸ ನಡೆಸುತ್ತಿದ್ದು, ಡಿಸೆಂಬರ್​ 18ರಂದು ಈಡನ್ ಪಾರ್ಕ್​ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.

ABOUT THE AUTHOR

...view details